'ಸಲಾರ್' ಚಿತ್ರದಲ್ಲಿ ರಾಕಿ, ಅಧೀರ, ಅಧೀರ? ಇಲ್ಲಿದೆ ನೋಡಿ ಸಾಕ್ಷಿ ಎಂದ ಅಭಿಮಾನಿಗಳು

ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ರಿಲೀಸ್ ಡೇಟ್ ಹತ್ತಿರವಾಗುತ್ತಿದೆ. ಅದಕ್ಕೂ ಮುನ್ನ ಡಿಸೆಂಬರ್ 1ಕ್ಕೆ ಚಿತ್ರದ ಟ್ರೈಲರ್ ಲಾಂಚ್ ನಡೀತಿದೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ಪ್ರಮೋಷನ್, ರಿಲೀಸ್ ಪ್ಲ್ಯಾನ್ ಮಾಡ್ತಿದೆ ಹೊಂಬಾಳೆ ಫಿಲ್ಮ್ಸ್. ಪ್ರಭಾಸ್ ಅಭಿಮಾನಿಗಳಂತೂ ಸಿನಿಮಾ ನೋಡೋಕೆ ಚಾತಕ ಪಕ್ಷಗಳಂತೆ ಕಾಯುತ್ತಿದ್ದಾರೆ. 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್‌ ಮಾಡಿ ಸಿನಿಮಾ ರಿಲೀಸ್ ಮಾಡಲಾಗುತ್ತಿದೆ.

ಹೈವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ 'ಸಲಾರ್' ಚಿತ್ರದಲ್ಲಿ ಪ್ರಭಾಸ್ ಹೀರೋ ಆಗಿ ಅಬ್ಬರಿಸಿದ್ದಾರೆ. ಶ್ರುತಿ ಹಾಸನ್ ನಾಯಕಿಯಾಗಿ ಮಿಂಚಿದ್ದು ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಈಶ್ವರಿ ರಾವ್, ಬ್ರಹ್ಮಾಜೀ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಈಗಾಗಲೇ ಚಿತ್ರದ ಪೋಸ್ಟರ್‌ಗಳು, ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಸಿನಿಮಾ ಕಥೆ ಬಗ್ಗೆ ಚಿತ್ರತಂಡ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ.

Yash-sanjay-dutt-cameo-in-salaar

ಸೆಟ್ಟೇರಿದ ದಿನದಿಂದಲೂ 'ಸಲಾರ್' ಸಿನಿಮಾ ಕತೆ ಏನು? ಎನ್ನುವ ಬಗ್ಗೆ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತ್ತಾನೆ ಇದೆ. ಕನ್ನಡದ 'ಉಗ್ರಂ' ರೀಮೆಕ್ ಇದು ಎನ್ನುವ ವಾದ ಬಲವಾಗಿ ಕೇಳಿ ಬರ್ತಿದೆ. ಇನ್ನು ಸೂಪರ್ ಹಿಟ್ 'KGF' ಸರಣಿಗೂ ಈ ಚಿತ್ರಕ್ಕೂ ಲಿಂಕ್ ಇದೆ ಎನ್ನುವ ವಾದವೂ ದಟ್ಟವಾಗಿದೆ. ಯಶ್ ಕೂಡ ಸಿನಿಮಾ ಮುಹೂರ್ತ ಸಮಾರಂಭದಲ್ಲಿ ಭಾಗಿ ಆಗಿದ್ದರು. ಅಂದಿನಿಂದಲೇ ಯಶ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತಾರೆ ಎನ್ನುವ ಚರ್ಚೆ ಶುರುವಾಯಿತು.

ಪ್ರಶಾಂತ್ ನೀಲ್ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ 'KGF' ಹಾಗೂ 'ಸಲಾರ್' ಸಿನಿಮಾಗಳಿವೆ ಎನ್ನುವ ಲೆಕ್ಕಾಚಾರ ಕೆಲವರದ್ದು. 'KGF'-3 ಬರುತ್ತೆ ಎಂದು ಕೂಡ ಹೊಂಬಾಳೆ ಸಂಸ್ಥೆ ಹೇಳಿದೆ. ಹಾಗಾಗಿ 'ಸಲಾರ್‌'ಗೂ ರಾಕಿ ಏನೋ ನಂಟಿದೆ ಅನ್ನೋದು ಕೆಲವರ ವಾದ. ಆದರೆ ಈ ಬಗ್ಗೆ ಚಿತ್ರತಂಡ ಮಾತ್ರ ಮೌನವಾಗಿಯೇ ಇದೆ. ಟ್ರೈಲರ್‌ನಲ್ಲಿ ಅಥವಾ ಡಿಸೆಂಬರ್ 22ಕ್ಕೆ ಥಿಯೇಟರ್‌ನಲ್ಲಿ ಇದಕ್ಕೆ ಉತ್ತರ ಸಿಗುವ ಸಾಧ್ಯತೆಯಿದೆ.

