'KGF-2' ರಿಲೀಸ್ ಮುಂದಕ್ಕೆ ಸಾಧ್ಯತೆ: ಯಾವಾಗ ಬಿಡುಗಡೆಯಾಗುತ್ತೆ ಸಿನಿಮಾ?

ರಾಕಿಂಗ್ ಸ್ಟಾರ್ ಅಭಿನಯದ ಬಹುನಿರೀಕ್ಷೆ ಕೆಜಿಎಪ್-2 ಸಿನಿಮಾಗಾಗಿ ಇಡೀ ಭಾರತೀಯ ಚಿತ್ರರಂಗ ಎದುರು ನೋಡುತ್ತಿದೆ. ಕೆಜಿಎಫ್ ಮೊದಲ ಭಾಗದ ದೊಡ್ಡ ಯಶಸ್ಸಿನ ನಂತರ ಪಾರ್ಟ್-2 ಮೇಲಿನ ನಿರೀಕ್ಷೆ, ಕುತೂಹಲ, ಕಾತರ ದುಪ್ಪಟ್ಟಾಗಿದೆ.

ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಎಂದು ಜಾತಕಪಕ್ಷಿಯಂತೆ ಕಾಯುತ್ತಿದ್ದ ಅಭಿಮಾನಿಗಳಿಗೆ, ಚಿತ್ರತಂಡ ಬಿಡುಗಡೆಯ ದಿನಾಂಕ ಅನೌನ್ಸ್ ಮಾಡಿ ಕುತೂಹಲಕ್ಕೆ ಬ್ರೇಕ್ ಹಾಕಿತ್ತು. ಹೌದು, ಸಿನಿಮಾ ಅಕ್ಟೋಬರ್ 23ಕ್ಕೆ ಅಂದರೆ ದಸರ ಹಬ್ಬದ ಸಮಯಕ್ಕೆ ರಿಲೀಸ್ ಮಾಡಲು ಸಿದ್ಧವಾಗಿತ್ತು. ಆದರೀಗ ಕೊರೊನಾ ಅಟ್ಟಹಾಸದ ಪರಿಣಾಮ ಸಿನಿಮಾ ರಿಲೀಸ್ ಮುಂದಕ್ಕೆ ಹೋಗುತ್ತೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಮುಂದೆ ಓದಿ...

ಕೊರೊನಾ ವೈರಸ್ ಕಾಟ: KGF-2 ರಿಲೀಸ್ ಮುಂದಕ್ಕೆ?

ಕೊರೊನಾ ವೈರಸ್ ಕಾಟ: KGF-2 ರಿಲೀಸ್ ಮುಂದಕ್ಕೆ?

ಕೊರೊನಾ ವೈರಸ್ ಅಟ್ಟಹಾಸದ ಪರಿಣಾಮ ಸಿನಿಮಾ ರಿಲೀಸ್ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನೂ ಚಿತ್ರೀಕರಣ ಅನೇಕ ದಿನಗಳು ಭಾಕಿ ಇದೆ. ಒಂದು ವೇಳೆ ಲಾಕ್ ಡೌನ್ ಮುಗಿದರು ಚಿತ್ರೀಕರಣಕ್ಕೆ ಅನುಮತಿ ಸಿಗುವುದು ಅನುಮಾನ. ಹಾಗಾಗಿ ಚಿತ್ರೀಕರಣ ತಡವಾಗುವ ಸಾಧ್ಯತೆ ಇದೆ. ಇದರಿಂದ ರಿಲೀಸ್ ಮಂದಕ್ಕೆ ಹೋಗುವುದು ಬಹುತೇಕ ಖಚಿತ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಡಿಸೆಂಬರ್ ನಲ್ಲಿ ರಿಲೀಸ್?

ಡಿಸೆಂಬರ್ ನಲ್ಲಿ ರಿಲೀಸ್?

ಕೆಜಿಎಫ್-2 ಸಿನಿಮಾ ಅಕ್ಟೋಬರ್ ಬದಲು ಡಿಸೆಂಬರ್ ನಲ್ಲಿ ತೆರೆಗೆ ಬರಲಿದೆ ಎಂದು ಮೂಲಗಳು ಹೇಳುತ್ತಿವೆ. ಡಿಸೆಂಬರ್ ಅಂದರೆ ಕ್ರಿಸ್ ಮಸ್ ಸಮಯದಲ್ಲಿ ಕೆಜಿಎಫ್-2 ಬಿಡುಗಡೆಯಾಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೆ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ.

ಕೆಜಿಎಫ್-1 ಡಿಸೆಂಬರ್ ಗೆ ರಿಲೀಸ್ ಆಗಿತ್ತು

ಕೆಜಿಎಫ್-1 ಡಿಸೆಂಬರ್ ಗೆ ರಿಲೀಸ್ ಆಗಿತ್ತು

ಕೆಜಿಎಫ್-1 ಸಹ ಡಿಸೆಂಬರ್ ಗೆ ರಿಲೀಸ್ ಆಗಿತ್ತು. ಡಿಸೆಂಬರ್ 20ಕ್ಕೆ ಕೆಜಿಎಫ್ ದಕ್ಷಿಣ ಭಾರತೀಯ ಭಾಷೆಗಳ ಜೊತೆಗೆ ಬಾಲಿವುಡ್ ನಲ್ಲಿಯೂ ಬಿಡುಗಡೆಯಾಗಿತ್ತು. ರಾಕಿ ಭಾಯ್ ಅಬ್ಬರಕ್ಕೆ ಸಿನಿಪ್ರಿಯರು ದಂಗಾಗಿದ್ದರು. ಈಗ ಪಾರ್ಟ್-2 ಮೂಲಕ ಮೂರು ವರ್ಷಗಳ ಬಳಿಕ ಮತ್ತೆ ಡಿಸೆಂಬರ್ ನಲ್ಲಿಯೇ ಅಭಿಮಾನಿಗಳ ಮುಂದೆ ಬರುವ ಸಾಧ್ಯತೆ ಹೆಚ್ಚಿದೆ.

ರೋಚಕವಾಗಿರಲಿದೆ ಎರಡನೇ ಭಾಗ

ರೋಚಕವಾಗಿರಲಿದೆ ಎರಡನೇ ಭಾಗ

ಕೆಜಿಎಫ್ ಮೊದಲ ಭಾಗಕ್ಕಿಂತ ಎರಡನೆ ಭಾಗ ಮತ್ತಷ್ಟು ರೋಚಕವಾಗಿರಲಿದಂತೆ. ರಾಕಿ ಭಾಯ್ ಮತ್ತು ಅಧೀರನ ಕಾಳಗ ಹೆಚ್ಚಾಗಿರಲಿದ್ದು, ಇಬ್ಬರ ಫೈಟ್ ನೋಡಲು ಅಭಿಮಾನಿಗಳು ಭಾರಿ ಕುತೂಹಲದಿಂದ ಕಾಯುತ್ತಿದ್ದಾರೆ. ಅಕ್ಟೋಬರ್ ನಲ್ಲಿ ಸಿನಿಮಾ ನೋಡಲು ಕಾಯುತ್ತಿದ್ದ ಚಿತ್ರಪ್ರಿಯರೀಗ ಸಿನಿಮಾ ಡಿಸೆಂಬರ್ ಗೆ ಬರುವ ಸಾಧ್ಯತೆ ಇದೆ ಎನ್ನುವ ಸುದ್ದಿ ನಿರಾಸೆ ಮೂಡಿಸಿದೆ.

More from Filmibeat

English summary
Rocking star yash starrer KGF-2 film may get postponed due to Corona.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X