'ಯುವರತ್ನ' ಚಿತ್ರೀಕರಣ ಮುಗಿಯುವ ಮುನ್ನವೇ ಸಿಹಿ ಸುದ್ದಿ ಕೊಟ್ರಾ ನಟಿ ಸಯ್ಯೇಶಾ?
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯವರತ್ನ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ನಟಿ ಸಯ್ಯೇಶಾ ಸೈಗಲ್. ಮೊದಲ ಸಿನಿಮಾದಲ್ಲಿಯೆ ಸ್ಟಾರ್ ನಟನ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಗಿಟ್ಟಿಸಿಕೊಂಡಿರುವ ಸಯ್ಯೇಶಾ, ಸ್ಯಾಂಡಲ್ ವುಡ್ ನಲ್ಲಿಯೂ ಬೇಡಿಕೆಯ ನಟಿಯಾಗಿ ಗುರುತಿಸಿಕೊಳ್ಳವ ಸಮಯದಲ್ಲಿ, ಸಯ್ಯೇಶಾ ಗಂಡ, ಮನೆ, ಸಂಸಾರ ಅಂತ ಬ್ಯುಸಿಯಾಗಲಿದ್ದಾರಾ ಎನ್ನುವ ಅನುಮಾನ ಅಭಿಮಾನಿಗಳನ್ನು ಕಾಡುತ್ತಿದೆ.
ಇದಕ್ಕೆ ಕಾರಣ ಸಯ್ಯೇಶಾ ಇತ್ತೀಚಿಗೆ ಶೇರ್ ಮಾಡಿರುವ ಒಂದು ವಿಡಿಯೋ. ಹೌದು, ಸಾಯ್ಯೇಶಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋ ಅವರ ಗರ್ಭಿಣಿನಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿಸಿದೆ. ಸಾಯ್ಯೇಶಾ ಗರ್ಭಿಣಿ ಎನ್ನುವ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಷ್ಟಕ್ಕೂ ಸಯ್ಯೇಶಾ ಶೇರ್ ಮಾಡಿರುವ ವಿಡಿಯೋದಲ್ಲಿ ಏನಿದೆ ಅಂತೀತಾ? ನೃತ್ಯ ಎಂದರೆ ತುಂಬಾ ಇಷ್ಟಪಡುವ ಸಯ್ಯೇಶಾ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸಯ್ಯೇಶಾ ಸ್ವಲ್ಪ ದಪ್ಪ ಆಗಿದ್ದಾರೆ. ಅಲ್ಲದೆ ಸಡಿಲವಾದ ಬಟ್ಟೆ ಧರಿಸಿದ್ದಾರೆ. ಅಲ್ಲದೆ ನಿದಾನವಾಗಿ ಹೆಜ್ಜೆಹಾಕಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಸಯ್ಯೇಶಾ ಗರ್ಭಿಣಿನಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ನಟಿ ಸಯ್ಯೇಶಾ ಸೈಗಲ್ 2019ರಲ್ಲಿ ತಮಿಳು ಖ್ಯಾತ ನಟ ಆರ್ಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಉತ್ತರ ಭಾರತದ ನಟಿ ಸಯ್ಯೇಶಾ ತಮಿಳು ನಟ ಆರ್ಯ ಅವರನ್ನು ಪ್ರೀತಿಸಿ, ಮನೆಯವರ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದಾರೆ. ಸದ್ಯ ವೈರಲ್ ಆಗಿರುವ ಸುದ್ದಿ ಬಗ್ಗೆ ನಟಿಯಾಗಲಿ ಅಥವಾ ಆರ್ಯ ಆಗಲಿ ಯಾವುದೆ ಪ್ರತಿಕ್ರಿಯೆ ನೀಡಿಲ್ಲ.


Click it and Unblock the Notifications











