For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ ನಂತರ ಸ್ಟಾರ್ ನಿರ್ದೇಶಕನ ಜೊತೆ ರಾಕಿಂಗ್ ಸ್ಟಾರ್ ಚಿತ್ರ!

  |

  'ಕೆಜಿಎಫ್ ಚಾಪ್ಟರ್-2' ಸಿನಿಮಾದ ಬಳಿಕ ನಿರ್ದೇಶಕ ಪ್ರಶಾಂತ್ ನೀಲ್ ತೆಲುಗು ನಟ ಪ್ರಭಾಸ್ ಜೊತೆ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಹೊಂಬಾಳೆ ಫಿಲಂಸ್ ಸಂಸ್ಥೆ ಈ ಚಿತ್ರ ನಿರ್ಮಾಣ ಮಾಡುತ್ತಿದೆ ಎಂದು ಅಧಿಕೃತ ಪಡಿಸಿದೆ.

  ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆ ಕಾಡುತ್ತಿದೆ. ಪರಭಾಷೆಯ ಸ್ಟಾರ್ ನಿರ್ದೇಶಕರು ಯಶ್ ಅವರ ಕಾಲ್‌ಶೀಟ್‌ ಪಡೆಯಲು ಪ್ರಯತ್ನಿಸಿದ್ದು, ಯಶ್ ಮುಂದಿನ ಸಿನಿಮಾ ಪ್ಯಾನ್ ಇಂಡಿಯಾ ಚಿತ್ರವಾಗಲಿದೆ ಎಂದು ಹೇಳಲಾಗಿದೆ. ಆದ್ರೀಗ, ಕನ್ನಡದ ನಿರ್ದೇಶಕರ ಜೊತೆಯೇ ಯಶ್ ತಮ್ಮ ಮುಂದಿನ ಸಿನಿಮಾ ಮಾಡುವ ತಯಾರಿ ನಡೆಸಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಮುಂದೆ ಓದಿ...

  ನರ್ತನ್ ಜೊತೆ ಯಶ್ ಸಿನಿಮಾ!

  ನರ್ತನ್ ಜೊತೆ ಯಶ್ ಸಿನಿಮಾ!

  'ಮಫ್ತಿ' ಚಿತ್ರದ ಯಶಸ್ಸಿನ ಬಳಿಕ ನಿರ್ದೇಶಕ ನರ್ತನ್ ರಾಕಿಂಗ್ ಸ್ಟಾರ್ ಯಶ್‌ಗೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಚರ್ಚೆಯಲ್ಲಿದೆ. ಈ ಸಂಬಂಧ ನರ್ತನ್ ಮತ್ತು ಯಶ್ ಇಬ್ಬರು ಭೇಟಿ ಮಾಡಿ ಚರ್ಚೆ ನಡೆಸಿದ್ದು, ಸಿದ್ಧತೆ ಸಹ ಮಾಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಬಹಿರಂಗವಾಗಿದೆ.

  ಪ್ಯಾನ್ ಇಂಡಿಯಾ ಚರ್ಚೆಯ ನಂತರ ಯಶ್ ಬಗ್ಗೆ ಜಗ್ಗೇಶ್ ಟ್ವೀಟ್

  ಪ್ಯಾನ್ ಇಂಡಿಯಾ ಸಿನಿಮಾ!

  ಪ್ಯಾನ್ ಇಂಡಿಯಾ ಸಿನಿಮಾ!

  ಕೆಜಿಎಫ್ ಸ್ಟಾರ್ ಮತ್ತು ನರ್ತನ್ ಕಾಂಬಿನೇಷನ್‌ನಲ್ಲಿ ಮೂಡಿ ಬರಲಿದೆ ಎಂದು ಹೇಳಲಾಗುತ್ತಿರುವ ಚಿತ್ರ ಪ್ಯಾನ್ ಇಂಡಿಯಾ ಬಿಡುಗಡೆಯಾಗಲಿದೆಯಂತೆ. ಕೆಜಿಎಫ್ ಬಳಿಕ ನ್ಯಾಷನಲ್ ಸ್ಟಾರ್ ಎನಿಸಿಕೊಂಡಿರುವ ಯಶ್ ಅವರ ಇಮೇಜ್ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ನಟನ ಮೇಲಿದ್ದು ಹಾಗಾಗಿ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಮಾಡುವ ಬಗ್ಗೆ ಆಸಕ್ತಿ ಹೊಂದಿದ್ದಾರೆ.

