'ಟಾಕ್ಸಿಕ್' ಚಿತ್ರದಲ್ಲಿ ಯಶ್ ಡಬಲ್ ರೋಲ್? ಅಣ್ಣ-ತಮ್ಮನಾ? ತಂದೆ-ಮಗನಾ?

ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ದಿನದಿಂದ ದಿನಕ್ಕೆ ಹೈಪ್ ಕ್ರಿಯೇಟ್ ಮಾಡ್ತಿದೆ. ಬಹುಕೋಟಿ ವೆಚ್ಚದಲ್ಲಿ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ನಿರ್ಮಾಣ ಆಗ್ತಿದೆ. ಈ ಚಿತ್ರಕ್ಕಾಗಿ ಹಾಲಿವುಡ್ ಸ್ಟಂಟ್ ಮಾಸ್ಟರ್ ಜೆ‌ಜೆ‌‌ ಪೆರ್ರಿ ಭಾರತೀಯ ಚಿತ್ರರಂಗದ ಖ್ಯಾತ ಸ್ಟಂಟ್ಸ್ ಟೀಮ್ ಜೊತೆಗೂಡಿ ಬರೋಬ್ಬರಿ 45 ದಿನಗಳ ಆಕ್ಷನ್ ಸನ್ನಿವೇಶಗಳ ಚಿತ್ರೀಕರಣಕ್ಕೆ ಸಜ್ಜಾಗಿದ್ದಾರೆ.

ಸ್ಟಂಟ್ಸ್ ಕಂಪೋಸ್ ಮಾಡುತ್ತಿರುವ ಒಂದೆರಡು ಫೋಟೊಗಳು ರಿವೀಲ್ ಆಗಿದೆ. ಸೆಟ್‌ನಲ್ಲಿ ಜೆ‌ಜೆ‌‌ ಪೆರ್ರಿ ಜೊತೆ ಯಶ್ ಹಾಗೂ ನಿರ್ದೇಶಕಿ ಗೀತು ಮೋಹನ್ ದಾಸ್ ಕಾಣಿಸಿಕೊಂಡಿರುವ ಫೋಟೊಗಳನ್ನು ನೋಡಬಹುದು. ಇನ್ನು ಸ್ಟೈಲಿಶ್ ಅವತಾರದಲ್ಲಿ ಯಶ್ ಅವರನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಶೀಘ್ರದಲ್ಲೇ ಚಿತ್ರದ ಬಗ್ಗೆ ಅಪ್‌ಡೇಟ್ ಬರುತ್ತಿದೆ ಎನ್ನುವ ಊಹಾಪೋಹ ಕೂಡ ಶುರುವಾಗಿದೆ.

Yash Returns in Style With Toxic Viral Pics Dual Look Speculation amp amp March 2026 Release

'ಕೆಜಿಎಫ್'-2 ಬಳಿಕ ಯಶ್ ನಟಿಸಿದ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. 'ಟಾಕ್ಸಿಕ್' ಚಿತ್ರಕ್ಕಾಗಿ ಅಭಿಮಾನಿಗಳು ಚಾತಕ ಪಕ್ಷಿಗಳಂತ ಕಾಯುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ತಮ್ಮದೇ ಮಾನ್‌ಸ್ಟರ್ ಮೈಂಡ್ಸ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಯಶ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ದೇಶ ವಿದೇಶದ ಭಾಷೆಗಳಿಗೆ ಸಿನಿಮಾ ಡಬ್ ಮಾಡಿ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಮುಂದಿನ ವರ್ಷ ಮಾರ್ಚ್ 19ಕ್ಕೆ ಸಿನಿಮಾ ತೆರೆಗೆ ತರುವುದಾಗಿ ಚಿತ್ರತಂಡ ಹೇಳಿದೆ.

ನಯನತಾರಾ, ತಾರಾ ಸುತಾರಿಯಾ, ಅಕ್ಷಯ್ ಒಬೆರಾಯ್, ಹುಮಾ ಖುರೇಶಿ ಸೇರಿ ದೊಡ್ಡ ತಾರಾಗಣ 'ಟಾಕ್ಸಿಕ್' ಚಿತ್ರದಲ್ಲಿದೆ. ಕೊನೆ ಹಂತದ ಚಿತ್ರೀಕರಣ ಈಗ ನಡೀತಿದೆ ಎಂದು ಹೇಳಲಾಗ್ತಿದೆ. ಬ್ರಿಟೀಷ್ ಕಲಾವಿದರು ಕೂಡ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಇನ್ನು ಜೆಜೆ ಪೆರ್ರಿ ಜೊತೆ ಯಶ್ ಕಾಣಿಸಿಕೊಂಡಿರುವ ಫೋಟೊಗಳು ವೈರಲ್ ಆಗಿ ಹೊಸ ಅನುಮಾನ ಹುಟ್ಟಾಕ್ಕಿದೆ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೊಗಳಲ್ಲಿ ಯಶ್ ಎರಡು ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿರುವುದನ್ನು ನೋಡಬಹುದು. ಉದ್ದ ಕೂದಲು ಬಿಟ್ಟು ಹಿಂದಕ್ಕೆ ಜಡೆ ರೀತಿ ಕಟ್ಟಿಕೊಂಡಿರುವ ಲುಕ್ ಒಂದು, ಅದೇ ರೀತಿ ಕೂದಲು ಕಟ್ ಮಾಡಿ ಗಿರಿಜಾ ಮೀಸೆ ತಿರುವಿ ಖಡಕ್ ಆಗಿ ನೋಡುತ್ತಿರುವ ಮತ್ತೊಂದು ಲುಕ್ ಕೂಡ ಇದೆ. ಇನ್ನು ನೋಡಿ ಯಶ್ ಚಿತ್ರದಲ್ಲಿ ಡಬಲ್ ರೋಲ್ ಪ್ಲೇ ಮಾಡ್ತಿದ್ದಾರಾ? ಎಂದು ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.

'ಟಾಕ್ಸಿಕ್' ಚಿತ್ರದಲ್ಲಿ ಯಶ್ ಬೇರೆ ಬೇರೆ ಗೆಟಪ್‌ಗಳಲ್ಲಿ ವಿಭಿನ್ನ ಶೇಡ್‌ಗಳಿರುವ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಎಲ್ಲರೂ ಭಾವಿಸಿದ್ದಾರೆ. ಜೋಕರ್ ಗೆಟಪ್‌ನಲ್ಲಿ ಕೂಡ ನಟಿಸುತ್ತಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ. ಇದೆಲ್ಲದರ ನಡುವೆ ಯಶ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರಾ? ತಂದೆ, ಮಗನಾಗಿ ಕಾಣಿಸಿಕೊಳ್ತಾರಾ? ಅಥವಾ ಅಣ್ಣ-ತಮ್ಮನ ಪಾತ್ರದಲ್ಲಿ ನಟಿಸಿದ್ದಾರಾ? ಎಂದು ತಲೆಕೆಡಿಸಿಕೊಂಡಿದ್ದಾರೆ. ಇದು ನಿಜವೇ ಆಗಿದ್ದರೆ ಅಭಿಮಾನಿಗಳಿಗೆ ಹಬ್ಬವೇ ಸರಿ. ಇತ್ತೀಚೆಗೆ ಯಶ್ ತಮ್ಮ ಹೇರ್‌ಸ್ಟೈಲ್ ಕಾಣಿಸದಂತೆ ಗುಟ್ಟು ಕಾಯ್ದುಕೊಳ್ಳುತ್ತಿದ್ದಾರೆ ಎನ್ನುವ ಊಹಾಪೋಹ ಕೂಡ ಶುರುವಾಗಿದೆ. ಇತ್ತೀಚೆಗೆ ರಕ್ಷಾ ಬಂಧನ್ ಹಾಗೂ ವರಲಕ್ಷ್ಮಿ ಹಬ್ಬ ಆಚರಣೆಯ ಫೋಟೊಗಳಲ್ಲಿ ಯಶ್ ಲುಕ್ ಸಂಪೂರ್ಣ ರಿವೀಲ್ ಆಗಿರಲಿಲ್ಲ. ಇದು ಕೂಡ ಅಭಿಮಾನಿಗಳಲ್ಲಿ ಸಾಕಷ್ಟು ಪ್ರಶ್ನೆ ಹುಟ್ಟಾಕ್ಕಿದೆ.

'ಟಾಕ್ಸಿಕ್' ಚಿತ್ರಕ್ಕೆ ನಿರ್ದೇಶಕಿ ಗೀತು ಮೋಹನ್ ದಾಸ್ ಪತಿ ರಾಜೀವ್ ರವಿ ಛಾಯಾಗ್ರಹಣ ಹಾಗೂ ಅನಿರುದ್ದ್ ರವಿಚಂದರ್ ಸಂಗೀತ ಇರುತ್ತದೆ ಎನ್ನಲಾಗ್ತಿದೆ. ಸಿನಿಮಾ ಲಾಂಚ್ ಅಪ್‌ಡೇಟ್ ಬಳಿಕ ರಿಲೀಸ್ ಡೇಟ್ ಬಗ್ಗೆ ಮಾತ್ರ ಅಧಿಕೃತ ಮಾಹಿತಿ ಸಿಕ್ಕಿತ್ತು. ಯಶ್ ಹುಟ್ಟುಹಬ್ಬದ ಟೀಸರ್ ಬಂದಿತ್ತು. ಇನ್ನುಳಿದಂತೆ ಚಿತ್ರದ ಬಗ್ಗೆ ಯಾವುದೇ ಸುಳಿವು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.

More from Filmibeat

English summary
Yash Returns in Style With Toxic: Viral Pics, Dual Look Speculation & March 2026 Launch
Read more about: yash toxic sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X