'ಆರ್‌ಆರ್‌ಆರ್' ಸ್ಥಾನಕ್ಕೆ 'ಅಖಂಡ': ಬೋಯಪಾಟಿ-ಯಶ್ ಕಾಂಬಿನೇಷನ್ ಸಿನಿಮಾ?

By ರವೀಂದ್ರ ಕೊಟಕಿ

ಕರೋನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ದೊಡ್ಡ ಬಜೆಟ್ಟಿನ ಯಾವುದೇ ಚಿತ್ರಗಳುಬಿಡುಗಡೆಯಾಗುತ್ತಿಲ್ಲ. ಬಹುನಿರೀಕ್ಷಿತ 'ಕೆಜಿಎಫ್-2' ಮುಂದಿನ ವರ್ಷದ ಎಪ್ರಿಲ್‌ಗೆ ತನ್ನ ಸ್ಥಾನ ಭದ್ರ ಪಡಿಸಿಕೊಂಡಿದೆ.

ಮತ್ತೊಂದು ಬಹುನಿರೀಕ್ಷಿತ ರಾಜಮೌಳಿ ಅವರ 'ಆರ್‌ಆರ್‌ಆರ್' ಚಿತ್ರ ಇದೇ ವರ್ಷದ ದಸರಾ ಸಮಯದಲ್ಲಿ (ಅಕ್ಟೋಬರ್ 13) ಬಿಡುಗಡೆಯಾಗಬೇಕಿತ್ತು ಆದರೆ ಈಗ ಅದು ಕೂಡ ಮುಂದಿನ ವರ್ಷಕ್ಕೆ ಶಿಫ್ಟ್ ಆಗಿದೆ. ಇದೇ ಅವಕಾಶಕ್ಕಾಗಿ ಕಾದುಕುಳಿತಿದ್ದ "ಅಖಂಡ" ಚಿತ್ರತಂಡ ದಸರಾ ಹಬ್ಬದ ರಜೆಗಳನ್ನು ಸದುಪಯೋಗಪಡಿಸಿಕೊಳ್ಳಲು ಮುಂದಾಗಿದೆ. ಹೀಗಾಗಿ ದಸರಾ ಸಮಯವನ್ನು ಪುರಸ್ಕರಿಸಿ ಕೊಂಡು ಚಲನಚಿತ್ರವನ್ನು ಅಕ್ಟೋಬರ್ 13ರಂದು ಬಿಡುಗಡೆ ಮಾಡಲು ಮುಂದಾಗಿದೆ.

ಬಹುನಿರೀಕ್ಷಿತ 'ಅಖಂಡ'

ಅಖಂಡ ಬಾಲಕೃಷ್ಣ-ಬೋಯ ಪಾಟಿ ಸೀನು ಕಾಂಬಿನೇಷನ್‌ನಲ್ಲಿ ಬರುತ್ತಿರುವ ಮೂಡಿಬರುತ್ತಿರುವ ಮೂರನೆಯ ಚಿತ್ರ. ಹಿಂದಿನ ಎರಡು ಚಿತ್ರಗಳಾದ ಸಿಂಹ ಮತ್ತು ಲೆಜೆಂಡ್ ಸೂಪರ್ ಹಿಟ್ ಆಗಿತ್ತು.

Yash May Act In Boyapati Srinus New Movie

ಚಿತ್ರದ ಟೀಸರ್ ಈಗಾಗಲೇ ದೊಡ್ಡಮಟ್ಟದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಲ್ಚಲ್ ಮಾಡಿದೆ. ಶಿವ ಭಕ್ತನೊಬ್ಬನ ಶೌರ್ಯ ಪರಾಕ್ರಮ ಗಳನ್ನು ಆಧರಿಸಿ ಅಖಂಡ ಚಿತ್ರ ರೂಪಗೊಂಡಿದೆ.

ಬೋಯಪಾಟಿ-ಯಶ್ ಸಿನಿಮಾದ ಸಾಧ್ಯತೆಗಳು ಎಷ್ಟು?