'ಸಲಾರ್' ಚಿತ್ರದಲ್ಲಿ ಯಶ್ ಜೊತೆಗೆ ರವೀನಾ ಟಂಡನ್ ಹಾಗೂ ಸಂಜಯ್ ದತ್ ಕೂಡ ನಟಿಸ್ತಾರೆ ಎನ್ನುವ ಚರ್ಚೆ ಇದೀಗ ಶುರುವಾಗಿದೆ. ಅದಕ್ಕೆ ಕಾರಣವಾಗಿದ್ದು ಅದೊಂದು ಸ್ಕ್ರೀನ್‌ ಶಾಟ್. ವಿಕಿಪಿಡಿಯಾದಲ್ಲಿ ಅಭಿಮಾನಿಗಳು ಯಶ್, ರವೀನಾ, ಸಂಜಯ್ ದತ್ ನಟಿಸ್ತಾರೆ ಎಂದು ಎಡಿಟ್ ಮಾಡಿ ಸ್ಕ್ರೀನ್‌ ಶಾಟ್ ವೈರಲ್ ಮಾಡಿದ್ದಾರೆ. 'ಸಲಾರ್' ಕತೆ ಕೂಡ ನೀಲ್ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿದೆ ಎಂದು ಸೇರಿಸಿದ್ದಾರೆ. ಆದರೆ ಅಭಿಮಾನಿಗಳು ಈ ರೀತಿ ಮಾಡಿದ್ದಾರೆ ಅನ್ನೋದು ಅರ್ಥವಾಗುತ್ತಿದೆ. ಆದರೂ ಕೂಡ 'ಸಲಾರ್'ಗೂ ರಾಕಿಗೂ ಏನೋ ನಂಟು ಇದೆ ಎನ್ನುವುದು ಕೆಲವರ ಬಲವಾದ ನಂಬಿಕೆ.

Yash-sanjay-dutt-cameo-in-salaar

ಇತ್ತೀಚೆಗೆ ಚಿಕಿತ್ಸೆಗಾಗಿ ಇಟಲಿಗೆ ಹೋಗಿದ್ದ ಪ್ರಭಾಸ್ ತಾಯ್ನಾಡಿಗೆ ವಾಪಸ್ ಬಂದಿದ್ದಾರೆ. ಬಂದ ಕೂಡಲೇ ಚಿತ್ರದ ಸ್ಪೆಷಲ್ ಸಾಂಗ್ ಶೂಟಿಂಗ್‌ನಲ್ಲಿ ಭಾಗಿ ಆಗಿದ್ದರು ಎನ್ನಲಾಗ್ತಿದೆ. ಸಿಮ್ರನ್ ಕೌರ್ ಚಿತ್ರದ ಸ್ಪೆಷಲ್‌ ಸಾಂಗ್‌ನಲ್ಲಿ ಕುಣಿದಿರುವ ಬಗ್ಗೆ ಗುಸುಗುಸು ಕೇಳಿಬಂದಿದೆ. ರವಿ ಬಸ್ರೂರು ಸಂಗೀತ, ಭುವನ್ ಗೌಡ ಛಾಯಾಗ್ರಹಣ 'ಸಲಾರ್' ಚಿತ್ರಕ್ಕಿದೆ.

ಚಿತ್ರವನ್ನು ಕರ್ನಾಟಕದಲ್ಲಿ ಹೊಂಬಾಳೆ ಸಂಸ್ಥೆ ರಿಲೀಸ್ ಮಾಡುತ್ತಿದೆ. ಕೇರಳದಲ್ಲಿ ಪೃಥ್ವಿರಾಜ್, ತಮಿಳುನಾಡಿನಲ್ಲಿ ರೆಡ್ ಜೆಂಟ್ ಸಂಸ್ಥೆ ವಿತರಣೆ ಜವಾಬ್ದಾರಿ ವಹಿಸಿಕೊಂಡಿದೆ. ಡಿಸೆಂಬರ್ 22ಕ್ಕೆ ಬಹಳ ದೊಡ್ಡ ಮಟ್ಟದಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಪ್ರಭಾಸ್ 'ಸಲಾರ್‌'ಗೆ ಶಾರುಖ್ ಖಾನ್ 'ಡಂಕಿ' ಪೈಪೋಟಿ ಕೊಡುತ್ತಿದೆ. ಒಂದು ದಿನ ಮೊದ್ಲೆ ಈ ಸಿನಿಮಾ ತೆರೆಗೆ ಬರಲಿದೆ.

ಬೆಂಗಳೂರಿನಲ್ಲೇ 'ಸಲಾರ್' ಟ್ರೈಲರ್ ಲಾಂಚ್ ಈವೆಂಟ್ ನಡೆಯುವ ಬಗ್ಗೆ ಚರ್ಚೆ ನಡೀತಿದೆ. ನಗರದ ಒರಾಯನ್ ಮಾಲ್‌ನಲ್ಲಿ ಈವೆಂಟ್ ನಡೆಯುವ ಸಾಧ್ಯತೆಯಿದೆ. ತೆಲುಗು ಮಾತ್ರವಲ್ಲದೇ 5 ಭಾಷೆಗಳಿಗೆ ಸಿನಿಮಾ ಡಬ್ ಆಗಿ ರಿಲೀಸ್ ಆಗುತ್ತಿದೆ. ಕನ್ನಡದಲ್ಲಿ ಪ್ರಭಾಸ್ ಪಾತ್ರಕ್ಕೆ ವಸಿಷ್ಠ ಸಿಂಹ ಡಬ್ ಮಾಡಿದ್ದಾರೆ. 'ಸಲಾರ್' ಕಲ್ಲಿದ್ದಲು ಗಣಿಗಾರಿಕೆ ಸುತ್ತಾ ಸುತ್ತು ಸಿನಿಮಾ ಎನ್ನುವ ಮಾತುಗಳು ಕೇಳಿಬರ್ತಿದೆ. ಪ್ರಶಾಂತ್ ನೀಲ್ ಎಲಿವೇಷನ್‌ಗಳಲ್ಲಿ ಪ್ರಭಾಸ್ ಆರ್ಭಟ ನೋಡಲು ಸಿನಿರಸಿಕರು ಕಾತರರಾಗಿದ್ದಾರೆ.

More from Filmibeat

English summary
Yash, Sanjauy Dutt and raveena tandon to make a cameo in Salaar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X