For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್-2' ಸಿನಿಮಾವನ್ನು ವಿದೇಶದಲ್ಲಿ ರಿಲೀಸ್ ಮಾಡಲು ಹಿಂದೇಟು ಹಾಕುತ್ತಿರುವ ವಿತರಕರು; ಕಾರಣವೇನು?

  |

  ರಾಕಿಂಗ್ ಸ್ಟಾರ್ ಯಶ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್-2ಗಾಗಿ ಇಡೀ ದೇಶ ಕಾತರದಿಂದ ಕಾಯುತ್ತಿದೆ. ಇತ್ತೀಚಿಗಷ್ಟೆ ಯಶ್ ಹುಟ್ಟುಹಬ್ಬಕ್ಕೆ ರಿಲೀಸ್ ಆಗಿರುವ ಕೆಜಿಎಫ್-2 ಪುಟ್ಟ ಟೀಸರ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಮಿಲಿಯನ್ ಗಟ್ಟಲೇ ವೀಕ್ಷಣೆ ಕಂಡು ದಾಖಲೆ ನಿರ್ಮಿಸಿದೆ.

  ವಿದೇಶದಲ್ಲಿ KGF 2 ಗೆ ಎದುರಾಯ್ತು ಅಡ್ಡಿ | Filmibeat Kannada

  ಟೀಸರ್ ಸಿಕ್ಕ ಪ್ರತಿಕ್ರಿಯೆ ನೋಡಿ ಇಡೀ ಭಾರತೀಯ ಸಿನಿಮಾರಂಗ ದಂಗ್ ಆಗಿದೆ. ಟೀಸರ್ ಬಳಿಕ ಕೆಜಿಎಫ್- 2 ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎಂದು ಚಿತ್ರಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದರು. ಇತ್ತೀಚಿಗಷ್ಟೆ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡುವ ಮೂಲಕ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

  ಕೆಜಿಎಫ್ ಚಾಪ್ಟರ್ 2 ರಿಲೀಸ್ ದಿನಾಂಕ ಪಕ್ಕಾ, ಇದೇನಾ ಅಧಿಕೃತ ಡೇಟ್?

  ಅಂದಹಾಗೆ ಸಿನಿಮಾ ರಿಲೀಸ್ ಗೂ ಮೊದಲೆ ಬಿಸಿನೆಸ್ ವಿಚಾರವಾಗಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ದೊಡ್ಡ ಸಿನಿಮಾ ಅಂದ್ಮೇಲೆ ಬಿಸಿನೆಸ್ ಸಹ ದೊಡ್ಡ ಮಟ್ಟದಲ್ಲಿ ಇರುವುದರಲ್ಲಿ ಅಚ್ಚರಿ ಏನಿಲ್ಲ. ಈಗಾಗಲೇ ಹಿಂದಿ ಡಬ್ಬಿಂಗ್ ರೈಟ್ಸ್ ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ನಡುವೆ ಈಗ ಕೆಜಿಎಫ್-2 ವಿದೇಶದಲ್ಲಿ ರಿಲೀಸ್ ಮಾಡಲು ವಿತರಕರು ಯಾರು ಮುಂದೆ ಬರುತ್ತಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ.

  80 ಕೋಟಿ ರೂ.ಗೆ ಬೇಡಿಕೆ

  80 ಕೋಟಿ ರೂ.ಗೆ ಬೇಡಿಕೆ

  ಕಾರಣ ಸಿನಿಮಾದಂಡ ದೊಡ್ಡ ಮೊತ್ತದ ಬೆಲೆ ಡಿಮ್ಯಾಂಡ್ ಮಾಡುತ್ತಿದೆಯಂತೆ. ಮೂಲಗಳ ಪ್ರಕಾರ ಕೆಜಿಎಫ್-2 ಸಿನಿಮಾದ ವಿದೇಶಿ ರಿಲೀಸ್ ಗೆ ಚಿತ್ರತಂಡ ಬರೋಬ್ಬರಿ 80 ಕೋಟಿ ರೂ. ಬೇಡಿಕೆ ಇಟ್ಟಿದ್ದಾರಂತೆ. ಹಾಗಾಗಿ ಇಷ್ಟು ದೊಡ್ಡ ಮೊತ್ತದ ಹಣ ನೀಡಿ ಸಿನಿಮಾವನ್ನು ಕೊಂಡುಕೊಳ್ಳಲು ವಿತರಕರು ಮುಂದೆ ಬರುತ್ತಿಲ್ಲ ಎಂದು ಹೇಳಲಾಗುತ್ತಿದೆ.

