TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
'ಕೆಜಿಎಫ್' ನಂತರ ತಮಿಳಿನಲ್ಲಿ ಯಶ್ ಗಾಗಿ ತಯಾರಾಗಿದೆ ಮೆಗಾ ಸಿನಿಮಾ.!

ಕೆಜಿಎಫ್ ಚಿತ್ರದ ನಂತರ ನ್ಯಾಷನಲ್ ಸ್ಟಾರ್ ಆಗಿರುವ ಯಶ್ ಗೆ ಪರಭಾಷೆಯಿಂದ ಆಫರ್ ಗಳು ಬರ್ತಿದೆ ಎಂದು ಸ್ವತಃ ಯಶ್ ಅವರೇ ಹೇಳಿದ್ದರು. ಸದ್ಯ 'ಚಾಪ್ಟರ್-2' ಸಿನಿಮಾ ಬಗ್ಗೆ ಯೋಚನೆ ಮಾಡ್ತಿರುವ ರಾಕಿ ಭಾಯ್, ಬೇರೆ ಸಿನಿಮಾಗಳಿಗೆ ಒಪ್ಪಿಗೆ ಸೂಚಿಸಿಲ್ಲ ಎಂದಿದ್ದರು.
ಇದೀಗ, ತಮಿಳು ಇಂಡಸ್ಟ್ರಿಯಿಂದ ಬಿಗ್ ಬ್ರೇಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ತಮಿಳಿನ ಖ್ಯಾತ ಬರಹಗಾರ್ತಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಸುಚಿತ್ರಾ ರಾವ್ ಅವರ ಕಾದಂಬರಿಯೊಂದು ಸಿನಿಮಾ ಆಗುತ್ತಿದ್ದು, ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಅಭಿನಯಿಸಲಿದ್ದಾರೆ ಎನ್ನಲಾಗಿದೆ.
ರಾಕಿ ಭಾಯ್ ಮೇಲೆ ಬಿತ್ತು ಪರಭಾಷಿಗರ ಕಣ್ಣು, ಇನ್ಮುಂದೆ ಕಾಲ್ ಶೀಟ್ ಕಷ್ಟ.!
ವಿಶೇಷ ಅಂದ್ರೆ, ಈ ಸಿನಿಮಾ ನಾಲ್ಕು ಭಾಷೆಯಲ್ಲಿ ಬರಲಿದ್ದು, ನಾಲ್ಕು ಭಾಷೆಯ ದೊಡ್ಡ ನಟರು ಆಯಾ ಆಯಾ ಭಾಷೆಯ ಸಿನಿಮಾದಲ್ಲಿ ನಟಿಸಲಿದ್ದಾರಂತೆ.? ಹಾಗಿದ್ರೆ, ಇದು ಯಾವ ಸಿನಿಮಾ? ಯಾರು ಆ ನಾಲ್ಕು ನಾಯಕರು? ಮುಂದೆ ಓದಿ.....
'ದಿ ಹೈವೇ ಮಾಫಿಯಾ'ದಲ್ಲಿ ಯಶ್.!
ಸುಚಿತ್ರಾ ರಾವ್ ಬರೆದಿರುವ 'ದಿ ಹೈವೇ ಮಾಫಿಯಾ' ಕಾದಂಬರಿ ಸಿನಿಮಾ ಆಗ್ತಿದ್ದು, ಈ ಚಿತ್ರದ ಕನ್ನಡ ವರ್ಷನ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ನಾಯಕರನ್ನಾಗಿಸುವ ತೀರ್ಮಾನಕ್ಕೆ ಬಂದಿದ್ದಾರಂತೆ ಚಿತ್ರತಂಡದವರು.
