For Quick Alerts
  ALLOW NOTIFICATIONS  
  For Daily Alerts

  ಸಂಕ್ರಾಂತಿಗೆ ವಿಶೇಷ ಉಡುಗೊರೆ ನೀಡಲಿದ್ದಾರೆ 'ಯಜಮಾನ'

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರದ ಶೂಟಿಂಗ್ ಮುಗಿದಿದೆ. ಅಂತಿಮವಾಗಿ ಉಳಿದುಕೊಂಡಿದ್ದ ಹಾಡಿನ ಚಿತ್ರೀಕರಣ ಮುಗಿಸಿರುವ ಯಜಮಾನ ಈಗ ಸಂಕ್ರಾಂತಿಗೆ ವಿಶೇಷ ಉಡುಗೊರೆ ನೀಡಲು ಸಜ್ಜಾಗಿದ್ದಾನೆ.

  ಹೌದು, ಸಂಕ್ರಾಂತಿ ಹಬ್ಬಕ್ಕೆ ಯಜಮಾನ ಚಿತ್ರದ ಮೊದಲ ಹಾಡು ಬರುವ ಸಾಧ್ಯತೆ ಇದೆ. ಈಗಾಗಲೇ ಚಿತ್ರದ ಹಾಡಿನ ಮಿಕ್ಸಿಂಗ್ ಕೆಲಸ ಶುರುವಾಗಿದ್ದು, ಜನವರಿ 15ಕ್ಕೆ ಮೊದಲ ಹಾಡು ಬರಲಿದೆಯಂತೆ.

  ಅಂಬಿ ಪುತ್ರ ಅಭಿಷೇಕ್ ಮತ್ತು 'ದೊಡ್ಮಗ' ದರ್ಶನ್ ಕೊಟ್ರು ಬ್ರೇಕಿಂಗ್ ನ್ಯೂಸ್ಅಂಬಿ ಪುತ್ರ ಅಭಿಷೇಕ್ ಮತ್ತು 'ದೊಡ್ಮಗ' ದರ್ಶನ್ ಕೊಟ್ರು ಬ್ರೇಕಿಂಗ್ ನ್ಯೂಸ್

  ಹರಿಕೃಷ್ಣ ಚಿತ್ರಕ್ಕೆ ಸಂಗೀತ ನೀಡಿದ್ದು, ದರ್ಶನ್ ಮತ್ತು ಹರಿ ಕಾಂಬಿನೇಷನ್ 25ನೇ ಸಿನಿಮಾ ಇದಾಗಿದೆ. ಹೀಗಾಗಿ, ಈ ಆಲ್ಬಂ ಮೇಲೆ ನಿರೀಕ್ಷೆ ಹೆಚ್ಚಿದೆ.

  ಸಂಕ್ರಾಂತಿಗೆ ಮೊದಲ ಹಾಡು ಬಂದ್ರೆ, ಅಲ್ಲಿಂದ ಪ್ರತಿ ಎರಡು ಅಥವಾ ಮೂರು ದಿನಕ್ಕೊಮ್ಮೆ ಉಳಿದ ಒಂದೊಂದೆ ಹಾಡುಗಳನ್ನ ರಿಲೀಸ್ ಮಾಡುವ ಯೋಚನೆ ಹೊಂದಿದ್ದಾರಂತೆ.

  ಸೆನ್ಸಾರ್ ಆಗಿದ್ದರೂ, 'ಕುರುಕ್ಷೇತ್ರ' ದರ್ಶನ ಸದ್ಯಕ್ಕಿಲ್ಲ.! ಸೆನ್ಸಾರ್ ಆಗಿದ್ದರೂ, 'ಕುರುಕ್ಷೇತ್ರ' ದರ್ಶನ ಸದ್ಯಕ್ಕಿಲ್ಲ.!

  ಇನ್ನುಳಿದಂತೆ ಪಿ ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಶೈಲಾಜ್ ನಾಗ್ ನಿರ್ಮಾಣ ಮಾಡಿದ್ದಾರೆ. ದರ್ಶನ್ ಗೆ ನಾಯಕಿಯಾಗಿರಾಗಿ ತಾನ್ಯ ಹೋಪ್ ಮತ್ತು ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ.

  ಸದ್ಯ, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಿರು ಚಿತ್ರತಂಡ ಆದಷ್ಟೂ ಬೇಗ ತೆರೆಗೆ ತರುವ ಸಾಧ್ಯತೆ ಇದೆ.

  English summary
  Challenging stars darshan starrer Yajamana movie begins his musical journey on sankranti with the first song shivanandi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X