For Quick Alerts
  ALLOW NOTIFICATIONS  
  For Daily Alerts

  ಒಂದೇ ಮಾರ್ಗದಲ್ಲಿ ಜೋಡೆತ್ತು: ಯಶ್ ಮುಂದಿನ ಸಿನಿಮಾ ಬಗ್ಗೆ ಥ್ರಿಲ್ಲಿಂಗ್ ಸುದ್ದಿ

  |

  ಕೆಜಿಎಫ್ ಚಾಪ್ಟರ್ 2 ಸಿನಿಮಾದ ಬಿಡುಗಡೆಯಾಗಿ ಕಾದು ಕುಳಿತಿರುವ ರಾಕಿಂಗ್ ಸ್ಟಾರ್ ಯಶ್ ತಮ್ಮ ಮುಂದಿನ ಚಿತ್ರದ ಬಗ್ಗೆ ಸಣ್ಣ ಸುಳಿವು ಸಹ ಬಿಟ್ಟುಕೊಟ್ಟಿಲ್ಲ. ಕೆಜಿಎಫ್ ರಿಲೀಸ್ ಆದ ಬಳಿಕವೇ ಹೊಸ ಸಿನಿಮಾ ಘೋಷಣೆ ಮಾಡುವ ಚಿಂತನೆಯಲ್ಲಿದ್ದಾರೆ ರಾಕಿ ಭಾಯ್.

  ಒಂದೇ ಮಾರ್ಗದಲ್ಲಿ ನಡೆಯಲು ಮುಂದಾದ ಜೋಡೆತ್ತು | Filmibeat Kannada

  ಈ ನಡುವೆ 'ಮಫ್ತಿ' ಖ್ಯಾತಿಯ ನರ್ತನ್ ಜೊತೆ ಯಶ್ ಮುಂದಿನ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಬಹಳ ದಿನಗಳಿಂದಲೂ ಚರ್ಚೆಯಲ್ಲಿದೆ. ಈ ಹಿಂದೆ ಯಶ್‌ಗಾಗಿ ಕಥೆ ಮಾಡುತ್ತಿರುವೆ ಎಂದು ನರ್ತನ್ ಹೇಳಿಕೊಂಡಿದ್ದರು. ಹಾಗಾಗಿ, ರಾಕಿಂಗ್ ಸ್ಟಾರ್ ಮುಂದಿನ ತಯಾರಿ ಸದ್ದಿಲ್ಲದೇ ನಡೆಯುತ್ತಿದೆ, ಕೆಜಿಎಫ್ ರಿಲೀಸ್ ಆಗುತ್ತಿದ್ದಂತೆ ಮುಂದಿನ ಪ್ರಾಜೆಕ್ಟ್‌ ಬಗ್ಗೆ ಅಧಿಕೃತ ಮಾಹಿತಿ ಸಿಗಬಹುದು.

  ರಾಕ್ ಲೈನ್ ನಿರ್ಮಾಣದ ಹೊಸ ಸಿನಿಮಾದಲ್ಲಿ ದರ್ಶನ್ ಪಾತ್ರ ರಿವೀಲ್ರಾಕ್ ಲೈನ್ ನಿರ್ಮಾಣದ ಹೊಸ ಸಿನಿಮಾದಲ್ಲಿ ದರ್ಶನ್ ಪಾತ್ರ ರಿವೀಲ್

  ಆದ್ರೀಗ, ಯಶ್-ನರ್ತನ್ ಪ್ರಾಜೆಕ್ಟ್‌ ಬಗ್ಗೆ ಥ್ರಿಲ್ಲಿಂಗ್ ಸುದ್ದಿಯೊಂದು ಗಾಂಧಿನಗರದಲ್ಲಿ ಗಿರಿಗಿಟ್ಲೆ ಹೊಡೆಯುತ್ತಿದೆ. ಈ ಸುದ್ದಿ ಕೇಳಿದ ಸಿನಿಮಾ ಮಂದಿ 'ಜೋಡೆತ್ತು'ಗಳು ಒಂದೇ ಮಾರ್ಗದಲ್ಲಿ ಹೋಗ್ತಿದ್ದಾರಲ್ವಾ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ, ಯಶ್ ಮುಂದಿನ ಸಿನಿಮಾದ ಬಗ್ಗೆ ಬಹಿರಂಗವಾಗಿರುವ ಸುದ್ದಿ ಯಾವುದು? ಜೋಡೆತ್ತುಗಳ ಕಹಾನಿ ಏನು? ಮುಂದೆ ಓದಿ...

