ಟ್ವಿಟ್ಟರ್ ಹಕ್ಕಿ ಸಂದೇಶ :ಡೆಮಿ ಮೂರ್ ಬಿಕಿನಿ ಚಿತ್ರ
ವಯಸ್ಸು ಹದಿನೇಳು ಆದರೇನು ನಲವತ್ತೇಳಾದರೇನು ಆಕರ್ಷಕ ಮೈಮಾಟವಿದ್ದರೆ ಅದನ್ನು ಬಚ್ಚಿಟ್ಟು ಏನು ಪ್ರಯೋಜನ ಎಲ್ಲರಿಗೂ ಪುಕ್ಕಟ್ಟೆ ದರ್ಶನ ಭಾಗ್ಯ ನೀಡಿದರೆ ಏನು ತಪ್ಪು ಹೀಗೆಲ್ಲಾ ಅನಿಸಿದ್ದು, ಹಾಲಿವುಡ್ ನ ಖ್ಯಾತ ನಟಿ ಡೆಮಿ ಮೂರ್ ಗೆ.
ಮೂರು ಮಕ್ಕಳ ತಾಯಿ, ಮೂವತ್ತೆರಡರ ಹರೆಯ ಆಸ್ಟನ್ ಕಚ್ಚರ್ ಅನ್ನು ಮದುವೆಯಾಗಿರುವ 47ರ ಹರೆಯ ಡೆಮಿಗೆ ಅದೇನು ಹುಚ್ಚು ಹಿಡಿಯಿತೋ ಗೊತ್ತಿಲ್ಲ. ಬಾಥ್ ರೂಂ ನಲ್ಲಿ ಬಿಕಿನಿ ಧರಿಸಿ ನಿಂತಿದ್ದವಳು ಐಫೋನ್ ತೆಗೆದುಕೊಂಡು ತನ್ನ ಮೈಮಾಟವನ್ನು ಒಳ್ಳೆ ನೋಡಿಕೊಂಡು ಫೋಟೋ ಮೇಲೆ ಫೋಟೋ ಕ್ಲಿಕ್ಕಿಸತೊಡಗಿದಳು.
ಚಿತ್ರ ತೆಗೆದಮೇಲೆ ಏನು ಮಾಡೋದು? ಎಲ್ಲವನ್ನು ಒಟ್ಟುಗೂಡಿಸಿ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ @mrskutcher ನಲ್ಲಿ ಪೋಸ್ಟ್ ಮಾಡೇ ಬಿಟ್ಟಳು. 'Maybe this is more like summer,' ಎಂಬ ತಲೆ ಬರಹ ಕೊಟ್ಟು ತನ್ನ ಹಿಂಬಾಲಕರಿಗೆ ತನ್ನ ಮೈಮಾಟದ ದರ್ಶನ ನೀಡಿದ್ದಾಳೆ.
ಅಸ್ಟನ್ ಕಚ್ಚರ್ ಹಾಗೂ ಡೆಮಿ ಮೂರ್ ದಂಪತಿ ಟ್ವಿಟ್ಟರ್ , ಚಾಟ್ ಗಳಲ್ಲಿ ಸದಾ ತೊಡಗಿರುವುದು ಸಾಮಾನ್ಯ. ಸರಿ ಸುಮಾರು 8 ಮಿಲಿಯನ್ ಹಿಂಬಾಲಕರ ಪಡೆಯನ್ನು ಹೊಂದಿದ್ದಾರೆ. ಡೆಮಿಗೆ ತಾನಿನ್ನು ಸಿನಿ ಜಗತ್ತಿನಲ್ಲಿ ಸುದ್ದಿಯಲ್ಲಿರಬೇಕು ಎಂಬ ತವಕ ಎಂದು ಕಾಣುತ್ತದೆ ಅದಕ್ಕೆ ಈ ಫೋಟೋ ಫೋಸು ಎಲ್ಲಾ ಎನ್ನುತ್ತದೆ ಹಾಲಿವುಡ್ ಜಗತ್ತು.
1981 ರಲ್ಲಿ ಸಿನಿ ಜಗತ್ತಿಗೆ ಕಾಲಿರಿಸಿದ ಅಮೆರಿಕನ್ ನಟಿ ಡೆಮಿ, 90ರ ದಶಕದಲ್ಲಿ ಬಂದ ಗೋಸ್ಟ್ ಚಿತ್ರದಿಂದ ಜನಪ್ರಿಯತೆ ಗಳಿಸಿದರು. ಪ್ಯಾರಸೈಟ್, ಇನ್ ಡೀಸೆಂಟ್ ಪ್ರೊಪೊಸಲ್, ಹಾಫ್ ಲೈಟ್, ಬಾಬಿ ಹಾಗೂ ಟಿವಿ ಸರಣಿಗಳಲ್ಲಿ ಕಾಣಿಸಿಕೊಂಡಿದ್ದಾರೆ. LOL ಚಿತ್ರ ತೆರಕಾಣಬೇಕಿದ್ದು, ವೈವಾಹಿಕ ಜೀವನದಲ್ಲಿ ಅಸ್ಟನ್ ಕಚ್ಚರ್ ಗೂ ಮುನ್ನ ಫ್ರೆಡ್ಡಿ ಮೂರ್ ಹಾಗೂ ಬ್ರೂಸ್ ವಿಲ್ಲಿಸ್ ರನ್ನು ವರಿಸಿದ್ದರು.


Click it and Unblock the Notifications