  ಕೆಜಿಎಫ್-1, 11ಕೋಟಿ ಕಲೆಕ್ಷನ್ ಮಾಡಿತ್ತು

  ಕೆಜಿಎಫ್-1, 11ಕೋಟಿ ಕಲೆಕ್ಷನ್ ಮಾಡಿತ್ತು

  ಕೆಜಿಎಫ್-1 ವಿದೇಶದಲ್ಲಿ 11 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ. ಹಾಗಾಗಿ ಪಾರ್ಟ್-2 ಅನ್ನು ಬರೋಬ್ಬರಿ 80 ಕೋಟಿ ರೂಪಾಯಿ ಬೇಡಿಕೆ ಇಟ್ಟರೆ ಯಾರು ರಿಲೀಸ್ ಮಾಡಲು ಮುಂದೆ ಬರುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದನ್ನು ಸಿನಿಮಾತಂಡವೇ ಬಹಿರಂಗ ಪಡಿಸಬೇಕಿದೆ.

  Big Buzz: ಕೆಜಿಎಫ್ ಚಾಪ್ಟರ್ 2 ಹಿಂದಿ ಹಕ್ಕು ದಾಖಲೆ ಬೆಲೆಗೆ ಸೇಲ್?

  ಹಿಂದಿ ಮತ್ತು ತೆಲುಗಿನಲ್ಲಿ ದಾಖಲೆ ಬೆಲೆಗೆ ಸೇಲ್

  ಹಿಂದಿ ಮತ್ತು ತೆಲುಗಿನಲ್ಲಿ ದಾಖಲೆ ಬೆಲೆಗೆ ಸೇಲ್

  ಕೆಜಿಎಫ್ ಚಾಪ್ಟರ್ 2 ಹಿಂದಿ ವರ್ಷನ್ ಗೆ ಫರಾನ್ ಅಖ್ತರ್ ಸಂಸ್ಥೆ ಸುಮಾರು 90 ಕೋಟಿ ರೂಪಾಯಿ ತನ್ನ ತೆಕ್ಕೆಗೆ ಪಡೆದುಕೊಂಡಿದೆ ಎಂದು ಹೇಳಲಾಗಿದೆ. ಇದು ಮೂಲ ಚಿತ್ರದ ಬಜೆಟ್ ಗಿಂತ ಹೆಚ್ಚು ಎಂದು ಸ್ವತಃ ಎಕ್ಸೆಲ್ ಸಂಸ್ಥೆಯ ಮೂಲಗಳು ತಿಳಿಸಿವೆ. ಇನ್ನೂ ತೆಲುಗಿನಲ್ಲಿ ಸುಮಾರು 60 ಕೋಟಿ ರೂಪಾಯಿ ಹಣ ನೀಡಿ ಡಿಜಿಟಲ್ ಹಾಗೂ ಸ್ಯಾಟ್ ಲೈಟ್ ಹಕ್ಕು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

  ಜುಲೈ 16ಕ್ಕೆ ರಿಲೀಸ್

  ಜುಲೈ 16ಕ್ಕೆ ರಿಲೀಸ್

  ಕೆಜಿಎಫ್-2 ಸಿನಿಮಾ ಜುಲೈ 16ಕ್ಕೆ ವರ್ಲ್ಡ್ ವೈಡ್ ರಿಲೀಸ್ ಆಗುತ್ತಿದೆ. ಕೆಜಿಎಫ್ ಮೊದಲ ಭಾಗಕ್ಕಿಂತ ಎರಡನೇ ಭಾಗದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಚಿತ್ರದಲ್ಲಿ ಸಂಜಯ್ ದತ್ ಮತ್ತು ರವೀನಾ ಟಂಡನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಮಿಂಚಿದ್ದಾರೆ. ಪಾರ್ಟ್-2ನಲ್ಲಿ ಪ್ರಕಾಶ್ ರೈ ಸಹ ಬಣ್ಣ ಹಚ್ಚಿದ್ದಾರೆ.

  English summary
  Yash starrer KGF-2 makers Demand huge Amount For Overseas Rights.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X