  ಯಶ್ ಪಾತ್ರ ಬಹಿರಂಗ

  ಯಶ್ ಪಾತ್ರ ಬಹಿರಂಗ

  ಕೆಜಿಎಫ್ ನಂತರದ ಸಿನಿಮಾದಲ್ಲಿ ಯಶ್ ಯಾವ ರೀತಿ ಪಾತ್ರ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಕ್ಸಸ್ ಕಂಡ ಬಳಿ ಮತ್ತೆ ಪ್ಯಾನ್ ಇಂಡಿಯಾ ಸಬ್ಜೆಕ್ಟ್ ಹುಡುಕಬೇಕಾದ ಅನಿವಾರ್ಯತೆಯೂ ಇದೆ. ಅದಕ್ಕಾಗಿ ನಿರ್ದೇಶಕ ನರ್ತನ್ ಪ್ಲಾನ್ ಮಾಡಿ ಕಥೆ ರೆಡಿ ಮಾಡಿದ್ದಾರೆ. ಈಗ ಸಿದ್ದ ಮಾಡಿರುವ ಕಥೆ ಪಕ್ಕಾ ಪ್ಯಾನ್ ಇಂಡಿಯಾ ಪ್ರೇಕ್ಷಕರು ಒಪ್ಪುವಂತಿದೆ.

  ನೇವಿ ಅಧಿಕಾರಿಯಾಗ್ತಾರಾ ಯಶ್?

  ನೇವಿ ಅಧಿಕಾರಿಯಾಗ್ತಾರಾ ಯಶ್?

  ನರ್ತನ್ ಮತ್ತು ಯಶ್ ಜೋಡಿಯಲ್ಲಿ ಮೂಡಿಬರಲಿರುವ ಸಿನಿಮಾದಲ್ಲಿ ಯಶ್ ನೌಕಾಪಡೆ ಅಧಿಕಾರಿ (ನೇವಿ ಆಫೀಸರ್) ಪಾತ್ರದಲ್ಲಿ ನಟಿಸುವ ಸಾಧ್ಯತೆ ಹೆಚ್ಚಿದೆಯಂತೆ. ಯಶ್ ಪಾಲಿಗೆ ಇದು ಬಹಳ ವಿಶೇಷ ಪಾತ್ರವಾಗಿರಲಿದ್ದು, ಕೆಜಿಎಫ್ ರೀತಿ ನಿರೀಕ್ಷೆ ಹುಟ್ಟಿಸುವಲ್ಲಿ ಯಾವುದೇ ಅನುಮಾನವಿಲ್ಲ.

  ಕೋಪಿಷ್ಠ ಅಧಿಕಾರಿ

  ಕೋಪಿಷ್ಠ ಅಧಿಕಾರಿ

  ನೇವಿ ಆಫೀಸರ್ ಆಗಿದ್ದರು ಬಹಳ ಕೋಪಿಷ್ಠ ವ್ಯಕ್ತಿಯಾಗಿರ್ತಾರೆ. ಅತ್ಯುನ್ನುತ ಹುದ್ದೆ ಜೊತೆ ಕೋಪಿಷ್ಠ ಅಧಿಕಾರಿಯಾಗಿದ್ದರೆ ಹೇಗಿರುತ್ತದೆ ಎಂಬುದರ ಸುತ್ತ ಸ್ಕ್ರಿಪ್ಟ್ ಮಾಡಲಾಗುತ್ತಿದೆ ಎಂಬ ವಿಷಯ ತಿಳಿದು ಬಂದಿದೆ.

