India
  For Quick Alerts
  ALLOW NOTIFICATIONS  
  For Daily Alerts

  'ಯಶ್' ಮುಂದಿನ ಸಿನಿಮಾ 'ಹೊಂಬಾಳೆ ಫಿಲ್ಮ್ಸ್' ನಿರ್ಮಾಣ!?

  |

  ಕೆಜಿಎಫ್ 2 ಸಿನಿಮಾದ ಬಳಿಕ ನಟ ರಾಕಿಂಗ್ ಸ್ಟಾರ್ ಯಶ್ ಅಕ್ಷರಶಃ ಚಿನ್ನ ತೆಗೆಯುವ ಗಣಿಯೇ ಆಗಿ ಬಿಟ್ಟಿದ್ದಾರೆ. ಯಾಕೆಂದರೆ ಯಶ್‌ಗೆ ಬಂಡವಾಳ ಹಾಕಿದರೆ ಅದು ದುಪ್ಪಟ್ಟು ಆಗುವುದಲ್ಲಿ ಅನುಮಾನವೇ ಇಲ್ಲ. ಅಷ್ಟರ ಮಟ್ಟಿಗೆ ಯಶ್ ಬೆಳೆದು ನಿಂತಿದ್ದಾರೆ.

  ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಹಾಗಾಗಿ ಯಶ್ ಸಿನಿಮಾ ಮಾಡಲು ನಿರ್ಮಾಪಕರು ಸಾಲು ಗಟ್ಟಿ ನಿಂತು ಬಿಟ್ಟಿದ್ದಾರೆ. ಇನ್ನು ಯಶ್ ಮುಂದಿನ ಸಿನಿಮಾದ ಬಗ್ಗೆ ದೇಶದಾದ್ಯಂತ ಕುತೂಹಲ ಹುಟ್ಟಿಕೊಂಡಿದೆ.

  Exclusive: ಯಶ್-ನರ್ತನ್ ಸಿನಿಮಾಗೆ ಮುಹೂರ್ತ ಫಿಕ್ಸ್: ಮುಂದಿನ ತಿಂಗಳು ಲಾಂಚ್?Exclusive: ಯಶ್-ನರ್ತನ್ ಸಿನಿಮಾಗೆ ಮುಹೂರ್ತ ಫಿಕ್ಸ್: ಮುಂದಿನ ತಿಂಗಳು ಲಾಂಚ್?

  ಸದ್ಯ ಯಶ್ ಮುಂದಿನ ಸಿನಿಮಾ ಬಗ್ಗೆ ಕ್ರೇಜ್ ಹೆಚ್ಚಾಗಿದ್ದು. ಸಿನಿಮಾ ಲಾಂಚ್ ದಿನವೂ ಹತ್ತಿರ ಆಗುತ್ತಾ ಇದೆ. ಇನ್ನು ಕೆಲವೇ ದಿನಗಳಲ್ಲಿ ಯಶ್ ಮುಂದಿನ ಸಿನಿಮಾ ಲಾಂಚ್ ಆಗಲಿದ್ದು, ಈಗ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಲಿದೆ ಎನ್ನಲಾಗುತ್ತಿದೆ.

  ಯಶ್ ಮುಂದಿನ ಸಿನಿಮಾದ ಬಗ್ಗೆ ಹೊಸ ಸುದ್ದಿ!

  ಯಶ್ ಮುಂದಿನ ಸಿನಿಮಾದ ಬಗ್ಗೆ ಹೊಸ ಸುದ್ದಿ!

  ನಟ ಯಶ್ ಮುಂದಿನ ಸಿನಿಮಾಗೆ ನರ್ತನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎನ್ನುವ ಸುದ್ದಿ ಹಲವು ದಿನಗಳಿಂದ ಜೋರಾಗಿ ಸದ್ದು ಮಾಡುತ್ತಾ ಇದೆ. ಈ ಸಿನಿಮಾ ಸೆಟ್ಟೇರುವುದಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಯಶ್ ಹಾಗೂ ನರ್ತನ್ ಕಾಂಬಿನೇಷನ್ ಸಿನಿಮಾ ಮುಂದಿನ ತಿಂಗಳು ಲಾಂಚ್ ಆಗಲಿದೆ. ಇದಕ್ಕೆಲ್ಲಾ ಉತ್ತರ ಮುಂದಿನ ತಿಂಗಳು ಸಿಗಲಿದೆ. ಇದರ ಜೊತೆಗೆ ಈ ಚಿತ್ರಕ್ಕೆ ಬಂಡವಾಳ ಹಾಕೋರು ಯಾರು ಎನ್ನುವುದು ಕೂಡ ಚರ್ಚೆ ಆಗುತ್ತಿದೆ.

