twitter
    For Quick Alerts
    ALLOW NOTIFICATIONS  
    For Daily Alerts

    ಆಗ ಶಾಲಾ ಶಿಕ್ಷಕಿ ಈಗ ವಯಸ್ಕರ ಚಿತ್ರದ ನಾಯಕಿ

    By Rajendra
    |

    ದಾರಿ ತಪ್ಪಿದ ವಿದ್ಯಾರ್ಥಿಗಳನ್ನು ನೋಡಿರುತ್ತೀರಿ. ಆದರೆ ದಾರಿ ತಪ್ಪಿದ ಶಿಕ್ಷಕಿಯನ್ನು ನೋಡಿದ್ದೀರಾ? ಇಲ್ಲವೆ ಹಾಗಿದ್ದರೆ ಮೀಟ್ ಮಿಸಸ್ ಲಿಸೆಲ್ಲೆ ಬೈಲಿ. ಈಕೆ ಎಲ್ಲ ಶಿಕ್ಷಕರಂತೆ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಂಡು ಜೀವನ ದೂಡುತ್ತಿದ್ದರು. ಆದರೆ ಏನಾಯಿತೋ ಏನೋ ಇದ್ದಕ್ಕಿದ್ದಂತೆ ಚಿತ್ರನಟಿಯಾಗಿ ಬದಲಾಗಿದ್ದಾರೆ. ಅದೂ ವಯಸ್ಕರಚಿತ್ರದ ನಾಯಕಿ.

    ಈಕೆ ಕೆಲಸಕ್ಕೆ ಗುಡ್ ಬೈ ಹೇಳಿ ಈಗ ಪೂರ್ಣ ಪ್ರಮಾಣದ ವಯಸ್ಕರ ಚಿತ್ರದ ನಟಿ. ಹಳೆಯ ವಿದ್ಯಾರ್ಥಿಗಳು ಶಿಕ್ಷಕಿಯ 'ವಯಸ್ಕರಿಗೆ ಮಾತ್ರ' ಚಿತ್ರಗಳನ್ನು ನೋಡಿ ತಮ್ಮ ಟೀಚರ್ ಅಭಿನಯವನ್ನು ಕೊಂಡಾಡಿ "Best career move. Well done" ಟೀಚರ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳ ಈ ಶಹಬ್ಬಾಸ್ ಗಿರಿಯಿಂದ ಟೀಚರ್ ಹುಮ್ಮಸ್ಸು ಇಮ್ಮಡಿಸಿದೆಯಂತೆ.

    ಶಿಕ್ಷಕಿ ಹುದ್ದೆಗೆ ಈಕೆ ಗುಡ್ ಬೈ ಹೇಳಿ ಒಂದು ವರ್ಷ ಕಳೆದಿದೆಯಂತೆ. ದಾರಿತಪ್ಪಿದ ಶಿಕ್ಷಕಿ ಕಡೆಗೆ ದಾರಿ ಕಂಡುಕೊಂಡಿದ್ದು ವಯಸ್ಕರ ಚಿತ್ರಗಳಲ್ಲಿ. ಸಂಡರ್ ಲ್ಯಾಂಡ್ ನ ಗ್ರಿಂಡನ್ ಹಾಲ್ ಕ್ರಿಶ್ಚಿಯನ್ ಶಾಲೆಯಲ್ಲಿ ಈಕೆ ಇಂಗ್ಲಿಷ್ ಮತ್ತು ನಾಟಕದ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

    ಶಾಲೆಯನ್ನು ತೊರೆದು ಈಕೆ ನಾಲ್ಕು ವರ್ಷಗಳಾಗಿದೆ. ಆದರೆ ಒಳಗೊಳಗೆ ನಟಿಯಾಗಬೇಕು ಎಂಬ ಕನಸು ಹೆಮ್ಮರವಾಗಿ ಬೆಳೆದಿತ್ತು. ಕಡೆಗೂ ಆಕೆ ವಯಸ್ಕರ ಚಿತ್ರದಲ್ಲಿ ನಟಿಸುವ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಅಶ್ಲೀಲ ಚಿತ್ರದಲ್ಲಿ ನಟಿಸುವಂತೆ ಈಕೆಗೆ ಕಳೆದ ವರ್ಷವಷ್ಟೆ ಅವಕಾಶ ಹುಡುಕಿಕೊಂಡು ಬಂದಿತ್ತು.

    'ದಿ ಸನ್' ನಿಯತಕಾಲಿಯೊಂದಿಗೆ ಮಾತನಾಡುತ್ತಾ, ಪ್ರತಿ ಚಿತ್ರದಲ್ಲಿ ನಟಿಸಿದಾಗಲೂ ನನ್ನ ಆತ್ಮವಿಶ್ವಾಸ ಹೆಚ್ಚುತ್ತಿತ್ತು. ಯಾವ ಭಂಗಿಯಲ್ಲಿ ಕ್ಯಾಮೆರಾಗೆ ಎದುರಾಗಬೇಕು, ಲೈಂಗಿಕ ಕ್ರಿಯೆಯ ಭಂಗಿಗಳಲ್ಲಿ ನಟಿಸಲು ನನಗೆ ಸ್ವಲ್ಪವೂ ಕಷ್ಟವಾಗಲಿಲ್ಲ. ತುಂಬಾ ಸಹಜವಾಗಿ ನಟಿಸಿದ್ದೇನೆ ಎಂದು ಹೇಳಿದ್ದಾರೆ.

    ಅಂತರ್ಜಾಲದಲ್ಲಿ ನನ್ನ ಹಳೆಯ ವಿದ್ಯಾರ್ಥಿಗಳು ವಿಡಿಯೋಗಳಿಗಾಗಿ ಮುಗಿಬೀಳುತ್ತಿದ್ದಾರೆ. ನನ್ನ ನಟನೆ ಬಗ್ಗೆ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು ಆನ್ ಲೈನ್ ನಲ್ಲಿ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಒಬ್ಬ ವಿದ್ಯಾರ್ಥಿ, ಲವ್ ಯು ಮಿಸಸ್ ಬೈಲಿ, ಗುಡ್ ಲಕ್ ಆನ್ ದಿ ನ್ಯೂ ಜಾಬ್ ಎಂದು ಹಾರೈಸಿದ್ದಾನೆ ಎಂದು ಆಕೆ ಹೇಳಿಕೊಂಡಿದ್ದಾರೆ.

    Wednesday, August 4, 2010, 17:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X