For Quick Alerts
  ALLOW NOTIFICATIONS  
  For Daily Alerts

  ಮೂರಾಯ್ತು ನಾಲ್ಕನೇ ಮದುವೆಗೆ ಜೆನ್ನಿಫರ್ ಸಿದ್ಧತೆ

  By Rajendra
  |

  ಹಾಲಿವುಡ್ ತಾರೆ ಹಾಗೂ ಗಾಯಕಿ ಜೆನ್ನಿಫರ್ ಲೋಫೆಜ್ ನಾಲ್ಕನೇ ಮದುವೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾಳೆ. ಮೂರನೇ ಗಂಡ ಮಾರ್ಕ್ ಆಂಥೋನಿಗೆ ಸೋಡಾ ಚೀಟಿ ನೀಡಿರುವ 42ರ ಹರೆಯದ ಜೆನ್ನಿಫರ್ ಈಗ ನಾಲ್ಕನೆ ಬಾರಿ ಮದುವೆಗೆ ಅಣಿಯಾಗಿದ್ದಾರೆ.

  ಆದರೆ ಜೆನ್ನಿಫರ್‌ಗೆ ನಾಲ್ಕನೆ ಗಂಡ ಯಾರಾಗುತ್ತಾರೆ ಎಂಬ ಬಗ್ಗೆ ಇನ್ನೂ ಹಾಲಿವುಡ್‌ನಲ್ಲಿ ಪಕ್ಕಾ ಮಾಹಿತಿ ಇಲ್ಲ. ಬಹುಶಃ ತನ್ನ ಬಾಯ್‌ಫ್ರೆಂಡ್ ಕಾಸ್ಪರ್ ಸ್ಮಾರ್ಟ್ ಕೈಹಿಡಿಯುವ ಸೂಚನೆಗಳಿವೆ. "ನನಗೆ ಗೊತ್ತಿಲ್ಲ... ನಂಗೊತ್ತಿಲ್ಲ..ನಂಗೊತ್ತಿಲ್ಲ... ಅದಕ್ಕೆ ಇನ್ನೂ ಸಮಯವಿದೆ. ಕಾಲ ಕೂಡಿಬಂದಾಗ ನಾನೇ ಹೇಳುತ್ತೇನೆ" ಎಂದಿದ್ದಾರೆ ಜೆನ್ನಿಫರ್.

  ನಮ್ಮಲ್ಲಿ ಇನ್ನೂ ನಿಜವಾದ ಪ್ರೀತಿ ಇದೆ. ಮದುವೆಗೂ ಮುಂಚಿನಿಂದ ಮಾರ್ಕ್ ಮತ್ತು ನಾನು ಒಳ್ಳೆಯ ಗೆಳೆಯರಾಗಿದ್ದೆವು. ಬಹಳ ವರ್ಷಗಳ ತನಕ ಗೆಳೆಯರಾಗಿದ್ದೆವು. ಒಬ್ಬರನ್ನೊಬ್ಬರು ಬಹಳಷ್ಟು ಪ್ರೀತಿಸುತ್ತಿದ್ದೆವು. ನಮ್ಮಿಬ್ಬರ ನಡುವೆ ಈಗಲೂ ಪ್ರೀತಿಯಗೆ ಜಾಗವಿದೆ. ನೀವು ತಿಳಿದುಕೊಂಡಂತೆ ಏನೂ ಆಗಿಲ್ಲ ಎಂದಿದ್ದಾರೆ ಜೆನ್ನಿಫರ್. (ಏಜೆನ್ಸೀಸ್)

  English summary
  Hollywood well known actress and Singer Jennifer Lopez, who has recently split from her third husband Marc Anthony recently, says she doesn’t know whether she could ever get married again.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X