ಜೇಮ್ಸ್ ಬಾಂಡ್ ಚಿತ್ರಕ್ಕೆ ಹೆಸರು ಸಿಕ್ತು skyfall

By Mahesh

ಜೇಮ್ಸ್ ಬಾಂಡ್ ಚಿತ್ರ ಸರಣಿಯ 23 ನೇ ಚಿತ್ರದ ಬಿಡುಗಡೆಗೂ ಕುತೂಹಲ ಕಾಯ್ದುಕೊಂಡಿದ್ದು, ಆನ್ ಲೈನ್ ಗಾಳಿಸುದ್ದಿ ಪ್ರಕಾರ ಚಿತ್ರಕ್ಕೆ 'ಸ್ಕೈ ಫಾಲ್' ಎಂದು ಹೆಸರಿಡಲಾಗಿದೆಯಂತೆ.

JamesBond-Skyfall.com ಹಾಗೂ Skyfallthefilm.com. ಎಂಬ ಹೆಸರಿನ ಎರಡು ಡೊಮೈನ್ ನೇಮ್ ವೆಬ್ ಲೋಕದಲ್ಲಿ ಚರ್ಚೆ ಈಡಾಗಿದೆ. ವೆಬ್ ಸೈಟ್ ಜಾಡು ಹಿಡಿದು ನೋಡಿದರೆ ಇದು ಬಾಂಡ್ ಚಿತ್ರದ ಹೊಸ ಹೆಸರು ಎಂದು ತಿಳಿಯುತ್ತದೆ.

'ಅಮೆರಿಕನ್ ಬ್ಯೂಟಿ' ಹಾಗೂ 'ರೆವಲ್ಯೂಷನರಿ ರೋಡ್' ಚಿತ್ರ ಖ್ಯಾತಿಯ ಸ್ಯಾಮ್ ಮೆಂಡೆಸ್ ಅವರು ಮಾರ್ಕ್ ಫೊಸ್ಟರ್ ಅವರಿಂದ ನಿರ್ದೇಶಕನ ಹುದ್ದೆಯನ್ನು ಕಸಿದುಕೊಂಡಿದ್ದಾರೆ. 2008ರಲ್ಲಿ ಕ್ವಾಂಟಮ್ ಆಫ್ ಸೊಲಸ್ ನಿರ್ದೇಶಿಸಿದ್ದ ಮಾರ್ಕ್ ಬದಲಿಗೆ ಮೆಂಡೆಸ್ ಬಂದಿದ್ದಾರೆ.

ನಟ ಡೇನಿಯಲ್ ಕ್ರೇಗ್ ಗೆ ಮೂರನೇ ಬಾರಿಗೆ ಲೈಸನ್ಸ್ ಟು ಕಿಲ್ ಎಂದು ಸೂಚಿಸಲಾಗಿದ್ದು, ನಟಿ ಹೆಲೆನ್ ಮ್ಯಾಕ್ ಕ್ರೊರಿ ಹಾಗೂ ಫ್ರೆಂಚ್ ಬೆಡಗಿ ಬೆರೆನಿಚ್ ಮರ್ಲ್ಹೊ ಇಬ್ಬರು ಬಾಂಡ್ ಗರ್ಲ್ ಗಳಾಗಿ ಆಯ್ಕೆಯಾಗಿದ್ದಾರೆ. ಇಸ್ರೇಲಿ ಬ್ಯೂಟಿ ಎಸ್ಟಿ ಜಿಂಜ್ಬರ್ಗ್ ಗೆ ಬಾಂಡ್ ಜೊತೆ ರೋಮಾನ್ಸ್ ಮಾಡುವ ಅವಕಾಶ ಸಿಕ್ಕಿಲ್ಲ. ಖ್ಯಾತ ಸಿನಿಮಾ ಛಾಯಾಗ್ರಾಹಕ ರೋಜರ್ ಡಿಕಿನ್ಸ್ ಜೇಮ್ಸ್ ಬಾಂಡ್ ನ ಸಾಹಸ, ಪ್ರಣಯ ದೃಶ್ಯಗಳನ್ನು ಸೆರೆ ಹಿಡಿಯಲಿದ್ದಾರೆ.

More from Filmibeat

English summary
The Daniel Craig starrer 23rd James Bond Film has reportedly been titled Skyfall and the news is based on its domain name. The much awaited movie is being produced by MGM and Sony Pictures.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X