5 ಕೋಟಿ ರು.ಗೆ ಟೈಸನ್ ಜತೆ ಸೆಕ್ಸ್ ಮಾಡು ಎಂದಿದ್ದ

ಇತ್ತೀಚೆಗೆ 'ದಿ ಟಾಕ್' ಹೆಸರಿನ ಸಿಬಿಎಸ್ ಟಿವಿ ಷೊ ನಲ್ಲಿ ಕಾಣಿಸಿಕೊಂಡಿದ್ದ ಲಾ ಟೊಯಾ (55) ಎಂಬ ಅಂದಕಾಲತ್ತಿಲ್ ಬೆಡಗಿ, 'ಭಾರಿ ಮೊತ್ತದ ಹಣ ನೀಡಿದರೆ ನನ್ನ ಹೆಂಡತಿಯ ಜತೆ ಮಲಗಬಹುದು ಎಂದು ನನ್ನ ಪತಿರಾಯ ಗಾರ್ಡನ್, ಟೈಸನ್ ಗೆ ಹೇಳಿದ್ದ' ಎಂದು ತಿಳಿಸಿದ್ದಾಳೆ. ಅಂದ ಹಾಗೆ, ಗಾರ್ಡನ್ 2005ರಲ್ಲಿ ಇಹಲೋಕ ವ್ಯಾಪಾರ ಮುಗಿಸಿದ್ದ.
'ಸಾಮೂಹಿಕ ಸೆಕ್ಸ್ ನಲ್ಲೂ ಪಾಲ್ಗೊಳ್ಳುವಂತೆ ನನ್ನ ಮಾಜಿ ಮ್ಯಾನೇಜರ್ ಹಾರ್ಡನ್ ನನ್ನನ್ನು ಪುಸಲಾಯಿಸುತ್ತಿದ್ದ' ಎಂದೂ ಲಾ ಟೊಯಾ ಜಾಕ್ಸನ್ ಹೇಳಿಕೊಂಡಿದ್ದಾಳೆ.
ಅವನಿಂದಾಗಿ ವೇಶ್ಯಾವಾಟಿಕೆಗಳಲ್ಲೂ ನಾನು ಕಾಣಿಸಿಕೊಳ್ಳುತ್ತಿದ್ದೆ. ಆದರೆ ಅದೆಲ್ಲ ನನ್ನ ಇಚ್ಛೆಗೆ ವಿರುದ್ಧವಾಗಿರುತ್ತಿತ್ತು. ಎರಡು ಪ್ಲೆಬಾಯ್ ಮ್ಯಾಗಜೀನ್ ನಲ್ಲಿ ಕಾಣಿಸಿಕೊಳ್ಳಬೇಕಾಯಿತು. ಸ್ಟೇಜ್ ಷೋಗಳಲ್ಲೂ ಕಾಣಿಸಿಕೊಂಡೆ. ಅಷ್ಟೇ ಅಲ್ಲ. ಅದನ್ನೆಲ್ಲ ನಾನೇ ಇಷ್ಟಪಟ್ಟು ಮಾಡುತ್ತಿದ್ದೇನೆ ಎಂದು ಸಭಿಕರಿಗೆ ಮನದಟ್ಟುಪಡಿಸುವಂತೆಯೂ ಪೀಡಿಸುತ್ತಿದ್ದ. ಇಲ್ಲವಾದಲ್ಲಿ ಅವನು ರಾಕ್ಷಸನಂತೆ ವರ್ತಿಸುತ್ತಿದ್ದ ಎಂದು 'ಹೆಣ್ಣೇ ಕೇಳು ನಿನ್ನಯ ಗೋಳು' ಎಂದು ಲೊ ಟೊಯಾ ಅಲವತ್ತುಕೊಂಡಿದ್ದಾಳೆ.
ಹಾಲಿವುಡ್ ನ ಅತ್ಯಂತ ಭೀಕರ ಡೈವೋರ್ಸ್ ಪ್ರಕರಣಗಳಲ್ಲಿ ಒಂದಾದ ತನ್ನ ಗಂಡನೊಂದಿಗಿನ ವಿಚ್ಛೇದನ ಪ್ರಕರಣವನ್ನು 'ಸ್ಟಾರ್ಟಿಂಗ್ ಓವರ್' ಎಂಬ ಆಟೊಬಯಾಗ್ರಫಿಯಲ್ಲಿ ಸಾದ್ಯಂತವಾಗಿ ವಿವರಿಸಿರುವುದಾಗಿ ಆಕೆ ಹೇಳಿಕೊಂಡಿದ್ದಾಳೆ. ಏನೋ, ದೊಡ್ಡವರ ವಿಷ್ಯಾ ನಮಗೇಕೆ ಬಿಡಿ !?


Click it and Unblock the Notifications











