'KGF-2' ಕ್ಲೈಮ್ಯಾಕ್ಸ್ ನಲ್ಲಿ ಯಶ್-ಸಂಜಯ್ ದತ್ ಬೇರ್ ಬಾಡಿ ಫೈಟ್
Recommended Video

ಸ್ಯಾಂಡಲ್ ವುಡ್ ಮಾತ್ರವಲ್ಲದೆ ಭಾರತೀಯ ಚಿತ್ರರಂಗವೇ ಕಾತರ, ಕುತೂಹಲದಿಂದ ಕಾಯುತ್ತಿರುವ ಸಿನಿಮಾ ಕೆಜಿಎಫ್-2. ಈಗಾಗಲೆ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಬಾಲಿವುಡ್ ಮುನ್ನಾಬಾಯ್ ಎಂಟ್ರಿ ಕೊಟ್ಟ ಮೇಲೆ ಚಿತ್ರದ ಮೇಲಿದ್ದ ನಿರೀಕ್ಷೆ ಮತ್ತೊಂದು ಲೆವೆಲ್ ಗೆ ಹೋಗಿದೆ.
ಚಿತ್ರದಲ್ಲಿ ಸಂಜಯ್ ದತ್ ಭಯಾನಕ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ರಾಕಿ ಭಾಯ್ ಮತ್ತು ಮುನ್ನ ಭಾಯ್ ನಡುವಿನ ಫೈಟ್ ನೋಡಲು ಅಭಿಮಾನಿಗಳು ಉಹಿಸಿರುಬಿಗಿಹಿಡಿದು ಕಾಯುತ್ತಿದ್ದಾರೆ. ಕೆಜಿಎಫ್-2ನಲ್ಲಿ ಸಾಕಷ್ಟು ಫೈಟ್ ದೃಶ್ಯಗಳಿವೆಯಂತೆ. ಸದ್ಯ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ಗೆ ಎಲ್ಲಾ ತಯಾರಿ ಮಾಡಿಕೊಳ್ಳಲಾಗುತ್ತಿದಂತೆ.

ಬಹುಕೋಟಿ ವೆಚ್ಚಿದಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್
ಕೆಜಿಎಫ್-2 ಸಿನಿಮಾದ ಕ್ಲೈಮ್ಯಾಕ್ಸ್ ಹೇಗಿರಲಿದೆ ಎನ್ನುವ ಕುತೂಹಲ ಕೊಟ್ಯಾಂತರ ಅಭಿಮಾನಿಗಳಲ್ಲಿದೆ. ಬಹುಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ಕೆಜಿಎಫ್-2 ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಕ್ಕಾಗಿಯೆ ಕೋಟಿ ಕೋಟಿ ಖರ್ಚು ಮಾಡುಲಾಗುತ್ತಿದೆಯಂತೆ. ಬಹು ಕೋಟಿ ವೆಚ್ಚದಲ್ಲಿ ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡಲಾಗುತ್ತಿದೆಯಂತೆ.

ಕ್ಲೈಮ್ಯಾಕ್ಸ್ ನಲ್ಲಿ ಬೇರ್ ಬಾಡಿ ಫೈಟ್
ವಿಶೇಷ ಅಂದರೆ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಸಂಜಯ್ ದತ್ ಮತ್ತು ಯಶ್ ನಡುವೆ ಭಯಾನಕ ಫೈಟ್ ದೃಶ್ಯವಿದೆಯಂತೆ. ಈ ಫೈಟ್ ನಲ್ಲಿ ಯಶ್ ಮತ್ತು ಸಂಜಯ್ ದತ್ ಇಬ್ಬರು ಶರ್ಟ್ ಲೆಸ್ ಕಾದಾಟ ಮಾಡಲಿದ್ದಾರಂತೆ. ಇಬ್ಬರು ಸ್ಟಾರ್ ನಟರು ಸಿಕ್ಸ್ ಪ್ಯಾಕ್ ಪ್ರದರ್ಶನ ಮಾಡುವ ಆಕ್ಷನ್ ದೃಶ್ಯ ಹೇಗಿರಲಿದೆ ಎಂದು ನೋಡಲು ಇನ್ನು ಸಾಕಷ್ಟು ಸಮಯ ಕಾಯಬೇಕು.

ಕ್ಲೈಮ್ಯಾಕ್ಸ್ ಗಾಗಿ ಭರ್ಜರಿ ತಯಾರಿ
ಭಯಾನಂಕವಾಗಿರುವ ಕ್ಲೈ ಶೂಟ್ ಗಾಗಿ ಯಶ್ ಮತ್ತು ಸಂಜಯ್ ದತ್ ಇಬ್ಬರು ವಿಶೇಷ ತರಬೇತಿ ಪಡೆದಿದ್ದಾರಂತೆ. ಸಧ್ಯದಲ್ಲೇ ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡಲಿದೆಯಂತೆ. ಈಗಾಗಲೆ ಬಾಲಿವುಡ್ ನಟಿ ರವೀನಾ ಟಂಡನ್ ಎಂಟ್ರಿ ಕೊಟ್ಟಿದ್ದಾರೆ. ರವೀನಾ ಮತ್ತು ಯಶ್ ನಡುವಿನ ರೋಚಕ ದೃಶ್ಯಗಳನ್ನು ಸದ್ಯ ಚಿತ್ರೀಕರಣ ಮಾಡಲಾಗುತ್ತಿದೆ.

ಯಾವಾಗ ಬಿಡುಗಡೆ?
ಕೆಜಿಎಫ್-2 ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಎಂದು ಅಭಿಮಾನಿಗಳು ಉಸಿರು ಬಿಡಿಹಿಡಿದು ಕಾಯುತ್ತಿದ್ದಾರೆ. ಈ ಮೊದಲು ಚಿತ್ರವನ್ನು ಬೇಸಿಗೆ ರಜೆಯ ಸಮಯದಲ್ಲಿ ತೆರೆಗೆ ತರುವ ಪ್ಲಾನ್ ಮಾಡಿತ್ತು ಚಿತ್ರತಂಡ. ಆದರೆ ಚಿತ್ರೀಕರಣ ತಡವಾದ ಕಾರಣ ರಿಲೀಸ್ ಡೇಟ್ ಮುಂದಕ್ಕೆ ಹೋಗಿದ್ದು, ಅಕ್ಟೋಬರ್ ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.


Click it and Unblock the Notifications











