»   » ನನ್ನ ಜತೆ ಮಲಗಿದರೆ ಒಂದು ರಾತ್ರಿಗೆ 7 ಕೋಟಿ ರು

ನನ್ನ ಜತೆ ಮಲಗಿದರೆ ಒಂದು ರಾತ್ರಿಗೆ 7 ಕೋಟಿ ರು

Posted By:
Subscribe to Filmibeat Kannada

ಕ್ಯಾನೆ ಫಿಲಂ ಫೆಸ್ಟಿವಲ್ ನಲ್ಲಿ ನಮ್ಮ ಡುಮ್ಮಿ ಅಮ್ಮಿ ಐಶ್ವರ್ಯ ರೈ, ಬೆನ್ನುರಹಿತ ಮಲ್ಲಿಕಾ ಶೆರಾವತ್ ಒಬ್ಬೊಬ್ಬರಾಗಿ ಸದ್ದಿಲ್ಲದೆ ಭಾಗವಹಿಸುತ್ತಿದ್ದಾರೆ. ಇದೇ ವೇಳೆ ಅತ್ತ ಸುರಸುಂದರಿ ನಟಿಯೊಬ್ಬಳು ಕ್ಯಾನೆದಲ್ಲಿ ಭಾಗವಹಿಸುವಾಗ ದೊಡ್ಡ ಗುಲ್ಲೆಬ್ಬಿಸಿದ್ದಾಳೆ.

ಪಾಶ್ಚಿಮಾತ್ಯರ ಖದರೇ ಅಂತಹುದು ಬಿಡಿ. ವಿಷಯ ಏನಪಾ ಅಂದರೆ ಕ್ಯಾನೆದಲ್ಲಿ ಭಾಗವಹಿಸುವ ನಟೀಮಣಿಯರು ಫೋಟೋ ಸೆಷನ್ ನಲ್ಲಿ ಪಾಲ್ಗೊಳ್ಳುವುದೇ ನೋಡುಗರಿಗೆ ದೊಡ್ಡ ಹಬ್ಬ. Kelly Brook ಎಂಬ ಬೆಡಗಿ ಹೀಗೆ ಫೋಟೋಗಳಿಗೆ pose ಕೊಡುತ್ತಿರುವಾಗ ಗೂಳಿಯಂತೆ ನುಗ್ಗಿದ ಫ್ರೆಂಚ್ ಕೋಟ್ಯಧಿಪತಿ ಉದ್ಯಮಿಯೊಬ್ಬ ಕೇಳಬಾರದ್ದನ್ನ ಕೇಳಿಯೇ ಬಿಟ್ಟ -


'ಅಮ್ಮಿ, ಬಾಮ್ಮಿ ನನ್ಜತೆ just ಒಂದು ರಾತ್ರಿ ಮಲಗಿಕೋ ಬಾ! ನಿನ್ಗೆ just 1 ದಶಲಕ್ಷ ಯುರೊ ಹಣ (ಏಳು ಕೋಟಿ ರುಪಾಯಿ) ಕೊಡ್ತೀನಿ. ಇನ್ನೂ ಏನೇನೋ ಕೊಡ್ತೀನಿ. ಹೂ ಅನ್ನು ಅಂತ ದುಂಬಾಲುಬಿದ್ದು ದೊಡ್ಡ scene create ಮಾಡಿದ್ದಾನೆ ಭೂಪ!

ತಗೋ ಈ ಚೆಕ್ ಎಂದು 32 ವರ್ಷದ ಸುರಸುಂದರಿ Kelly Brookಳತ್ತ ನುಗ್ಗಿದ Frederic ಎಂಬ 30 ವರ್ಷದ ಆಸುಪಾಸಿನ ಆ ಗೂಳಿಯನ್ನು ಭದ್ರತಾ ಸಿಬ್ಬಂದಿ ಹರಸಾಹಸಪಟ್ಟು ಸೆರೆಹಿಡಿದಿದ್ದಾರೆ. ಆರಂಭದಲ್ಲಿ ಇದ್ಯಾವುದೋ promo shooting ಇರಬೇಕು ಎಂದು Kelly Brook ಸಹ ಸುಮ್ಮನೇ ನೊಡುತ್ತಾ ನಿಂತುಬಿಟ್ಟಿದ್ದಾಳೆ.

ಆದರೆ 'ಅಮ್ಮಿ, ಬಾಮ್ಮಿ ನನ್ಜತೆ just ಒಂದು ರಾತ್ರಿ ಮಕ್ಕೋ ಬಾ! ನಿನ್ಗೆ ಎಷ್ಟ್ ಬೇಕಾದ್ರೂ ದುಡ್ಡು ಕೊಡ್ತೀನಿ ಅಂತ ಒಂದೇ ಸಮನೆ ಒದರುವುದನ್ನು ಕೇಳಿ 'ಓ ಇದ್ಯಾವುದೋ mental case ಇರಬೇಕು' ಅಂತ ಆಯಮ್ಮಿ ಹುಷಾರಾಗಿದ್ದಾಳೆ.

1993ರಲ್ಲಿ ಒಂದು ಸಿನಿಮಾ ಬಂದಿತ್ತು. ಅದರಲ್ಲಿತ್ತು Indecent Proposal. ಆ ಸಿನಿಮಾನದಲ್ಲಿ ಡೆಮಿ ಮೋರ್ ಎಂಬ ದೇವತೆಯನ್ನು ರಾಬರ್ಟ್ ರೆಡ್ ಫೋರ್ಡ್ ಎಂಬ ವ್ಯಾಪಾರಿ ಹೀಗೆ ಗೋಳುಹೊಯ್ದುಕೊಂಡು (ಆಗ್ಗೆ 20 ವರ್ಷಗಳ ಹಿಂದೆಯೇ) ಒಂದು million dollars ಕೊಡ್ತೀನಿ, ಬಾ ಎಂದು ಗೋಗರೆದಿದ್ದ.

English summary
The 32-year-old Kelly Brook received an indecent proposal at 65th Cannes Films Festival, when a when the thirty something French millionaire offered her one million euros to sleep with her.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada