India
  For Quick Alerts
  ALLOW NOTIFICATIONS  
  For Daily Alerts

  ಯಶ್‌ಗೆ 100 ಕೋಟಿ ಸಂಭಾವನೆ ನೀಡಲಿದ್ದಾರೆ ನಿರ್ಮಾಪಕ ದಿಲ್ ರಾಜು!

  |

  'ಕೆಜಿಎಫ್' ಸರಣಿ ಸಿನಿಮಾಗಳಿಂದಾಗಿ ಯಶ್‌ರ ತಾರಾಮೌಲ್ಯ ಮುಗಿಲು ಮುಟ್ಟಿದೆ. 'ಕೆಜಿಎಫ್ 2' ಸಿನಿಮಾ ಸಾವಿರಾರು ಕೋಟಿ ಹಣ ಗಳಿಸಿದ್ದು, ಯಶ್‌ ಗೆ ಕನ್ನಡ ಚಿತ್ರರಂಗದಲ್ಲಿ ಮಾತ್ರ ಬೇರೆ ಚಿತ್ರರಂಗಗಳಲ್ಲಿಯೂ ಭಾರಿ ಬೇಡಿಕೆ ಮೂಡಿದೆ.

  Yash Next Film | ದಿಲ್ ರಾಜು ಯಶ್‌ಗೆ ನಿರ್ಮಾಣ ಮಾಡುತ್ತಿರುವ ಸಿನಿಮಾ ಯಾವುದು? | Yash | Dil Raju *Sandalwood

  ಯಶ್‌ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಕಾರಣ ಅವರ ಮೇಲೆ ಬಂಡವಾಳ ಹೂಡಲು ಬೇರೆ ಬೇರೆ ಚಿತ್ರರಂಗದ ನಿರ್ಮಾಪಕರು ತಯಾರಾಗಿದ್ದಾರೆ. ದಕ್ಷಿಣ ಭಾರತದ ಜನಪ್ರಿಯ ನಿರ್ಮಾಪಕ ದಿಲ್ ರಾಜು ಸಹ ಯಶ್‌ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದಾರೆ ಎನ್ನಲಾಗುತ್ತಿದೆ.

  ನಟ ಯಶ್ ಪ್ರಸ್ತುತ ನರ್ತನ್ ಸಿನಿಮಾದಲ್ಲಿ ನಟಿಸುವ ದಟ್ಟ ಸಾಧ್ಯತೆ ಇದೆ. ಸಿನಿಮಾದ ಘೋಷಣೆ ಕೆಲವೇ ದಿನಗಳಲ್ಲಿ ಆಗಲಿದೆ. ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿದ್ದು, ಸಿನಮಾಕ್ಕಾಗಿ ಯಶ್‌ ಈಗಾಗಲೇ ಕಸರತ್ತು ಮಾಡುತ್ತಾ ತಯಾರಾಗುತ್ತಿದ್ದಾರೆ.

  ನರ್ತನ್ ಸಿನಿಮಾದ ಬಳಿಕ ತೆಲುಗು ನಿರ್ದೆಶಕನ ಸಿನಿಮಾದಲ್ಲಿ ಯಶ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆ ಸಿನಿಮಾವನ್ನು ದಿಲ್ ರಾಜು ನಿರ್ಮಾಣ ಮಾಡಲಿದ್ದಾರೆ. ಆ ಸಿನಿಮಾ ಸಹ ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದ್ದು, ದಿಲ್ ರಾಜು ನಿರ್ಮಾಣದ ಸಿನಿಮಾಕ್ಕಾಗಿ ಯಶ್, 100 ಕೋಟಿ ಸಂಭಾವನೆ ಪಡೆಯಲಿದ್ದಾರೆ ಎಂಬ ಮಾತುಗಳು ತೆಲುಗು ಚಿತ್ರರಂಗದಲ್ಲಿ ಹರಿದಾಡುತ್ತಿವೆ. ದಿಲ್‌ ರಾಜು ಪ್ರಸ್ತುತ ದಳಪತಿ ವಿಜಯ್‌ ಜೊತೆ ಸಿನಿಮಾ ಮಾಡುತ್ತಿದ್ದು, ಆ ಸಿನಿಮಾದ ಬಳಿಕ ಯಶ್ ಜೊತೆಗಿನ ಸಿನಿಮಾ ಸೆಟ್ಟೇರಲಿದೆ.

  ನರ್ತನ್ ಸಿನಿಮಾದಲ್ಲಿ ಯಶ್ ನಟನೆ

  ನರ್ತನ್ ಸಿನಿಮಾದಲ್ಲಿ ಯಶ್ ನಟನೆ

  ನರ್ತನ್ ಸಿನಿಮಾದ ಬಳಿಕ ತೆಲುಗು ನಿರ್ದೆಶಕನ ಸಿನಿಮಾದಲ್ಲಿ ಯಶ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆ ಸಿನಿಮಾವನ್ನು ದಿಲ್ ರಾಜು ನಿರ್ಮಾಣ ಮಾಡಲಿದ್ದಾರೆ. ಆ ಸಿನಿಮಾ ಸಹ ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದ್ದು, ದಿಲ್ ರಾಜು ನಿರ್ಮಾಣದ ಸಿನಿಮಾಕ್ಕಾಗಿ ಯಶ್, 100 ಕೋಟಿ ಸಂಭಾವನೆ ಪಡೆಯಲಿದ್ದಾರೆ ಎಂಬ ಮಾತುಗಳು ತೆಲುಗು ಚಿತ್ರರಂಗದಲ್ಲಿ ಹರಿದಾಡುತ್ತಿವೆ. ದಿಲ್‌ ರಾಜು ಪ್ರಸ್ತುತ ದಳಪತಿ ವಿಜಯ್‌ ಜೊತೆ ಸಿನಿಮಾ ಮಾಡುತ್ತಿದ್ದು, ಆ ಸಿನಿಮಾದ ಬಳಿಕ ಯಶ್ ಜೊತೆಗಿನ ಸಿನಿಮಾ ಸೆಟ್ಟೇರಲಿದೆ.

  'ಕೆಜಿಎಫ್' ವಿತರಣೆ ಮಾಡಿದ್ದ ದಿಲ್ ರಾಜು

  'ಕೆಜಿಎಫ್' ವಿತರಣೆ ಮಾಡಿದ್ದ ದಿಲ್ ರಾಜು

  ದಿಲ್ ರಾಜು, ಯಶ್‌ರ ಗೆಳೆಯರೇ ಆಗಿದ್ದು ದಿಲ್ ರಾಜು ಕಳೆದ ಬಾರಿ ಆಚರಿಸಿಕೊಂಡ ಅದ್ಧೂರಿ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಯಶ್ ಭಾಗವಹಿಸಿದ್ದರು. ಪ್ರಶಾಂತ್ ನೀಲ್ ಹಾಗೂ ವಿಜಯ್ ಕಿರಗಂದೂರು ಸಹ ಇದ್ದರು. ಇನ್ನು ದಿಲ್ ರಾಜು ಅವರೇ ಆಂಧ್ರ ಹಾಗೂ ತೆಲಂಗಾಣದಲ್ಲಿ 'ಕೆಜಿಎಫ್' ಸಿನಿಮಾದ ವಿತರಣೆ ಸಹ ಮಾಡಿದ್ದರು. ಯಶ್ ಹಾಗೂ ಕೆಜಿಎಫ್ ಬಗ್ಗೆ ಅಪಾರ ಗೌರವ ಹೊಂದಿರುವ ದಿಲ್ ರಾಜು, ಹೈದರಾಬಾದ್‌ನಲ್ಲಿ ನಡೆದಿದ್ದ 'ಕೆಜಿಎಫ್ 2' ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದ್ದರು.

  'ಯಶ್ 19' ಗಾಗಿ ತಯಾರಾಗುತ್ತಿದ್ದಾರೆ ಯಶ್

  'ಯಶ್ 19' ಗಾಗಿ ತಯಾರಾಗುತ್ತಿದ್ದಾರೆ ಯಶ್

  ಇನ್ನು ನಟ ಯಶ್‌ ತಮ್ಮ ಮುಂದಿನ ಸಿನಿಮಾ 'ಯಶ್ 19' ಗಾಗಿ ತಯಾರಾಗುತ್ತಿದ್ದಾರೆ. ಸಿನಿಮಾವನ್ನು ನರ್ತನ್ ನಿರ್ದೇಶನ ಮಾಡುತ್ತಿದ್ದು, ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿದ್ದು ಸಿನಿಮಾದಲ್ಲಿ ನಟಿ ಪೂಜಾ ಹೆಗ್ಡೆ ನಾಯಕಿ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗುತ್ತಿದೆ. ಈ ಸಿನಿಮಾ ಸಹ 'ಕೆಜಿಎಫ್' ಸರಣಿ ಮಾದರಿಯಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆ. ಮತ್ತು ಭಾರಿ ಅದ್ಧೂರಿಯಾಗಿ ನಿರ್ಮಾಣ ಆಗಲಿದೆ.

  ಪಾನಿಪುರಿ ಕಿಟ್ಟಿ ಟ್ರೈನಿಂಗ್

  ಪಾನಿಪುರಿ ಕಿಟ್ಟಿ ಟ್ರೈನಿಂಗ್

  ನಟ ರಾಕಿಂಗ್ ಸ್ಟಾರ್ ಯಶ್ ಮುಂದಿನ ಚಿತ್ರಕ್ಕಾಗಿ ಭರ್ಜರಿ ತಯಾರಿ ನಡೆಸಿದ್ದಾರಂತೆ. ಅಲ್ಲದೇ ದೇಹದ ತೂಕವನ್ನು ಇಳಿಸಿಕೊಳ್ಳಲು ಮುಂದಾಗಿದ್ದಾರೆ. ವರ್ಕೌಟ್ ಜೊತೆಗೆ ಯಶ್ ಡಯಟ್ ಕೂಡ ಶುರು ಮಾಡಿದ್ದಾರಂತೆ. ಮುಂದಿನ ಚಿತ್ರದಲ್ಲಿ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಳ್ಳಲು ತಯಾರಿ ನಡೆಸಿದ್ದಾರಂತೆ. ಈ ಬಗ್ಗೆ ಮಾಧ್ಯಮ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಯಶ್ ಟ್ರೈನರ್ ಪಾನಿಪುರಿ ಕಿಟ್ಟಿ ರಿವೀಲ್ ಮಾಡಿದ್ದಾರೆ.

  English summary
  Yash next movie produced by Dil Raju. Producer Dil Raju giving 100 crore rs remuneration. Dil Raju is producing Vijay's movie now.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X