  ಯಶ್ ಜತೆ ಮುಂದಿನ ಸಿನಿಮಾ ಸುದ್ದಿ: ನಿರ್ದೇಶಕ ನರ್ತನ್ ಹೇಳಿದ್ದೇನು?ಯಶ್ ಜತೆ ಮುಂದಿನ ಸಿನಿಮಾ ಸುದ್ದಿ: ನಿರ್ದೇಶಕ ನರ್ತನ್ ಹೇಳಿದ್ದೇನು?

  ಒಂದೇ ಮಾರ್ಗದಲ್ಲಿ ಜೋಡೆತ್ತು

  ಒಂದೇ ಮಾರ್ಗದಲ್ಲಿ ಜೋಡೆತ್ತು

  ಅಂದ್ಹಾಗೆ, ಈ ವಿಚಾರದಲ್ಲಿ ನಟ ದರ್ಶನ್ ಮತ್ತು ಯಶ್ ಒಂದೇ ಮಾರ್ಗದಲ್ಲಿ ಹೆಜ್ಜೆಯಿಡುತ್ತಿದ್ದಾರೆ. ರಾಕ್‌ಲೈನ್ ವೆಂಕಟೇಶ್ ಜೊತೆಗಿನ ಸಿನಿಮಾದಲ್ಲಿ ದರ್ಶನ್ ಸಹ ನೇವಿ ಆಫೀಸರ್ ಪಾತ್ರ ನಿರ್ವಹಿಸುತ್ತಿದ್ದಾರೆ ಎಂಬ ವಿಷಯ ಸುದ್ದಿಯಲ್ಲಿದೆ. ಈಗ ಯಶ್ ಸಹ ನೇವಿ ಆಫೀಸರ್ ಆಗ್ತಿದ್ದಾರೆ. ಹಾಗಾಗಿ, ಜೋಡೆತ್ತುಗಳ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ದೊಡ್ಡ ಮಟ್ಟದ ಕುತೂಹಲ ಹುಟ್ಟಿಕೊಂಡಿದೆ.

  ಮದಕರಿ ನಾಯಕ ಚಿತ್ರಕ್ಕೂ ಮೊದಲು

  ಮದಕರಿ ನಾಯಕ ಚಿತ್ರಕ್ಕೂ ಮೊದಲು

  ರಾಬರ್ಟ್ ಚಿತ್ರದ ಬಳಿಕ ದರ್ಶನ್ 'ಗಂಡುಗಲಿ ಮದಕರಿ ನಾಯಕ' ಸಿನಿಮಾ ಶುರು ಮಾಡಬೇಕಿತ್ತು. ಮೊದಲ ಹಂತದ ಚಿತ್ರೀಕರಣ ಸಹ ಮುಗಿದಿತ್ತು. ಆದರೆ, ಕೋವಿಡ್ ಪರಿಸ್ಥಿತಿಂದ ಮುಕ್ತವಾಗಿ ಹೊರಾಂಗಣದಲ್ಲಿ ಶೂಟಿಂಗ್ ಮಾಡಲು ಸಾಧ್ಯವಿಲ್ಲ. ಹಾಗಾಗಿ, ಅದಕ್ಕೂ ಮುಂಚೆ ರಾಕ್‌ಲೈನ್ ಜೊತೆ ಮತ್ತೊಂದು ಚಿತ್ರ ಆರಂಭಿಸುತ್ತಿದ್ದು, ಅದಕ್ಕೆ 'ಗೋಲ್ಡ್ ರಿಂಗ್' ಎಂದು ಶೀರ್ಷಿಕೆ ಸಹ ಅಂತಿಮವಾಗಿದೆ ಎಂಬ ಮಾಹಿತಿ ಇದೆ.

  English summary
  After Challenging star Darshan, Yash also set to do a Navy officer role in his next project with Narthan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X