ಪ್ರಭಾಸ್ 'ಸಲಾರ್'ನಲ್ಲಿ ಯಶ್ 10 ನಿಮಿಷದ ಅತಿಥಿ ಪಾತ್ರ?

ನಟ ರಾಕಿಂಗ್ ಸ್ಟಾರ್ ಯಶ್, ಪ್ರಭಾಸ್ ಭಾರತೀಯ ಚಿತ್ರರಂಗದ ಸ್ಟಾರ್ ನಟರ ಸ್ಥಾನದಲ್ಲಿ ಇದ್ದಾರೆ. ಒಂದು ಕಡೆ ನಟ ಪ್ರಭಾಸ್ ಬಾಹುಬಲಿ ಚಿತ್ರದ ಮೂಲಕ ದಾಖಲೆಯನ್ನು ಬರೆದರೆ, ಮತ್ತೊಂದು ಕಡೆ ಯಶ್ ಕೆಜಿಎಫ್ ಮೂಲಕ ದಾಖಲೆ ಮಾಡಿದ್ದಾರೆ.

'ಬಾಹುಬಲಿ' ಸಿನಿಮಾ ಮೂಲಕ ಅತಿಹೆಚ್ಚು ಬಾಕ್ಸಾಫೀಸ್ ಗಳಿಕೆ ಕಂಡು, ನಟ ಪ್ರಭಾಸದ ಟಾಪ್‌ನಲ್ಲಿ ಇದ್ದಾರೆ. ಇತ್ತ ಯಶ್ ನಟನೆಯ 'ಕೆಜಿಎಫ್ 2' ಸಿನಿಮಾ ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಭಾರತೀಯ ಸ್ಟಾರ್ ನಟನಾಗಿ ಮಿಂಚುತ್ತಿದ್ದಾರೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಮಾಡಿದ ಈ ತಾರೆಯರು ಒಟ್ಟಿಗೆ ಕಾಣಿಸಿಕೊಂಡಿದ್ದು, ಸಲಾರ್ ಚಿತ್ರದ ಮುಹೂರ್ಥದಲ್ಲಿ. ಆದರೆ ಈ ಜೋಡಿಯ ಬಗ್ಗೆ ಈಗ ಹೊಸದೊಂದು ಸಿನಿಮಾ ಸುದ್ದಿ ಹರಿದಾಡುತ್ತಿದೆ. ನಟ ಯಶ್ ಮತ್ತು ಪ್ರಭಾಸ್ ಒಂದೆ ಸಿನಿಮಾದಲ್ಲಿ ಇರಲಿದ್ದಾರೆ ಎನ್ನು ಬಗ್ಗೆ ಸುದ್ದಿ ಹಬ್ಬಿದೆ.

'ಸಲಾರ್'ನಲ್ಲಿ ಯಶ್ ಅತಿಥಿ ಪಾತ್ರ!

'ಸಲಾರ್'ನಲ್ಲಿ ಯಶ್ ಅತಿಥಿ ಪಾತ್ರ!

ಮೂಲಗಳ ಮಾಹಿತಿಯಂತೆ, ನಟ ಯಶ್ ಪ್ರಭಾಸ್ ಜೊತೆಗೆ ತೆರೆಹಂಚಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತ ಇರುವ ಸಲಾರ್ ಸಿನಿಮಾದಲ್ಲಿ ನಟ ಯಶ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಪ್ರಭಾಸ್ ಸಲಾರ್ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಯಶ್ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸಲಾರ್‌ನಲ್ಲಿ ಯಶ್ 10 ನಿಮಿಷ!

ಸಲಾರ್‌ನಲ್ಲಿ ಯಶ್ 10 ನಿಮಿಷ!

