For Quick Alerts
  ALLOW NOTIFICATIONS  
  For Daily Alerts

  ಯಶ್ 'KGF' ಅಡ್ಡದಿಂದ ಹೊರಬಂದ 'ಪಾರ್ಟ್-2' ಕಥೆ ಇದು.!

  By Bharath Kumar
  |
  ಕೆಜಿಎಫ್ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ | Filmibeat Kannada

  ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿರುವ ಬಹುನಿರೀಕ್ಷೆಯ ಸಿನಿಮಾ 'ಕೆ.ಜಿ.ಎಫ್' ಹಲವು ವಿಷ್ಯಗಳಿಗೆ ಕುತೂಹಲ ಹೆಚ್ಚಿಸಿದೆ. 5 ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರ ದಕ್ಷಿಣ ಭಾರತದಲ್ಲೇ ಹೆಚ್ಚು ಸುದ್ದಿ ಮಾಡುತ್ತಿದೆ.

  ಯಶ್ ಅವರ ಗೆಟಪ್ ಮತ್ತು ಸಿನಿಮಾದ ಕಥೆಯಿಂದ ಇಡೀ ಭಾರತ ಚಿತ್ರರಂಗದ ಗಮನ ಸೆಳೆದಿರುವ 'ಕೆ.ಜಿ.ಎಫ್' ತಂಡದಿಂದ ಈಗ ಎಕ್ಸ್ ಕ್ಲೂಸಿವ್ ಸುದ್ದಿ ಹೊರಬಿದ್ದಿದೆ.

  ಹೌದು, ಯಶ್ 'ಕೆ.ಜಿ.ಎಫ್' ಸಿನಿಮಾ ಎರಡು ಭಾಗಗಳಲ್ಲಿ ತೆರೆಕಾಣಲಿದೆ ಎಂಬ ಅಚ್ಚರಿಯ ವಿಷ್ಯ ಬಹಿರಂಗವಾಗಿದೆ. ಈ ಬಗ್ಗೆ ಹೆಚ್ಚಿನ ಸುದ್ದಿ ತಿಳಿಯಲು ಮುಂದೆ ಓದಿ.......

  'ಬಾಹುಬಲಿ'ಯಂತೆ 'ಕೆ.ಜಿ.ಎಫ್' ಕೂಡ ಎರಡು ಭಾಗ.!

  'ಬಾಹುಬಲಿ'ಯಂತೆ 'ಕೆ.ಜಿ.ಎಫ್' ಕೂಡ ಎರಡು ಭಾಗ.!

  ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸಿನಿಮಾ ಎರಡು ಭಾಗಗಳಲ್ಲಿ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಮಾಡಿತ್ತು. ಈಗ ಅದೇ ಸೂತ್ರವನ್ನ ಅನುಸರಿಸುತ್ತಿರುವ 'ಕೆ.ಜಿ.ಎಫ್' ಎರಡು ಭಾಗಗಳಲ್ಲಿ ತಯಾರಾಗುತ್ತಿದೆಯಂತೆ.

  'ಕೆ.ಜಿ.ಎಫ್' ಚಿತ್ರದ ಫಸ್ಟ್ ಡೈಲಾಗ್ ಬಹಿರಂಗ ಪಡಿಸಿದ ರಾಕಿಂಗ್ ಸ್ಟಾರ್.!

  ಡಿಮ್ಯಾಂಡ್ ಹೆಚ್ಚಿರುವುದು ಇದಕ್ಕೆ ಕಾರಣನಾ.!

  ಡಿಮ್ಯಾಂಡ್ ಹೆಚ್ಚಿರುವುದು ಇದಕ್ಕೆ ಕಾರಣನಾ.!

  ಆರಂಭದಲ್ಲಿ ಈ ಬಗ್ಗೆ ಚಿಂತಿಸದ ಚಿತ್ರತಂಡ ಈಗ ಇಂತಹದೊಂದು ನಿರ್ಧಾರಕ್ಕೆ ಬಂದಿರುವುದು ನಿಜಕ್ಕೂ ಅಚ್ಚರಿ ಮೂಡಿಸುತ್ತಿದೆ. 'ಬಾಹುಬಲಿ' ಚಿತ್ರದಂತೆ 'ಕೆ.ಜಿ.ಎಫ್' ಚಿತ್ರಕ್ಕೂ ಮಾರುಕಟ್ಟೆಯಲ್ಲಿ ಕ್ರೇಜ್ ಹೆಚ್ಚಿರುವುದರಿಂದ ಪಾರ್ಟ್ 2 ಬರಲು ಕಾರಣವಾಗುತ್ತಿದೆ ಎನ್ನಲಾಗಿದೆ.

  'KGF' ಚಿತ್ರದ ಕುತೂಹಲಕಾರಿ ಸಂಗತಿ ಬಿಚ್ಚಿಟ್ಟ ರವಿಶಂಕರ್ ಸಹೋದರ ಅಯ್ಯಪ್ಪ!

  ಸ್ಯಾಟ್ ಲೈಟ್, ಆಡಿಯೋ ಹಕ್ಕಿಗೆ ಬೇಡಿಕೆ

  ಸ್ಯಾಟ್ ಲೈಟ್, ಆಡಿಯೋ ಹಕ್ಕಿಗೆ ಬೇಡಿಕೆ

  ಐದು ಭಾಷೆಗಳಲ್ಲಿ ಸಿದ್ದವಾಗುತ್ತಿರುವ 'ಕೆ.ಜಿ.ಎಫ್' ಚಿತ್ರದ ಸ್ಯಾಟ್ ಲೈಟ್ ಮತ್ತು ಆಡಿಯೋ ಹಕ್ಕಿಗೆ ಹೆಚ್ಚಿನ ಬೇಡಿಕೆ ಇದೆ. ದಕ್ಷಿಣ ಭಾರತ ಹಾಗೂ ಉತ್ತರ ಭಾರತ ಎರಡರಲ್ಲೂ 'ಕೆ.ಜಿ.ಎಫ್' ಚಿತ್ರವನ್ನ ದೊಡ್ಡ ಮಟ್ಟದ ಯಶಸ್ಸು ಕಾಣಿಸಲು ಸಿನಿಮಾ ಮಂದಿ ಯೋಜನೆ ಹಾಕಿಕೊಂಡಿದ್ದಾರೆ.

  ಸೌತ್ ಸಿನಿಮಾ ರಂಗದಲ್ಲಿ ಶುರುವಾಯ್ತು ಯಶ್ 'KGF' ಹವಾ!

  ರಾಕಿಂಗ್ ಸ್ಟಾರ್ ಕ್ರೇಜ್.!

  ರಾಕಿಂಗ್ ಸ್ಟಾರ್ ಕ್ರೇಜ್.!

  ಸ್ಯಾಂಡಲ್ ವುಡ್ ಪಾಲಿಗೆ 'ಮಾಸ್ಟರ್ ಪೀಸ್' ಎನಿಸಿಕೊಂಡಿರುವ ನಟ ಯಶ್ ಅಭಿನಯದ ಹಲವು ಚಿತ್ರಗಳು ಹಿಂದಿ ಹಾಗೂ ಬೋಜ್ ಪುರಿ ಭಾಷೆಗಳಿಗೆ ಡಬ್ ಆಗಿದೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ಕರ್ನಾಟಕದಾಚೆಯೂ ಯಶ್ ಅಭಿಮಾನಿಗಳಿದ್ದಾರೆ ಎನ್ನುವುದು ಚಿತ್ರದ ಬೇಡಿಕೆ ಹೆಚ್ಚಾಗಲು ಮತ್ತೊಂದು ಕಾರಣವಾಗಿದೆ.

  'ಕ್ರಿಸ್ ಮಸ್'ಗೆ ಕೆ.ಜಿ.ಎಫ್ ತೆರೆಕಾಣಬೇಕಿದೆ

  'ಕ್ರಿಸ್ ಮಸ್'ಗೆ ಕೆ.ಜಿ.ಎಫ್ ತೆರೆಕಾಣಬೇಕಿದೆ

  ಅಂದ್ಹಾಗೆ, ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ 'ಕೆ.ಜಿ.ಎಫ್' ಸಿನಿಮಾ ಇದೇ ಡಿಸೆಂಬರ್ ನಲ್ಲಿ 'ಕ್ರಿಸ್ ಮಸ್' ಹಬ್ಬದ ಪ್ರಯುಕ್ತ ತೆರೆ ಕಾಣಬೇಕಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಆಡಿಯೋ ಹಾಗೂ ಟೀಸರ್ ಬಿಡುಗಡೆ ಮಾಡಲು ಸಿದ್ದವಾಗುತ್ತಿದೆ.

  'ಕೆ.ಜಿ.ಎಫ್' ಪಾರ್ಟ್-2 ಬರುತ್ತಾ?

  'ಕೆ.ಜಿ.ಎಫ್' ಪಾರ್ಟ್-2 ಬರುತ್ತಾ?

  ಇಷ್ಟೆಲ್ಲಾ ಬೇಡಿಕೆಗಳಿರುವ 'ಕೆ.ಜಿ.ಎಫ್' ಚಿತ್ರದ ಪಾರ್ಟ್ 2 ಬರುತ್ತೆ ಎಂದು ಹೇಳಲಾಗುತ್ತಿದೆ. ಇದನ್ನ ಚಿತ್ರತಂಡ ಸ್ಪಷ್ಟಪಡಿಸುವರೆಗೂ ನಂಬಲು ಸಾಧ್ಯವಿಲ್ಲ. ಇನ್ನುಳಿದಂತೆ ಶ್ರೀನಿಧಿ ಶೆಟ್ಟಿ ನಾಯಕಿಯಾಗಿದ್ದು, ಚಿತ್ರದಲ್ಲಿ ಯಶ್ ಡಾನ್ ಪಾತ್ರದಲ್ಲಿ ಮಿಂಚಲಿದ್ದಾರೆ. 80ರ ದಶಕದ ಪಾತ್ರದಲ್ಲಿ ಯಶ್ ಬಣ್ಣ ಹಚ್ಚಿದ್ದು, ಚಿತ್ರದ ಬಗ್ಗೆ ನಿರೀಕ್ಷೆ ಬೆಟ್ಟದಷ್ಟಿದೆ.

  English summary
  According to sources, Rocking star Yash's new film 'KGF' is being made in two parts.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X