ನಗ್ನ ಚಿತ್ರಗಳಿಗೆ ನೋ ನೋ ಎಂದವಳು ಇವಳೇನಾ!
ಇನ್ನು ಮುಂದೆ ಯಾವುದೇ ಕಾರಣಕ್ಕೂ ಕ್ಯಾಮೆರಾಗಳ ಮುಂದೆ ನಗ್ನವಾಗಿ, ಅಶ್ಲೀಲವಾಗಿ ಕಾಣಿಸಿಕೊಳ್ಳುವುದಿಲ್ಲ ಎಂದು ಜೆಸ್ಸಿಕಾ ಆಲ್ಬಾ ಎಂಬ ಹಾಲಿವುಡ್ ನಟಿ ಶಪಥ ಮಾಡಿದ್ದರು. ಆಕೆ ಅಭಿನಯದ ಇತ್ತೀಚೆಗಿನ 'ಮ್ಯಾಚೆಟ್' ಚಿತ್ರದ ಭಿತ್ತಿಚಿತ್ರಗಳನ್ನು ನೋಡಿದ ಆಕೆಯ ಅಭಿಮಾನಿಗಳು ದಂಗಾಗಿದ್ದಾರೆ. ನಗ್ನ ಚಿತ್ರಗಳಿಗೆ ನೋ ನೋ ಎಂದವಳು ಇವಳೇನಾ ಎಂದು ಹೌಹಾರಿದ್ದಾರೆ.
ಆದರೆ ಈ ಭಿತ್ತಿಚಿತ್ರಗಳು ಅಸಲಿ ಅಲ್ಲ ನಕಲಿ ಎಂದು 'ದಿ ಡೈಲಿ ಮೇಲ್' ಪತ್ರಿಕೆ ವರದಿ ಮಾಡಿದೆ. ಎಷ್ಟೆ ನಗ್ನವಾದರೂ ಸಾಧಾರಣವಾಗಿ ಆಲ್ಬಾ ಒಳ ಉಡುಪುಗಳನ್ನು ತೊಡುತ್ತಾರೆ. ಆದರೆ ಯಾರೋ ಕಿಡಿಗೇಡಿ ಡಿಜಿಟಲ್ ತಂತ್ರಜ್ಞಾನ ಬಳಸಿ ಆಕೆಯ ಒಳ ಉಡುಪುಗಳನ್ನು ಕಳಚಿ ನಗ್ನಗೊಳಿಸಿದ್ದಾರೆ.
ಇಪ್ಪತ್ತೊಂಬತ್ತು ವರ್ಷದಈ ಲ್ಯಾಟಿನ್ ಸುಂದರಿ ಸ್ಕಾರ್ಲೆಟ್ ಎಂಬ ನಿಯತಕಾಲಿಕೆಗೆ ಸಂದರ್ಶನ ನೀಡುತ್ತಾ, ಸೆಕ್ಸಿಯಾಗಿ ಕಾಣುವ ಒಳ ಉಡುಪುಗಳಲ್ಲಿ ಕಾಣಿಸಿಕೊಳ್ಳುತ್ತೇನೆಯೇ ಹೊರತು, ಇನ್ನು ಮುಂದೆ ಯಾವುದೇ ಕಾರಣಕ್ಕೂ ಸಂಪೂರ್ಣ ನಗ್ನವಾಗಿ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ನಕಲಿ ಚಿತ್ರಕ್ಕೆ ಈಗ ಮತ್ತೆ ಒಳ ಉಡುಪುಗಳನ್ನು ತೊಡಿಸಲಾಗಿದೆಯಂತೆ.


Click it and Unblock the Notifications