  ಹೊಂಬಾಳೆ ಫಿಲ್ಮ್ಸ್ ನಿಂದ ಮತ್ತೆರಡು ಪ್ಯಾನ್ ಇಂಡಿಯಾ ಚಿತ್ರಗಳು: ಹೀರೋ ಯಾರು?ಹೊಂಬಾಳೆ ಫಿಲ್ಮ್ಸ್ ನಿಂದ ಮತ್ತೆರಡು ಪ್ಯಾನ್ ಇಂಡಿಯಾ ಚಿತ್ರಗಳು: ಹೀರೋ ಯಾರು?

  ಯಶ್ ಮತ್ತೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ?

  ಯಶ್ ಮತ್ತೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ?

  ಹೌದು, ಯಶ್ ಮತ್ತು ನರ್ತನ್ ಒಟ್ಟಾಗಿ ಮುಂದಿನ ಸಿನಿಮಾ ಮಾಡುತ್ತಾ ಇದ್ದಾರೆ. ಎರಡು ವರ್ಷಗಳಿಂದ ನಿರ್ದೇಶಕ ನರ್ತನ್ ಯಶ್‌ಗಾಗಿ ಕಥೆ ಮಾಡಿ ಸ್ಕ್ರಿಪ್ಟ್ ಸಿದ್ಧ ಮಾಡಿದ್ದಾರೆ. ಇದೇ ಸಿನಿಮಾಗೆ ಈಗ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಲಿದೆ ಎನ್ನಲಾಗಿದೆ. ಈ ಮೂಲಕ ಹೊಂಬಾಳೆ ಮತ್ತೊಂದು ದೊಡ್ಡ ಇತಿಹಾಸಕ್ಕೆ ಸಜ್ಜಾಗಿದೆ.

  ಹೊಂಬಾಳೆಯ 2 ಪ್ಯಾನ್ ಇಂಡಿಯಾ ಸಿನಿಮಾ!

  ಹೊಂಬಾಳೆಯ 2 ಪ್ಯಾನ್ ಇಂಡಿಯಾ ಸಿನಿಮಾ!

  ಇದಕ್ಕೆ ಪುಷ್ಟಿ ಕೊಡುವಂತೆ ನಿರ್ಮಾಪಕ ವಿಜಯ್ ಕಿರಂಗದೂರು, ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ ಅಡಿಯಲ್ಲಿ ಮತ್ತೆ ಎರಡು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುತ್ತಾ ಇರುವುದಾಗಿ ಹೇಳಿದ್ದಾರೆ. ಅಲ್ಲದೆ ಅದರಲ್ಲಿ ಒಂದು ಸಿನಿಮಾ ಸದ್ಯದಲ್ಲೇ ಲಾಂಚ್ ಆಗಲಿದೆ ಎಂದಿರುವುದು, ಯಶ್ ಹೆಸರಿನೊಂದಿಗೆ ತಳುಕು ಹಾಕಿಕೊಂಡಿದೆ.

  50 ದಿನಗಳತ್ತ 'ಕೆಜಿಎಫ್ 2' ಯಶಸ್ವಿ ಓಟ!50 ದಿನಗಳತ್ತ 'ಕೆಜಿಎಫ್ 2' ಯಶಸ್ವಿ ಓಟ!

  ಯಶ್‌ಗೆ ಕೆವಿಎನ್ ಬಂಡವಾಳ?

  ಯಶ್‌ಗೆ ಕೆವಿಎನ್ ಬಂಡವಾಳ?

  ಇನ್ನು ಇತ್ತೀಚೆಗೆ ಯಶ್ ಜೊತೆಗೆ ಕೆವಿಎನ್ ನಿರ್ಮಾಪಕ ಕಾಣಿಸಿಕೊಂಡಿದ್ದರು. ಹಾಗಾಗಿ ಯಶ್ ಮುಂದಿನ ಸಿನಿಮಾವನ್ನು ಕೆವಿಎನ್ ನಿರ್ಮಾಣ ಸಂಸ್ಥೆ ಮಾಡಲಿದೆ ಎನ್ನುವ ಬಗ್ಗೆ ಸುದ್ದಿ ಹಬ್ಬಿತು, ಯಶ್ ಮುಂದಿನ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆ. ಹಾಗಾಗಿ ಈ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡುವುದು ಯಾರು ಎನ್ನುವುದು ಮುಂದಿನ ತಿಂಗಳು ತಿಳಿಯಲಿದೆ.

  English summary
  Yash Next Movie Is Produced By Hombale Films, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X