ಹಾಲಿವುಡ್ ಚಿತ್ರದಲ್ಲೂ 'ಡಾನ್' ಆದ ಶಾರುಖ್ ಖಾನ್

By Mahesh

ಬಾಲಿವುಡ್ ನ ಕಿಂಗ್ ಖಾನ್ ಶಾರುಖ್ ಹಾಲಿವುಡ್ ಗೆ ಹಾರುವುದು ಪಕ್ಕಾ ಆಗಿದೆ. ಟೈಟಾನಿಕ್ ಖ್ಯಾತಿಯ ಪ್ರಬುದ್ಧ ನಟ ಲಿಯಾನಾರ್ಡೊ ಡಿ'ಕಾರ್ಪಿಯೋ ಜೊತೆ ಸಾಹಸಭರಿತ ಚಿತ್ರದಲ್ಲಿ ನಟಿಸಲು ಶಾರುಖ್ ಸಮ್ಮತಿಸಿದ್ದಾರೆ.

ಪೌಲ್ ಸ್ಕರಾಡೆರ್ಸ್ ಅವರ 'ಎಕ್ಸ್ ಟ್ರೀಮ್ ಸಿಟಿ' ಚಿತ್ರದಲ್ಲಿ ಮುಂಬೈ ಭೂಗತ ಜಗತ್ತಿನ ಕಥೆ ಇರುವುದಿಂದ ಬಾಲಿವುಡ್ ನಟನನ್ನು ಹಾಕಿಕೊಳ್ಳಲು ನಿರ್ಮಾಪಕ ಮಾರ್ಟಿನ್ ಯೋಜಿಸಿದ್ದರು.

ಬಾಲಿವುಡ್ ನಲ್ಲಿ 'ಡಾನ್' ಆಗಿ ಮೆರೆದಿರುವ ಶಾರುಖ್ ಅವರನ್ನು ಎಕ್ಸ್ ಟ್ರೀಮ್ ಸಿಟಿ ಚಿತ್ರದಲ್ಲೂ ಡಾನ್ ಪಾತ್ರ ಮಾಡುವಂತೆ ಕೇಳಿಕೊಳ್ಳಲಾಗಿದೆ ಎಂದು ನಿರ್ಮಾಪಕ ಮಾರ್ಟಿನ್ ಹೇಳಿದ್ದಾರೆ.

ಹಾಲಿವುಡ್ ಜಗತ್ತಿನಿಂದ ಬಂದಿರುವ ಈ ಹೊಸ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳಲು ಯತ್ನಿಸುತ್ತಿರುವ ಶಾರುಖ್ ಖಾನ್ ಬರೀ ನಟನೆ ಅಷ್ಟೇ ಅಲ್ಲದೆ, ಚಿತ್ರ ನಿರ್ಮಾಣದಲ್ಲೂ ಕೈಯಾಡಿಸುತ್ತಿದ್ದಾರೆ.

ಚಿತ್ರದ ಕೆಲ ಭಾಗಗಳನ್ನು ಮುಂಬೈನಲ್ಲಿ ಚಿತ್ರಿಸುವ ಸಾಧ್ಯತೆಯಿದ್ದು, ಲಿಯಾನಾರ್ಡೋ ಅವರು ಎಫ್ ಬಿಐ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಚಿತ್ರದ ಎಳೆಯನ್ನು ಇನ್ನೂ ಚಿತ್ರ ತಂಡ ಬಿಟ್ಟುಕೊಟ್ಟಿಲ್ಲವಾದರೂ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸುತ್ತಾ ಕಥೆ ಹೆಣೆಯಲಾಗಿದೆ ಎಂಬ ಸುದ್ದಿಯಿದೆ. ಶಾರುಖ್ ಅವರು 'ಡಿ'ಕಂಪನಿ ಬಾದ್ ಷಹ ಆಗಿ ಕಾಣಿಸಿಕೊಳ್ಳುತ್ತಿದ್ದಾರೆಯೇ? ಗೊತ್ತಿಲ್ಲ ಕಾದು ನೋಡಿ...
The buzz doing the rounds is that Xtreme City is based on the life of underworld don Dawood Ibrahim Kaskar and his people.

More from Filmibeat

English summary
Bollywood superstar Shahrukh Khan and Hollywood heartthrob Leonardo Di Caprio are likely to come together on screen for Paul Schrader's Hollywood film titled Xtreme City.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X