ಶಂಕರ್ ನಿರ್ದೇಶನದಲ್ಲಿ ರಾಕಿ ಭಾಯ್: ರಾಮ್ ಚರಣ್ ಕೂಡ ಎಂಟ್ರಿ!
ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಡುಗಡೆಯ ತಯಾರಿಯಲ್ಲಿರುವ ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು ಎನ್ನುವುದು ಹೆಚ್ಚು ಕುತೂಹಲ ಮೂಡಿಸಿದೆ. ಪೂರಿ ಜಗನ್ನಾಥ್, 'ಮಫ್ತಿ' ಖ್ಯಾತಿಯ ನರ್ತನ್ ಜೊತೆ ಯಶ್ ಸಿನಿಮಾ ಮಾಡಬಹುದು ಎನ್ನುವ ಲೆಕ್ಕಾಚಾರ ನಡೆಯುತ್ತಿದೆ.
ಈ ಕಡೆ ಭಾರತದ ಖ್ಯಾತ ನಿರ್ದೇಶಕ ಶಂಕರ್ ಜೊತೆ ಯಶ್ ಹೊಸ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಬಹಳ ದಿನಗಳಿಂದ ಚರ್ಚೆಯಲ್ಲಿದೆ.
ಶಂಕರ್ ಈಗಾಗಲೇ ಕಥೆ ಹೇಳಿದ್ದು, ಯಶ್ ಗೆ ಇಷ್ಟವಾಗಿದೆಯಂತೆ. ಎಲ್ಲ ಅಂದುಕೊಂಡಂತೆ ಆದರೆ 2022ರಲ್ಲಿ ಈ ಸಿನಿಮಾ ಸೆಟ್ಟೇರಬಹುದು ಎಂದು ಹೇಳಲಾಗುತ್ತಿದೆ.

ಅಂದ್ಹಾಗೆ, ಈ ಪ್ರಾಜೆಕ್ಟ್ ಮಲ್ಟಿಸ್ಟಾರ್ ಸಿನಿಮಾ ಆಗಿದ್ದು, ಯಶ್ ಜೊತೆ ತೆಲುಗು ನಟ ರಾಮ್ ಚರಣ್ ಸಹ ಇರಲಿದ್ದಾರಂತೆ. ರಾಮ್ ಚರಣ್ ಜೊತೆ ಸಹ ಶಂಕರ್ ಮಾತುಕತೆ ಮಾಡಿದ್ದು, ಪಾಸಿಟಿವ್ ಆಗಿದ್ದಾರೆ ಎನ್ನಲಾಗಿದೆ.
ಈ ಮೆಗಾ ಪ್ರಾಜೆಕ್ಟ್ ತೆಲುಗು, ತಮಿಳು, ಕನ್ನಡ, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಏಕಕಾಲದಲ್ಲಿ ತಯಾರಾಗಲಿದೆಯಂತೆ. ತಮಿಳು ನಟ ವಿಜಯ್ ಸೇತುಪತಿ ಅವರನ್ನು ಸಹ ಶಂಕರ್ ಸಂಪರ್ಕಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಎಲ್ಲ ಪೂರ್ವ ತಯಾರಿ ನಡೆಸಿದ ಬಳಿಕ ಈ ವರ್ಷ ಅಂತ್ಯದಲ್ಲಿ ಈ ಸಿನಿಮಾ ಕುರಿತು ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ. ಮತ್ತೊಂದೆಡೆ ಕಮಲ್ ಹಾಸನ್ ನಟಿಸುತ್ತಿರುವ ಇಂಡಿಯನ್ 2 ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಪ್ರಸ್ತುತ, ಕಮಲ್ ಹಾಸನ್ ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದಾರೆ.


Click it and Unblock the Notifications