'ಕಿರಾತಕ-2' ಬಗ್ಗೆ ಹರಿದಾಡ್ತಿರುವ ಸುದ್ದಿಗೆ ಬ್ರೇಕ್ ಹಾಕಿದ ಯಶ್
ಗೋ ಕಳ್ಳ ಸಾಗಾಣಿಕೆ ಸಿನಿಮಾ
ಅಂದ್ಹಾಗೆ, 'ದಿ ಹೈವೇ ಮಾಫಿಯಾ' ಕಾದಂಬರಿ ಗೋವುಗಳನ್ನ ಕಳ್ಳ ಸಾಗಣಿಕೆ ಮಾಡುವ ಮಾಫಿಯಾ ಕುರಿತು ಬರೆದಿರುವ ಪುಸ್ತಕ. ಉದ್ಯಮಿ ಅರ್ಜುನ್ ಕೃಷ್ಣನ್ ಮತ್ತು ಹೆದ್ದಾರಿಯಲ್ಲಿ ಗೋ ಕಳ್ಳ ಸಾಗಣಿಕೆ ಮಾಡೋರ ವಿರುದ್ಧ ನಡೆಯುವ ಭಯಾನಕ ಕಥೆ ಇದಾಗಿದ್ದು, ಅರ್ಜುನ್ ಕೃಷ್ಣನ್ ಪಾತ್ರಕ್ಕೆ ಯಶ್ ಅವರನ್ನ ಕರೆತರುವ ಪ್ರಯತ್ನಕ್ಕೆ ಮುಂದಾಗಲಿದೆ ಚಿತ್ರತಂಡ.
'ಕೆಜಿಎಫ್' ಬೆನ್ನಿಗೆ ವಿಶಾಲ್ ನಿಲ್ಲಲು ಕಾರಣ ಯಶ್ ಮಾಡಿದ್ದ 'ಆ' ದೊಡ್ಡ ಸಹಾಯ.!
ತಮಿಳಿನಲ್ಲಿ ವಿಜಯ್.?
ಅಂದ್ಹಾಗೆ, ದಿ ಹೈವೇ ಮಾಫಿಯಾ ಕುರಿತ ಸಿನಿಮಾದ ತಮಿಳು ಅವತರಣಿಕೆಯಲ್ಲಿ ಸ್ಟಾರ್ ನಟ ವಿಜಯ್ ಅಭಿನಯಿಸಬಹುದು ಎನ್ನಲಾಗುತ್ತಿದೆ. ಈಗಾಗಲೇ ಈ ಬಗ್ಗೆ ವಿಜಯ್ ಜೊತೆ ಚರ್ಚೆ ಕೂಡ ಆಗಿದೆಯಂತೆ.
ಯಶ್ ಗೆ ಮಾತು ಕೊಟ್ಟ ತಮಿಳು ನಟ ವಿಶಾಲ್
ತೆಲುಗಿನಲ್ಲಿ ಮಹೇಶ್ ಬಾಬು?
ಕನ್ನಡದಲ್ಲಿ ಯಶ್, ತಮಿಳಿನಲ್ಲಿ ವಿಜಯ್ ಮಾಡಬೇಕಿರುವ ಪಾತ್ರವನ್ನ ತೆಲುಗಿನಲ್ಲಿ ಮಹೇಶ್ ಬಾಬು ಮಾಡಿದ್ರೆ ಸೂಕ್ತ ಎಂಬ ತೀರ್ಮಾನಕ್ಕೆ ಚಿತ್ರತಂಡ ಬಂದಿದೆ. ಇನ್ನು ಹಿಂದಿಯಲ್ಲಿ 'ಧೋನಿ' ಸಿನಿಮಾ ಮಾಡಿದ್ದ ಸುಶಾಂತ್ ಸಿಂಗ್ ರಜಪೂತ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆಯಂತೆ.
ಬಾಲಿವುಡ್ ನಟಿ ವಿದ್ಯಾಬಾಲನ್ ಬಳಿ ವಿಶೇಷ ಮನವಿ ಮಾಡಿದ ಯಶ್
'ಚಾಪ್ಟರ್-2' ನಂತರವೇ ಎಲ್ಲ.!
ಸ್ವತಃ ಯಶ್ ಅವರು ಹೇಳಿರುವ ಪ್ರಕಾರ, ಸದ್ಯಕ್ಕೆ ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಗ್ಗೆ ಹೆಚ್ಚು ಗಮನ ನೀಡಲಾಗ್ತಿದೆ. ಅದನ್ನ ಬಿಟ್ಟರೇ ಬೇರೆ ಯಾವ ಸಿನಿಮಾಗೂ ಓಕೆ ಎಂದಿಲ್ಲ. ಬಟ್, ಪರಭಾಷೆಯಿಂದ ಆಫರ್ ಗಳು ಬರ್ತಿದೆ, ಕಾದು ಮಾಡೋಣ ಅಂತಿದ್ದಾರೆ ಎಂದು ಯಶ್ ಹೇಳಿದ್ದರು. ಬಹುಶಃ ಈ ಚಿತ್ರದಲ್ಲಿ ದಿ ಹೈವೇ ಮಾಫಿಯಾ ಕೂಡ ಇರಬಹುದು.