ಐಶ್ವರ್ಯಾ, ಸಾಂಡ್ರಾ ಶ್ರೀಮಂತ ನಟಿಯರು
ಪ್ರಪಂಚದ ಪ್ರಭಾವಿ ವ್ಯಕ್ತಿಗಳು, ಶ್ರೀಮಂತರ ಮೇಲೆ ಸದಾ ಕಣ್ಣಿರಿಸಿ ಯಾರು ಮೇಲಿದ್ದಾರೆ ಯಾರು ಕೆಳಗಿಳಿದಿದ್ದಾರೆ ಎಂದು ಸಮೀಕ್ಷೆ ನಡೆಸುವಲ್ಲಿ ಎತ್ತಿದ ಕೈ ಎನಿಸಿರುವ ಫೋರ್ಬ್ಸ್ ಪತ್ರಿಕೆ, ಇತ್ತೀಚೆಗೆ ಹಾಲಿವುಡ್ ನ ಅತ್ಯಧಿಕ ಸಂಭಾವನೆ ಪಡೆವ ನಟಿಯರ ಪಟ್ಟಿ ಬಿಡುಗಡೆ ಮಾಡಿದೆ.
ಬ್ಲೈಂಡ್ ಸೈಡ್ ಚಿತ್ರದ ನಂತರ ಮತ್ತೆ ಸುದ್ದಿಯಲ್ಲಿರುವ 46 ವರ್ಷದ ಸಾಂಡ್ರಾ, ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಲ್ಲದೆ ಅತ್ಯಧಿಕ ಸಂಭಾವನೆ ಪಡೆವ ನಟಿಯಾಗಿ ಹೊರಹೊಮ್ಮಿದ್ದಾರೆ.
ಜೂನ್ 2009ರಿಂದ ಜೂನ್ 2010 ರ ಅವಧಿಯಲ್ಲಿ $56 ಮಿಲಿಯನ್ ಗಳಿಸುವ ಮೂಲಕ ಸಾಂಡ್ರಾ ಬುಲಕ್ ಅಗ್ರಸ್ಥಾನದಲ್ಲಿದ್ದಾರೆ. ಉಳಿದಂತೆ 32 ಮಿಲಿಯನ್ ಡಾಲರ್ ಗಳಿಸಿ ರೀಸ್ ವಿಥರ್ ಸ್ಪೂನ್ ಹಾಗೂ ಕ್ಯಾಮರೊನ್ ಡಯಾಜ್ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.
ಸಮಗ್ರ ಪಟ್ಟಿ ಹೀಗಿದೆ:
1. ಸಾಂಡ್ರಾ ಬುಲಕ್ : $56 ಮಿಲಿಯನ್.
2. ರೀಸ್ ವಿಥರ್ ಸ್ಪೂನ್:$32 ಮಿಲಿಯನ್.
3. ಕ್ಯಾಮರೊನ್ ಡಯಜ್ : $32ಮಿಲಿಯನ್.
4. ಜೆನ್ನಿಫರ್ ಅನಿಸ್ಟನ್: $27 ಮಿಲಿಯನ್.
5. ಸಾರಾ ಜೆಸ್ಸಿಕಾ ಪಾರ್ಕರ್ :$25 ಮಿಲಿಯನ್.
6. ಜೂಲಿಯಾ ರಾಬರ್ಟ್ಸ್ :$20 ಮಿಲಿಯನ್.
7. ಏಂಜಲಿನಾ ಜೋಲಿ: $20 ಮಿಲಿಯನ್.
8. ಡ್ರೂ ಬ್ಯಾರಿಮೋರ್ :$15 ಮಿಲಿಯನ್.
9. ಮೆರ್ಲ್ ಸ್ಟ್ರೀಪ್ :$13 ಮಿಲಿಯನ್.
10. ಕ್ರಿಸ್ಟೆನ್ ಸ್ಟೀವರ್ಟ್ :$12 ಮಿಲಿಯನ್.
ಅದೇ, ಬಾಲಿವುಡ್ ನ ವಿಚಾರಕ್ಕೆ ಬಂದರೆ ಚಿತ್ರವೊಂದಕ್ಕೆ ಪಡೆಯುವ ಸಂಭಾವನೆ ಲೆಕ್ಕಾಚಾರ ಹೀಗಿದೆ: ಐಶ್ವರ್ಯಾ ರೈ ಬಚ್ಚನ್ ಸುಮಾರು 6 ಕೋಟಿ ಪಡೆದರೆ, ಪ್ರಿಯಾಂಕಾ ಛೋಪ್ರಾ 5 ಕೋಟಿ ಪಡೆದು ರೇಸ್ ನಲ್ಲಿದ್ದಾರೆ. ಕರೀನಾ 3.5 ರಿಂದ 4 ಕೋಟಿ, ಕತ್ರೀನಾ ಕೈಫ್ 3 ಕೋಟಿ ಹಾಗೂ ಬಿಪಾಶಾ ಬಸು 2 ಕೋಟಿ ಪಡೆಯುತ್ತಿದ್ದಾರೆ.


Click it and Unblock the Notifications











