»   » ಸೂರಿ 'ಕಂಟ್ರಿ ಪಿಸ್ತೂಲ್'ಗೆ ರಾಕಿಂಗ್ ಸ್ಟಾರಾ ಇಲ್ಲಾ ಪವರ್ ಸ್ಟಾರಾ?

ಸೂರಿ 'ಕಂಟ್ರಿ ಪಿಸ್ತೂಲ್'ಗೆ ರಾಕಿಂಗ್ ಸ್ಟಾರಾ ಇಲ್ಲಾ ಪವರ್ ಸ್ಟಾರಾ?

Posted By:
Subscribe to Filmibeat Kannada

ಹೊಸಬರನ್ನು ಹಾಕಿಕೊಂಡು ಮಾಡಿದ 'ಕೆಂಡಸಂಪಿಗೆ' ಭರ್ಜರಿ ಹಿಟ್ ಆಗಿ 25ನೇ ದಿನದತ್ತ ದಾಪುಗಾಲಿಕ್ಕುತ್ತಿದೆ. ಇದರಿಂದ ಫುಲ್ ಖುಷ್ ಆಗಿರುವ ನಿರ್ದೇಶಕ ದುನಿಯಾ ಸೂರಿ ಅವರು ಮತ್ತೊಂದು ಚಿತ್ರ ಮಾಡುವ ತರಾತುರಿಯಲ್ಲಿದ್ದಾರೆ.

ಸದ್ಯಕ್ಕೆ ದುನಿಯಾ ಸೂರಿ ಮಾಡಬೇಕೆಂದಿರುವ ಹೊಸ ಸಿನಿಮಾದ ಟೈಟಲ್ 'ಕಂಟ್ರಿ ಪಿಸ್ತೂಲ್' ಎಂದಾಗಿದ್ದು, ಮೂಲಗಳ ಪ್ರಕಾರ ಚಿತ್ರಕ್ಕೆ ನಾಯಕ ನಟನಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ದುನಿಯಾ ಸೂರಿ ಅವರು ಆಯ್ಕೆ ಮಾಡಿಕೊಂಡಿದ್ದರು.

ಆದರೆ ಅಪ್ಪು ಅಲಿಯಾಸ್ ಪುನೀತ್ ರಾಜ್ ಕುಮಾರ್ ಅವರು ಈಗಾಗಲೇ ನಿರ್ದೇಶಕ ದುನಿಯಾ ಸೂರಿ ಅವರ 'ದೊಡ್ಮನೆ ಹುಡುಗ' ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರ 2015 ಡಿಸೆಂಬರ್ ಅಂತ್ಯದೊಳಗೆ ತೆರೆ ಕಾಣಲಿದೆ.[ಚಿತ್ರಗಳು: ಸ್ಯಾಂಡಲ್ ವುಡ್ ನ ಮುಂಬರುವ ಜೋಡಿಗಳು ಇವರು!]

puneeth rajkumar

ಅಲ್ಲದೇ ಪವರ್ ಸ್ಟಾರ್ ಪುನೀತ್ ಅವರು 'ದೊಡ್ಮನೆ ಹುಡುಗ'ನ ಜೊತೆಗೆ ತಮ್ಮ 25ನೇ ಚಿತ್ರ 'ಚಕ್ರವ್ಯೂಹ' ದಲ್ಲೂ ಬ್ಯುಸಿಯಾಗಿರುವುದರಿಂದ ಡೇಟ್ಸ್ ಸಮಸ್ಯೆಯಿಂದ ಈ ಚಿತ್ರದಿಂದ ಹಿಂದೆ ಸರಿಯುವ ಸಂಭವವಿದೆ.[ಕ್ರಿಸ್ಮಸ್ ಹಬ್ಬಕ್ಕೆ ಯಶ್ 'ಮಾಸ್ಟರ್ ಪೀಸ್' ಗಿಫ್ಟ್]

ಆದ್ದರಿಂದ ದುನಿಯಾ ಸೂರಿ ಅವರ 'ಕಂಟ್ರಿ ಪಿಸ್ತೂಲ್' ಚಿತ್ರಕ್ಕೆ ಅಪ್ಪು ಜಾಗಕ್ಕೆ ರಾಕಿಂಗ್ ಸ್ಟಾರ್ ಯಶ್ ರಿಪ್ಲೇಸ್ ಆಗೋ ಸಾಧ್ಯತೆ ಜಾಸ್ತಿನೇ ಇದೆ.

ಇದೀಗ ಯಶ್ ಅವರು ತಮ್ಮ 'ಮಾಸ್ಟರ್ ಪೀಸ್' ಮುಗಿಸಿದ ತಕ್ಷಣ 'ಕಂಟ್ರಿ ಪಿಸ್ತೂಲ್' ಗೆ ಜಾಯಿನ್ ಆಗಲಿದ್ದಾರೆ. ಸದ್ಯಕ್ಕೆ ಈ ಡಿಫರೆಂಟ್ ಟೈಟಲ್ ಗಾಂಧಿನಗರದ ಯಶ್ ಅಭಿಮಾನಿಗಳಿಗೆ ಹಾಗೂ ಪ್ರೇಕ್ಷಕರಿಗೆ ಭಾರಿ ಕುತೂಹಲ ಮೂಡಿಸುತ್ತಿದೆ.[ಅಪ್ಪು ಅಭಿಮಾನಿಗಳಿಗೆ, ಇಲ್ಲಿದೆ ಒಂದು ಗುಡ್ ನ್ಯೂಸ್ ]

ಅಂದಹಾಗೆ ಈ 'ಕಂಟ್ರಿ ಪಿಸ್ತೂಲ್' ನ ಸ್ಟೋರಿ ಲೈನ್ ಏನೀರಬಹುದು ಅನ್ನೋ ಕುತೂಹಲ ನಿಮಗೆ ಇರುವಂತೆ ನಮಗೂ ಕುತೂಹಲ ಇದೆ. ಅದನ್ನು ನಿರ್ದೇಶಕ ದುನಿಯಾ ಸೂರಿ ಅವರು ಆಫಿಶೀಯಲ್ ಆಗಿ ಹೇಳೋವರೆಗೂ ನಾವು ಕಾಯಲೇ ಬೇಕು.

English summary
After the success of Kendasampige, director Duniya Soori is planning yet another movie. The movie has been titled as 'Country Pistol'. Along with Dodmane Huduga, Puneeth is also busy with his 25th movie Chakravyuha. So, Actor Yash has replaced Puneeth in the movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada