'KGF 2' ಅಪ್ ಡೇಟ್: ಈ ಎರಡು ದೃಶ್ಯ ಸೇರಿದಂತೆ 25 ದಿನಗಳ ಶೂಟಿಂಗ್ ಬಾಕಿ?
ರಾಕಿಂಗ್ ಸ್ಟಾರ್ ಅಭಿನಯದ ಬಹು ನಿರೀಕ್ಷೆ ಕೆಜಿಎಫ್-2 ಸಿನಿಮಾಗಾಗಿ ಇಡೀ ಭಾರತೀಯ ಚಿತ್ರರಂಗ ಎದುರು ನೋಡುತ್ತಿದೆ. ಕೆಜಿಎಫ್ ಮೊದಲ ಭಾಗದ ದೊಡ್ಡ ಯಶಸ್ಸಿನ ನಂತರ ಪಾರ್ಟ್-2 ಮೇಲಿನ ನಿರೀಕ್ಷೆ, ಕುತೂಹಲ, ಕಾತರ ದುಪ್ಪಟ್ಟಾಗಿದೆ.
Recommended Video
ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಎಂದು ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಅಭಿಮಾನಿಗಳಿಗೆ, ಚಿತ್ರತಂಡ ಬಿಡುಗಡೆಯ ದಿನಾಂಕ ಅನೌನ್ಸ್ ಮಾಡಿ ಕುತೂಹಲಕ್ಕೆ ಬ್ರೇಕ್ ಹಾಕಿತ್ತು. ಆದ್ರೀಗ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
ಕೊರೊನಾ ಲಾಕ್ ಡೌನ್ ಕಾರಣ ಕೆಜಿಎಫ್ ಸಿನಿಮಾ ಚಿತ್ರೀಕರಣ ತಡವಾಗಲಿದ್ದು, ರಿಲೀಸ್ ಕೂಡ ಮುಂದಕ್ಕೆ ಹೋಗುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. ಕೆಜಿಎಫ್-2 ಇನ್ನೂ 25 ದಿನಗಳ ಚಿತ್ರೀಕರಣ ಬಾಕಿ ಇದೆ. ಮುಂದೆ ಓದಿ...

25 ದಿನಗಳ ಶೂಟಿಂಗ್, 2 ಆಕ್ಷನ್ ದೃಶ್ಯ ಭಾಕಿ
ಕೆಜಿಎಫ್-2 ಸಿನಿಮಾದ ಪ್ರಮುಖ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಆದರೆ ಇನ್ನೂ 25 ದಿನಗಳ ಚಿತ್ರೀಕರಣ ಬಾಕಿ ಇದೆಯಂತೆ. ಇದರಲ್ಲಿ 2 ಆಕ್ಷನ್ ದೃಶ್ಯಗಳಗಳನ್ನು ಚಿತ್ರೀಕರಣ ಮಾಡಬೇಕಂತೆ. ಒಂದು ಆಕ್ಷನ್ ದೃಶ್ಯ ಯಶ್ ಮತ್ತು ಸಂಜಯ್ ದತ್ ನಡುವಿನ ಫೈಟಿಂಗ್ ದೃಶ್ಯ ಸಹ ಇದೆಯಂತೆ.

98ರಷ್ಟು ಟಾಕಿ ಭಾಗ ಮುಕ್ತಾಯ
ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ 98ರಷ್ಟು ಟಾಗಿ ಭಾಗ ಮುಗಿಸಿದೆ. ಉಳಿದ ಚಿತ್ರೀಕರಣವನ್ನು ಕರ್ನಾಟಕದಲ್ಲಿಯೆ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಈ ಬಗ್ಗೆ ಮಾಹಿತಿಯನ್ನು ಯಶ್ ಅಭಿಮಾನಿ ಬಳಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಮಾಹಿತಿ ವೈರಲ್ ಆಗುತ್ತಿದೆ.

ಕೊರೊನಾ ಕಾಟದಿಂದ KGF-2 ರಿಲೀಸ್ ಮುಂದಕ್ಕೆ?
ಕೊರೊನಾ ವೈರಸ್ ಅಟ್ಟಹಾಸದ ಪರಿಣಾಮ ಸಿನಿಮಾ ರಿಲೀಸ್ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನೂ 25 ದಿನಗಳ ಚಿತ್ರೀಕರಣ ಬಾಕಿ ಇದೆ. ಒಂದು ವೇಳೆ ಲಾಕ್ ಡೌನ್ ಮುಗಿದರು ಚಿತ್ರೀಕರಣಕ್ಕೆ ಅನುಮತಿ ಸಿಗುವುದು ಅನುಮಾನ. ಹಾಗಾಗಿ ಚಿತ್ರೀಕರಣ ತಡವಾಗುವ ಸಾಧ್ಯತೆ ಇದೆ. ಇದರಿಂದ ರಿಲೀಸ್ ಮಂದಕ್ಕೆ ಹೋಗುವುದು ಬಹುತೇಕ ಖಚಿತ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ಡಿಸೆಂಬರ್ ನಲ್ಲಿ ರಿಲೀಸ್?
ಕೆಜಿಎಫ್-2 ಸಿನಿಮಾ ಅಕ್ಟೋಬರ್ ಬದಲು ಡಿಸೆಂಬರ್ ನಲ್ಲಿ ತೆರೆಗೆ ಬರಲಿದೆ ಎಂದು ಮೂಲಗಳು ಹೇಳುತ್ತಿವೆ. ಡಿಸೆಂಬರ್ ಅಂದರೆ ಕ್ರಿಸ್ ಮಸ್ ಸಮಯದಲ್ಲಿ ಕೆಜಿಎಫ್-2 ಬಿಡುಗಡೆಯಾಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೆ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ.

ಕೆಜಿಎಫ್-1 ಡಿಸೆಂಬರ್ ಗೆ ರಿಲೀಸ್ ಆಗಿತ್ತು
ಕೆಜಿಎಫ್-1 ಸಹ ಡಿಸೆಂಬರ್ ಗೆ ರಿಲೀಸ್ ಆಗಿತ್ತು. ಡಿಸೆಂಬರ್ 20ಕ್ಕೆ ಕೆಜಿಎಫ್ ದಕ್ಷಿಣ ಭಾರತೀಯ ಭಾಷೆಗಳ ಜೊತೆಗೆ ಬಾಲಿವುಡ್ ನಲ್ಲಿಯೂ ಬಿಡುಗಡೆಯಾಗಿತ್ತು. ರಾಕಿ ಭಾಯ್ ಅಬ್ಬರಕ್ಕೆ ಸಿನಿಪ್ರಿಯರು ದಂಗಾಗಿದ್ದರು. ಈಗ ಪಾರ್ಟ್-2 ಮೂಲಕ ಮೂರು ವರ್ಷಗಳ ಬಳಿಕ ಮತ್ತೆ ಡಿಸೆಂಬರ್ ನಲ್ಲಿಯೇ ಅಭಿಮಾನಿಗಳ ಮುಂದೆ ಬರುವ ಸಾಧ್ಯತೆ ಹೆಚ್ಚಿದೆ.


Click it and Unblock the Notifications