ಕೆಜಿಎಫ್-2 ಇನ್ನು ಬಿಡುಗಡೆಗೊಂಡಿಲ್ಲ. ಇದರ ನಡುವೆ ಯಶ್ ಅವರ ಮುಂದಿನ ಚಿತ್ರ ಯಾವುದು? ಈ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಯಾರ ಬಳಿಯೂ ಇಲ್ಲ. ಒಂದಷ್ಟು ಸಮಯ ಯಶ್, ಪೂರಿ ಜಗನ್ನಾಥ್ ಅವರ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಗಾಳಿಸುದ್ದಿಗಳು ಹರಿದಾಡಿತ್ತು. ಆದರೆ ಅದು ತಣ್ಣಗಾದ ಮೇಲೆ 'ನರ್ತನ್- ಯಶ್' ಕಾಂಬಿನೇಷನ್ ಸುದ್ದಿಗಳು ಹರಿದಾಡಿತು. ಈಗ ಹರಿದಾಡುತ್ತಿರುವ ಹೊಸಸುದ್ದಿ ಬೋಯಪಾಟಿ ಸೀನು ಅವರು ಯಶ್ ಅವರಿಗೆ ಒನ್ ಲೈನ್ ಸ್ಟೋರಿ ಹೇಳಿದ್ದಾರೆ, ಅದಕ್ಕೆ ಯಶ್ ಅವರು ಮೆಚ್ಚುಗೆಯನ್ನು ಸೂಚಿಸಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅನ್ನುವ ಸುದ್ದಿ.

ಆದರೆ ಇದರ ಬಗ್ಗೆ ಯಾವುದೇ ಸ್ಪಷ್ಟವಾದ ಸುದ್ದಿ ಮಾತ್ರ ಎಲ್ಲೂ ಪ್ರಕಟವಾಗಿಲ್ಲ. ಯಶ್ ಅವರ ಮುಂದಿನ ಚಿತ್ರದ ಬಗ್ಗೆ ಎಷ್ಟೇ ಸುದ್ದಿಗಳು ಹರಿದಾಡಿದರೂ ಕೊನೆಗೆ ಯಶ್ ಅವರು ಅಧಿಕೃತವಾಗಿ ಘೋಷಿಸುವವರೆಗೂ ಯಾವುದೇ ಸುದ್ದಿ ಅಧಿಕೃತ ಅಂತ ಹೇಳಲು ಬರುವುದಿಲ್ಲ. ಅದರಲ್ಲೂ 'ಕೆಜಿಎಫ್ 2' ಚಿತ್ರದ ಬಿಡುಗಡೆ ನಂತರ ಯಶ್ ಅವರ ಮಾರ್ಕೆಟ್ ವ್ಯಾಲ್ಯೂ ಬಾಲಿವುಡ್ ಸೂಪರ್ ಸ್ಟಾರ್‌ಗಳ ಮಟ್ಟದಲ್ಲಿರುತ್ತದೆ. ಇಂತಹ ನಟನ ಜೊತೆ ಸಿನಿಮಾ ಮಾಡಲು ಎಲ್ಲಾ ಸಿನಿಮಾರಂಗದ ಟಾಪ್ ನಿರ್ದೇಶಕರು ಎದುರು ನೋಡುತ್ತಿದ್ದಾರೆ. ಏನೇಯಾಗಲಿ ಯಶ್ ಅವರ ಮುಂದಿನ ಚಿತ್ರ ಯಾವುದು ಎಂಬುದು ಮಾತ್ರ ಕೆಜಿಎಫ್ 2 ಚಿತ್ರದಷ್ಟೇ ಭಾರಿ ಸದ್ದು ಮಾಡುತ್ತಿದೆ!

More from Filmibeat

English summary
Actor Yash may act in Telugu movie director Boyapati Srinu's next movie. And RRR movie not releasing for Dasara, Balakrishna's Akhanda movie releasing taking place of RRR.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X