ಫೆಬ್ರವರಿ 23ಕ್ಕೆ ಟಾರ್ಗೆಟ್ ಮಾಡಿದ ಡಿ ಬಾಸ್ ಅಭಿಮಾನಿಗಳು, ಕಾರಣವೇನು?

Recommended Video

Yajamana Movie: ಶ್ರೀಘ್ರದಲ್ಲೇ ಯಜಮಾನ ನೋಡುವ ಅವಕಾಶ ನಿಮ್ಮದಾಗಲಿದೆ | FILMIBEAT KANNADA

ಚಾಲೆಂಜಿಂಗ್ ಸ್ಟಾರ್ ಅಭಿನಯದ ಬಹುನಿರೀಕ್ಷೆಯ ಯಜಮಾನ ಚಿತ್ರ ಮಾರ್ಚ್ 1 ರಂದು ಬಿಡುಗಡೆಯಾಗುತ್ತಿದೆ. ಆದ್ರೆ, ಡಿ ಬಾಸ್ ಅಭಿಮಾನಿಗಳು ಫೆಬ್ರವರಿ 23ನ್ನ ಟಾರ್ಗೆಟ್ ಮಾಡಿದ್ದಾರೆ.

ಅರೇ, ಇದೇನಪ್ಪಾ ಮಾರ್ಚ್ 1ಕ್ಕೆ ಯಜಮಾನ ಬರ್ತಿದ್ರೆ ಫೆಬ್ರವರಿ 23ಕ್ಕೆ ಏನು ವಿಶೇಷ ಅಂತಾ ಯೋಚನೆ ಮಾಡ್ತಿದ್ದೀರಾ. ಹಬ್ಬ ಮಾರ್ಚ್ 1ಕ್ಕೆ, ಆದ್ರೆ, ಹಬ್ಬಕ್ಕೆ ಟಿಕೆಟ್ ಬುಕ್ ಮಾಡೋಕೆ ಫೆಬ್ರವರಿ 23 ಮುಹೂರ್ತ ಆಗಿದೆ.

ಹೌದು, ಯಜಮಾನ ಚಿತ್ರದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಈ ವಾರಾಂತ್ಯದಲ್ಲಿ ಅವಕಾಶ ಮಾಡಿಕೊಡಲಾಗುತ್ತಿದ್ದು, ಸದ್ಯದ ಮಾಹಿತಿಯ ಪ್ರಕಾರ ಫೆಬ್ರವರಿ 23ಕ್ಕೆ ಬುಕ್ ಮಾಡಬಹುದಂತೆ.

Yajamana Advance Bookings for this Weekend

ಮೆಜೆಸ್ಟಿಕ್ ನಲ್ಲಿರುವ ನರ್ತಕಿ ಚಿತ್ರಮಂದಿರ ಯಜಮಾನ ಚಿತ್ರಕ್ಕೆ ಮುಖ್ಯ ಚಿತ್ರಮಂದಿರವಾಗಿದೆ. ಅದರ ಜೊತೆ ವಿರೇಶ್ ಚಿತ್ರಮಂದಿರದಲ್ಲೂ ಯಜಮಾನ ಬರೋದು ಖಚಿತವಾಗಿದೆ. ಇನ್ನುಳಿದಂತೆ ಯಾವ ಯಾವ ಚಿತ್ರಮಂದಿರದಲ್ಲಿ ದರ್ಶನ್ ದರ್ಶನವಾಗಲಿದೆ ಎಂದು ಕಾದುನೋಡಬೇಕಿದೆ.

ಹರಿಕೃಷ್ಣ-ಪಿ.ಕುಮಾರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಶೈಲಜಾ ನಾಗ್ ನಿರ್ಮಾಣ ಮಾಡಿದ್ದಾರೆ. ದರ್ಶನ್ ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ, ತಾನ್ಯ ಹೋಪ್ ನಟಿಸಿದ್ದು, ಧನಂಜಯ್, ರವಿಶಂಕರ್, ಠಾಕೂರ್ ಅನೂಪ್ ಸಿಂಗ್, ಸಾಧುಕೋಕಿಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

More from Filmibeat

English summary
Most Expected Movie Yajamana All Set for a Grand Worldwide Release From March 1. Advance Bookings for Yajamana will be Open this Weekend.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X