For Quick Alerts
  ALLOW NOTIFICATIONS  
  For Daily Alerts

  ಸೋನು ನಿಗಮ್ ಮೇಲೆ ನಿಷೇಧ ಹೇರಿದ ಜೀ ಟಿವಿ

  By Mahesh
  |

  ಭಾರತ ಚಿತ್ರರಂಗದ ಅತ್ಯಂತ ಜನಪ್ರಿಯ ಗಾಯಕ ಸೋನು ನಿಗಮ್ ಮೇಲೆ ನಿಷೇಧ ಹೇರಲಾಗಿದೆ. ಸೋನು ನಿಗಮ್ ಅವರ ಹಾಡುಗಳನ್ನು ಬಳಸದಿರಲು ಜೀ ಟಿವಿ ನಿರ್ಧರಿಸಿದೆ. ಸೋನು ನಿಗಮ್ ಮೇಲೆ ಜೀ ಟಿವಿ ನಿಷೇಧ ಏಕೆ ಹೇರಿದೆ? ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಈ ವಿಷಯವನ್ನು ಸ್ವತಃ ಸೋನು ನಿಗಮ್ ಅವರೇ ನೊಂದು ನುಡಿದಿದ್ದಾರೆ.

  ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಸರಣಿ ಟ್ವೀಟ್ ಮಾಡುತ್ತಾ, ಹಾಗದರೆ ಜೀ ಟಿವಿ ನನ್ನ ಮೇಲೆ ನಿಷೇಧ ಹೇರಿದೆ. ನಿಷೇಧ ಹೇರುವುದೆಂದರೇನು? ನಿಷೇಧ ಹೇರಿಕೆ ಕಾನೂನು ಪ್ರಕಾರ ಸರಿಯೇ? ಪ್ರಜಾಪ್ರಭುತ್ವದಲ್ಲಿ ಇದಕ್ಕೆ ಆಸ್ಪದ ನೀಡಲು ಹೇಗೆ ಸಾಧ್ಯ. ಕಾನೂನು ಪ್ರಕಾರವೋ ಅಲ್ಲವೋ ನಿಷೇಧ ಹೇರಿಕೆಯಂತೂ ಉತ್ತಮ ನಡೆಯಲ್ಲ ಎಂದು ಸೋನು ನಿಗಮ್ ಟ್ವೀಟ್ ಮಾಡಿದ್ದಾರೆ.

  ಸೋನು ನಿಗಮ್ ಮೇಲೆ ನಿಷೇಧ ಹೇರಿಕೆ ಸುದ್ದಿ ಕೇಳಿ ಅಭಿಮಾನಿಗಳು ಗರಂ ಆಗಿದ್ದಾರೆ. ಸೋನು ನಿಗಮ ಪರ ಟ್ವೀಟ್ ಗಳು ಹರಿದು ಬರುತ್ತಿವೆ. ಸೋನು ಮೇಲೆ ನಿಷೇಧ ಹೇರಿದ್ದು ಏಕೆ ಎಂಬುದನ್ನು ಮಾತ್ರ ಜೀ ಟಿವಿ ಇನ್ನೂ ಹೇಳಿಲ್ಲ. ಇನ್ಮುಂದೆ ಜೀ ಟಿವಿ ನಿರ್ಮಾಣದ ಸಂಗೀತ ಕಾರ್ಯಕ್ರಮ, ಸಿನಿಮಾಗಳಲ್ಲಿ ಸೋನು ಸ್ವರ ಕೇಳಿಸುವುದಿಲ್ಲ ಎಂಬುದಂತೂ ಕಹಿ ಸತ್ಯ.

  ನಿಷೇಧದ ಹಿಂದಿನ ಕಥೆ ಇಲ್ಲಿದೆ

  ನಿಷೇಧದ ಹಿಂದಿನ ಕಥೆ ಇಲ್ಲಿದೆ

  ಆಮ್ ಆದ್ಮಿ ಪಕ್ಷದ ಮುಖಂಡ ಕವಿ ಡಾ. ಕುಮಾರ್ ವಿಶ್ವಾಸ್ ಪರ ಸೋನು ನಿಗಮ್ ದನಿ ಎತ್ತಿದ್ದು ಮುಳುವಾಗಿದೆ. ಇತ್ತೀಚಿಗೆ ರೈತರ ಸಮಾವೇಶದಲ್ಲಿ ಗಜೇಂದ್ರ ಸಿಂಗ್ ಎಂಬ ರೈತ ಸಾವನ್ನಪ್ಪಿದ್ದರ ಬಗ್ಗೆ ಕುಮಾರ್ ವಿಶ್ವಾಸ್ ನೀಡಿದ್ದ ಹೇಳಿಕೆಯನ್ನು ಆಧಾರಿಸಿ ಜೀ ಟಿವಿ ಕಾರ್ಯಕ್ರಮ ಪ್ರಸಾರ ಮಾಡಿತ್ತು. ಇದರ ವಿರುದ್ಧ ಸೋನು ಮಾತಾಡಿದ್ದರು ಎನ್ನಲಾಗಿದೆ. ಇದೇ ಸೋನು ಮೇಲಿನ ನಿಷೇಧಕ್ಕೆ ಕಾರಣ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

  ಜೀ ಟಿವಿ ಬ್ಯಾನ್ ಬಗ್ಗೆ ಸೋನು ಬೇನೆ

  ಜೀ ಟಿವಿ ಬ್ಯಾನ್ ಬಗ್ಗೆ ಸೋನು ನಿಗಮ್ ಮೊದಲ ಟ್ವೀಟ್

  ನಿಷೇಧ ಹೇರಿಕೆ ಕಾನೂನು ಪ್ರಕಾರ ಸರಿಯೇ?

  ನಿಷೇಧ ಹೇರಿಕೆ ಕಾನೂನು ಪ್ರಕಾರ ಸರಿಯೇ? ಪ್ರಜಾಪ್ರಭುತ್ವದಲ್ಲಿ ಇದೆಲ್ಲ ಹೇಗೆ ಸಾಧ್ಯ ಎಂದು ಸೋನು ಪ್ರಶ್ನೆ.

  ನಿಷೇಧ ಹೇರಿಕೆ ಕಾನೂನು ಪ್ರಕಾರ ಸರಿಯೋ ತಪ್ಪೋ?

  ನಿಷೇಧ ಹೇರಿಕೆ ಕಾನೂನು ಪ್ರಕಾರ ಸರಿಯೋ ತಪ್ಪೋ? ಇದು ಸಾತ್ವಿಕ ನಡೆಯಲ್ಲ

  ಅಭಿಮಾನಿಗಳ ಪ್ರತಿಕ್ರಿಯೆ

  ಅಭಿಮಾನಿಗಳು ಪ್ರತಿಕ್ರಿಯೆ ನೀಡಿ ಸೋನು ಪರ ಟ್ವೀಟ್ ಮಾಡಿದ್ದಾರೆ

  ಇದರಿಂದ ಜೀ ಟಿವಿಗೆ ನಷ್ಟ

  ಸೋನು ನಿಗಮ್ ಹಾಡದಿದ್ದರೆ ಜೀ ಟಿವಿಗೆ ನಷ್ಟ

  English summary
  'So, now Zee announces a ban on me. :) What do I say.. God bless everyone' tweeted Singer Nigam. Reasons for the ban yet to be known. Zee Music Co. will not buy music with Sonu Nigam’s songs. Reason unknown. The singer would be replaced in their forthcoming films.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X