KGF 2 Day 1 Box Office Collection: ಅಚ್ಚರಿಗೊಳಿಸುತ್ತೆ ಮೊದಲ ದಿನದ ಬಾಕ್ಸಾಫೀಸ್ ಕಲೆಕ್ಷನ್ ಲೆಕ್ಕಾಚಾರ!

'ಕೆಜಿಎಫ್ 2' ಚಿತ್ರದ ರಿಲೀಸ್‌ಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ವಾರ ಕಳೆದರೆ ರಾಕಿ ಭಾಯ್ ಸಾಮ್ಯಾಜ್ಯ ಕಣ್ಣ ಮುಂದೆ ಅನಾವರಣಗೊಳ್ಳುತ್ತದೆ. ಚಿತ್ರವನ್ನು ಕಣ್ತುಂಬಿ ಕೊಳ್ಳಲು ಇಡೀ ವಿಶ್ವಾದ್ಯಂತ ಪ್ರೇಕ್ಷಕರು ಕಾಯುತ್ತಿದ್ದಾರೆ. ಅದಕ್ಕೆ ತಕ್ಕಂತೆ ಆದಷ್ಟು ಜನರನ್ನು ತಲುಪುವ ನಿಟ್ಟಿನಲ್ಲಿ 'ಕೆಜಿಎಫ್ 2' ಚಿತ್ರತಂಡ ಪ್ರಯತ್ನ ಪಡುತ್ತಿದೆ. ಹಾಗಾಗಿ ಸಾಧ್ಯವಾದಷ್ಟು ಕಡೆಗಳಲ್ಲಿ ಚಿತ್ರವನ್ನು ರಿಲೀಸ್ ಮಾಡಲಾಗುತ್ತಿದೆ.

'ಕೆಜಿಎಫ್ 2' ಈಗ ಕನ್ನಡದ ಅಥವಾ ಭಾರತೀಯ ಚಿತ್ರವಾಗಿ ಮಾತ್ರ ಉಳಿದಿಲ್ಲ. ಈ ಚಿತ್ರವನ್ನು ವರ್ಲ್ಡ್ ಸಿನಿಮಾ ಎಂದು ಕರೆದರೆ ಅದು ಅತಿಶಯೋಕ್ತಿ ಆಗಲಾರದು. ಯಾಕೆಂದರೆ ವಿಶ್ವಾದ್ಯಂತ ಹಲವು ದೇಶಗಳಲ್ಲಿ 'ಕೆಜಿಎಫ್ 2' ಚಿತ್ರ ರಿಲೀಸ್ ಆಗುತ್ತಿದೆ. ಚಿತ್ರ ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ಹಾಗೆಂದ ಮೇಲೆ ದೊಡ್ಡ ಮಟ್ಟದಲ್ಲೇ ಬಾಕ್ಸಾಫೀಸ್ ಕೊಳ್ಳೆ ಹೊಡೆಯೋದು ಪಕ್ಕಾ.

ಸದ್ಯ 'ಕೆಜಿಎಫ್ 2' ಚಿತ್ರದ ಗಳಿಕೆಯ ಬಗ್ಗೆ ಸಾಕಷ್ಟು ಲೆಕ್ಕಾಚಾರಗಳು ಹುಟ್ಟಿಕೊಂಡಿವೆ. ಈಗಾಗಲೇ ಹಲೆವೆಡೆ 'ಕೆಜಿಎಫ್ 2' ಚಿತ್ರದ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಜೊತೆಗೆ ವಿಶ್ವಾದ್ಯಂತ ಚಿತ್ರ ರಿಲೀಸ್ ಗುತ್ತಿರುವ ಚಿತ್ರಮಂದಿರಗಳ ಸಂಖ್ಯೆಯೂ ಏರುತ್ತಾ ಇದೆ. ಹಾಗಾಗಿ 'ಕೆಜಿಎಫ್ 2' ಮೊದಲ ದಿನ ಎಷ್ಟು ಗಳಿಕೆ ಮಾಡ ಬಹುದು ಎನ್ನುವ ಲೆಕ್ಕಾಚಾರ ಇಲ್ಲಿದೆ. ಮುಂದೆ ಓದಿ...

'ಕೆಜಿಎಫ್ 2' ಮೊದಲ ದಿನದ ಕಲೆಕ್ಷನ್ 90 ಕೋಟಿ!

'ಕೆಜಿಎಫ್ 2' ಮೊದಲ ದಿನದ ಕಲೆಕ್ಷನ್ 90 ಕೋಟಿ!

'ಕೆಜಿಎಫ್ 2' ಚಿತ್ರದ ಹವಾ ಜೋರಾಗಿದೆ. ಚಿತ್ರದ ರಿಲೀಸ್‌ಗಿಂತಲೂ ಹೆಚ್ಚಾಗಿ, ಚಿತ್ರದ ಮೊದಲ ದಿನದ ಕಲೆಕ್ಷನ್ ಬಗ್ಗೆ ಹೆಚ್ಚು ಸುದ್ದಿ ಆಗುತ್ತಾ ಇದೆ. ಈ ಚಿತ್ರದ ಗಳಿಕೆ ಮೇಲೆ ಎಲ್ಲರ ಕಣ್ಣಿದೆ. ಸದ್ಯ ಟ್ರೇಡ್ ವಿಶ್ಲೇಷಕರ ಪ್ರಕಾರ 'ಕೆಜಿಎಫ್ 2' ಮೊದಲ ದಿನ ಎಷ್ಟು ಗಳಿಕೆ ಆಗಲಿದೆ ಎನ್ನುವ ಅಂದಾಜಿನ ಲೆಕ್ಕಾಚಾರ ಹೊರ ಬಿದ್ದಿದೆ. 'ಕೆಜಿಎಫ್ 2' ಮೊದಲ ದಿನ ಭಾರತದಾದ್ಯಂತ 90 ಕೋಟಿ ರೂ. ಗಳಿಕೆ ಮಾಡಲಿದೆ ಎನ್ನಲಾಗಿದೆ.