  'ಮಫ್ತಿ' ರೀಮೇಕ್‌ನಿಂದ ಹೊರಬಂದ ನರ್ತನ್

  'ಮಫ್ತಿ' ರೀಮೇಕ್‌ನಿಂದ ಹೊರಬಂದ ನರ್ತನ್

  ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯಲ್ಲಿ ಬಂದಿದ್ದ ಮಫ್ತಿ ಸಿನಿಮಾವನ್ನು ತಮಿಳಿನಲ್ಲಿ ರೀಮೇಕ್ ಮಾಡಲಾಗುತ್ತಿದೆ. ತಮಿಳಿನಲ್ಲಿ ಈ ಚಿತ್ರಕ್ಕೆ ನರ್ತನ್ ಆಕ್ಷನ್ ಕಟ್ ಹೇಳಬೇಕಿತ್ತು. ಆದ್ರೆ, ಅಂತಿಮ ಹಂತದಲ್ಲಿ ನರ್ತನ್ ಈ ಪ್ರಾಜೆಕ್ಟ್‌ನಿಂದ ಹೊರಬಂದಿದ್ದಾರೆ.

  ಕನ್ನಡ ನಿರ್ದೇಶಕರ ಜೊತೆ ಯಶ್ ಮುಂದಿನ ಸಿನಿಮಾ: ಇವರಲ್ಲಿ ರಾಕಿ ಭಾಯ್ ಗೆ ನಾಯಕಿ ಯಾರಾಗ್ತಾರೆ?

  Prashant Neal ಗೆ ಕ್ಲಾಸ್ ತೆಗೆದುಕೊಂಡ ಕನ್ನಡಿಗರು | Hombale Films | Filmibeat Kannada
  ಡಿಸೆಂಬರ್‌ನಲ್ಲಿ ಕೆಜಿಎಫ್ ಮುಕ್ತಾಯ?

  ಡಿಸೆಂಬರ್‌ನಲ್ಲಿ ಕೆಜಿಎಫ್ ಮುಕ್ತಾಯ?

  ಪ್ರಸ್ತುತ ಹೈದರಾಬಾದ್‌ನಲ್ಲಿ ಕೆಜಿಎಫ್ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ನಟ ಯಶ್, ಸಂಜಯ್ ದತ್ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ. ನಿರ್ದೇಶಕರ ಪ್ಲಾನ್ ಪ್ರಕಾರ ಡಿಸೆಂಬರ್ ತಿಂಗಳಲ್ಲಿ ಚಾಪ್ಟರ್ 2 ಚಿತ್ರೀಕರಣ ಮುಕ್ತಾಯವಾಗಲಿದೆ. ಜನವರಿ ನಂತರ ಯಶ್ ಹೊಸ ಪ್ರಾಜೆಕ್ಟ್‌ಗೆ ಚಾಲನೆ ನೀಡುವ ಸಾಧ್ಯತೆ ಇದೆ. ಸದ್ಯಕ್ಕೆ ಯಶ್ ಮತ್ತು ನರ್ತನ್ ಪ್ರಾಜೆಕ್ಟ್ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.

  ಯಶ್ ಜತೆ ಮುಂದಿನ ಸಿನಿಮಾ ಸುದ್ದಿ: ನಿರ್ದೇಶಕ ನರ್ತನ್ ಹೇಳಿದ್ದೇನು?

  English summary
  After KGF chapter 2, Rocking star Yash looks to collaborate with director Narthan for a pan-Indian film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X