ಹೌದು ಸದ್ಯ ಟಾಲಿವುಡ್‌ನಲ್ಲಿ ಹೀಗೊಂದು ಸುದ್ದಿ ಹಬ್ಬಿದೆ. ನಟ ರಾಕಿಂಗ್ ಸ್ಟಾರ್ ಯಶ್, ಪ್ರಭಾಸ್ ಜೊತೆಗೆ ಸಲಾರ್ ಸಿನಿಮಾದಲ್ಲಿ ತೆರೆಹಂಚಿಕೊಳ್ಳುತ್ತಾರಂತೆ. ಸಲಾರ್ ಸಿನಿಮಾದಲ್ಲಿ ಯಶ್ ಪಾತ್ರ 10 ನಿಮಿಷಗಳ ಕಾಲ ಇರಲಿದೆಯಂತೆ. ಈ ಪಾತ್ರದ ಚಿತ್ರೀಕರಣ ಸದ್ಯದಲ್ಲಿಯೇ ಆರಂಭವಾಗಲಿದೆ ಎನ್ನಲಾಗುತ್ತಿದೆ. ಇದೇ ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ನಟ ಯಶ್ ಸಲಾರ್ ಶೂಟಿಂಗ್ ಆರಂಭಿಸಲಿದ್ದಾರಂತೆ. ಇದು ಟಾಲಿವುಡ್‌ನಲ್ಲಿ ಹರಿದಡುತ್ತಿರುವ ಗಾಳಿಸುದ್ದಿ. ಆದರೆ ಈ ಬಗ್ಗೆ ಚಿತ್ರತಂಡ ಅಧೀಕೃತವಾಗಿ ಏನನ್ನು ಹೇಳಿಕೊಂಡಿಲ್ಲ.

ಪ್ರಭಾಸ್ ಹಲವು ಚಿತ್ರಗಳಲ್ಲಿ ಬ್ಯುಸಿ!

ಪ್ರಭಾಸ್ ಹಲವು ಚಿತ್ರಗಳಲ್ಲಿ ಬ್ಯುಸಿ!

ನಟ ಪ್ರಭಾಸ್ ಕೈಯಲ್ಲಿ ಸದ್ಯ ಸಾಲು, ಸಾಲು ಸಿನಿಮಾಗಳಿಗೆ. ಒಂದಾದ ಬಳಿಕ ಒಂದು ಪ್ರಭಾಸ್ ಸಿನಿಮಾಗಳು ರಿಲೀಸ್ ಆಗಲಿವೆ. ಸದ್ಯ ಸಲಾರ್, ಆದಿಪುಷ್, ಪ್ರಾಜೆಕ್ಟ್ ಸಿನಿಮಾಗಳಲ್ಲು ಪ್ರಭಾಸ್ ನಿರತವಾಗಿದ್ದಾರೆ. ಇನ್ನುಳಿದಂತೆ ಈ ಚಿತ್ರಗಳ ಬಳಿಕ ರಾಜ ಡಿಲಕ್ಸ್, ಸ್ಪಿರಿಟ್ ಸಿನಿಮಾಗಳನ್ನು ಕೈಗೆತ್ತಿಕೊಳ್ಳಲಿದ್ದಾರೆ ಪ್ರಭಾಸ್. ಮುಂದಿನ ವರ್ಷ ಪ್ರಭಾಸ್ ಸಿನಿಮಾಗಳದ್ದೇ ಅಬ್ಬರ ಇರುತ್ತೆ.

ಮುಂದಿನ ಚಿತ್ರಕ್ಕೆ ಯಶ್ ತಯಾರಿ!

ಮುಂದಿನ ಚಿತ್ರಕ್ಕೆ ಯಶ್ ತಯಾರಿ!

ಇನ್ನು ರಾಕಿಂಗ್ ಸ್ಟಾರ್ ಯಶ್ ವಿಚಾರಕ್ಕೆ ಬರುವುದಾದರೆ. 'ಕೆಜಿಎಫ್ 2' ಬಳಿಕ ಯಶ್ ಯಾವ ಸಿನಿಮಾ ಮಾಡುತ್ತಾರೆ ಎನ್ನುವ ಕುತೂಹಲ ಹೆಚ್ಚಿದೆ. ಒಂದು ಕಡೆ ಕೆಜಿಎಫ್ 3 ಸಿನಿಮಾ ಮಾಡುವ ಬಗ್ಗೆ ಸುದ್ದಿ ಹಬ್ಬಿದರೆ, ಮತ್ತೊಂದು ಕಡೆ ನಿರ್ದೇಶಕ ನರ್ತನ್ ಜೊತೆಗೆ ಸಿನಿಮಾ ಮಾಡುತ್ತಾರೆ ಎನ್ನಲಾಗುತ್ತಿದೆ. ಆದರೆ ಇನ್ನೂ ಯಾವ ಸಿನಿಮಾ ಎನ್ನುವುದು ಖಚಿತವಾಗಿಲ್ಲ.

More from Filmibeat

English summary
Yash Doing Cameo In Prabhas Starrer Salaar For 10 minute, Know More Details,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X