ಭಾರತದಲ್ಲಿ ಮಾತ್ರ 90 ಕೋಟಿ, ವಿಶ್ವಾದ್ಯಂತ ಇನ್ನೆಷ್ಟು?

ಭಾರತದಲ್ಲಿ ಮಾತ್ರ 90 ಕೋಟಿ, ವಿಶ್ವಾದ್ಯಂತ ಇನ್ನೆಷ್ಟು?

ಸದ್ಯದ ಮಾಹಿತಿ ಪ್ರಕಾರ 'ಕೆಜಿಎಫ್ 2' ಚಿತ್ರ ಭಾರತದಾತ್ಯಂತ 90 ಕೋಟಿಯ ಗಡಿ ಮುಟ್ಟಲಿದೆ ಎನ್ನಲಾಗಿದೆ. ಆದರೆ ವಿಶ್ವದ ಲೆಕ್ಕಾಚಾರ ತೆಗೆದುಕೊಂಡರೆ 100 ಕೋಟಿಯ ಗಡಿ ದಾಟುವುದು ಪಕ್ಕಾ ಎನ್ನಲಾಗುತ್ತಿದೆ. ಯಾಕೆಂದರೆ 'ಕೆಜಿಎಫ್ 2' ವಿಶ್ವಾದ್ಯಂತ ಹಲವು ದೇಶಗಳಲ್ಲಿ ತೆರೆಗೆ ಬರುತ್ತಿದೆ. ಹಾಗಾಗಿ ಈ ಚಿತ್ರದ ಮೊದಲ ದಿನದ ಒಟ್ಟಾರೆ ಗಳಿಕೆ 100 ಕೋಟಿಗೂ ಅಧಿಕ ಆಗಲಿದೆ.

ಹಿಂದಿ ಬಾಕ್ಸಾಫೀಸ್ ಚಿಂದಿ ಮಾಡಲಿದೆ 'ಕೆಜಿಎಫ್ 2'!

ಹಿಂದಿ ಬಾಕ್ಸಾಫೀಸ್ ಚಿಂದಿ ಮಾಡಲಿದೆ 'ಕೆಜಿಎಫ್ 2'!

'ಕೆಜಿಎಫ್ 2' ಚಿತ್ರ ಸೌತ್‌ನಲ್ಲಿ ಒಂದು ರೀತಿಯ ಕ್ರೇಜ್ ಹುಟ್ಟು ಹಾಕಿದರೆ, ಸೌತ್‌ನಲ್ಲಿ ಮತ್ತೊಂದು ರೀತಿಯ ಕ್ರೇಜ್ ಹುಟ್ಟು ಹಾಕಿದೆ. ಹಿಂದಿಯಲ್ಲಿ ಈ ಚಿತ್ರಕ್ಕೆ ಹೆಚ್ಚಿನ ಕ್ರೇಜ್ ಇದೆ. ಹಿಂದಿ ಪ್ರೇಕ್ಷಕರು ಕೆಜಿಎಫ್‌ಗೆ ಮರುಳಾಗಿದ್ದಾರೆ. ಹಾಗಾಗಿ ನಾರ್ತ್‌ನಲ್ಲಿ ಚಿತ್ರ ಉತ್ತಮ ಕಲೆಕ್ಷನ್ ಮಾಡುವ ಭರವಸೆ ಇದೆ. ಇನ್ನು ಹಿಂದಿಯಲ್ಲೇ ಪ್ರತ್ಯೇಕವಾಗಿ 'ಕೆಜಿಎಫ್ 2' ಕೋಟಿ, ಕೋಟಿ ಬಾಚುವುದರಲ್ಲಿ ಅನುಮಾನ ಇಲ್ಲ.

ಏಪ್ರಿಲ್ 14ಕ್ಕೆ ರಾಕಿ ಭಾಯ್ ಎಂಟ್ರಿ!

ಏಪ್ರಿಲ್ 14ಕ್ಕೆ ರಾಕಿ ಭಾಯ್ ಎಂಟ್ರಿ!

ಈ ಎಲ್ಲಾ ಲೆಕ್ಕಾಚಾರಗಳಿಗೂ ಏಪ್ರಿಲ್ 14ಕ್ಕೆ ಉತ್ತರ ಸಿಗಲಿದೆ. ಚಿತ್ರ ರಿಲೀಸ್ ಆದ ಬಳಿಕ ಮೊದಲ ದಿನ ಎಷ್ಟು ಲೂಟಿ ಮಾಡಿದೆ ಎನ್ನುವ ಲೆಕ್ಕಾಚಾರ ಹೊರ ಬೀಳಲಿದೆ. 90 ಕೋಟಿ ಎನ್ನುವುದು ಕೇವಲ ನಿರೀಕ್ಷೆ ಮಾತ್ರ. ಆದರೆ ಚಿತ್ರದ ಅಸಲಿ ಗಳಿಕೆ ಎಷ್ಟು, ಬಾಕ್ಸಾಫೀಸ್‌ನಲ್ಲಿ ರಾಕಿ ಬರೆಯುವ ದಾಖಲೆ ಏನು ಎನ್ನುವುದು ಏಪ್ರಿಲ್ 14ಕ್ಕೆ ಗೊತ್ತಾಗಲಿದೆ.

More from Filmibeat

English summary
Yash Starrer KGF 2 Movie Day 1 Box Office Collection Prediction Is 90 Crore, Details Is Here,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X