»   » ಅಕ್ಷಯ ಪಾತ್ರೆಯಲ್ಲಿ ಮಿಂದ ಸೌಂದರ್ಯವತಿ

ಅಕ್ಷಯ ಪಾತ್ರೆಯಲ್ಲಿ ಮಿಂದ ಸೌಂದರ್ಯವತಿ

Posted By:
Subscribe to Filmibeat Kannada

ನಟಿ, ಟಿವಿ ತಾರೆ, ಮೂರು ಮಕ್ಕಳ ತಾಯಿ ಜೂಲಿಯಾ ರಾಬರ್ಟ್ಸ್ ನಾಲಕ್ಕನೇ ಬಾರಿಗೆ ಪ್ರಪಂಚದ ಅತ್ಯಂತ ಸುಂದರ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಪೀಪಲ್ಸ್ ಪತ್ರಿಕೆಯ Most Beautiful People 2010 ಪಟ್ಟಿಯಲ್ಲಿ ಅವರ ಹೆಸರು ಮೊದಲ ಸ್ಥಾನದಲ್ಲಿ ಮಿರಮಿರ ಮಿಂಚುತ್ತಿದೆ.

ಇದೇನು ಬ್ರೇಕಿಂಗ್ ನ್ಯೂಸ್ ಅಲ್ಲ. ಸೌಂದರ್ಯವತಿ ಪಟ್ಟ ಜೂಲಿಯಾ ಅವರನ್ನು ಹುಡುಕಿಕೊಂಡು ಬರುತ್ತಲೇ ಇರುತ್ತದೆ. ಅದೇ ಅವರ ರೂಪ ಲಾವಣ್ಯದ ಗುಟ್ಟು. ಆಕೆ ಮೂರು ಮಕ್ಕಳನ್ನು ಹೆತ್ತಿದ್ದಾರೆ, ಐದು ವರ್ಷದ ಅವಳಿ ಮಕ್ಕಳು ಹೇಜಲ್ ಮತ್ತು ಫಿನಾಸ್ ಮತ್ತು ಎರಡು ವರ್ಷದ ಮಗ ಹೆನ್ರಿ. ಮದುವೆಯಾಗಿ ಮಕ್ಕಳಾದರೆ ಸೊಂಟದಲ್ಲಿ ಟೈರುಗಳು ಮೂಡುತ್ತದೆ,ರೂಪ ಲಾವಣ್ಯ ನಶಿಸುತ್ತವೆ ಎಂಬ ಮನೋದೈಹಿಕ ನಂಬಿಕೆಯನ್ನು ಸುಳ್ಳು ಮಾಡಿದ ಹೆಗ್ಗಳಿಕೆ ಜೂಲಿಯಾಗೆ ಸಲ್ಲುತ್ತದೆ. ಅವರ ಪತಿಯ ಹೆಸರು ಡ್ಯಾನಿ ಮೋಡರ್.

ಮೋಹಕ ಮೈಮಾಟ, ಬರಸೆಳೆದಪ್ಪುವ ನೋಟ, ಆಕರ್ಷಕ ನಡಿಗೆ ಮತ್ತು ಸರಳ ಉಡುಗೆ ತೊಡುಗೆ ಆಕೆಯ ಸೊತ್ತುಗಳು. ಧರೆಗಿಳಿದುಬಂದ ಸಹಜಸೌಂದರ್ಯವತಿ ಜೂಲಿಯಾರ ಅಂದ ಮತ್ತು ಚೆಂದ ಅವರನ್ನು ಜಾಗತಿಕ ಚೆಲುವೆಯರ ಪಟ್ಟಿಯಲ್ಲಿ ಪಟ್ಟದರಸಿ ಸ್ಥಾನದಲ್ಲಿ ಕುಳ್ಳಿರಿಸಿರುವುದು ಸ್ವಾಭಾವಿಕವೇ ಆಗಿದೆ.

ಪೀಪಲ್ಸ್ ಪತ್ರಿಕೆಯು ಪ್ರತಿವರ್ಷ 100 ಮಂದಿ ಅತ್ಯಂತ ಸುಂದರ ವ್ಯಕ್ತಿಗಳನ್ನು ಆಯ್ಕೆ ಮಾಡುತ್ತದೆ. ಆ ಪಟ್ಟಿಯಲ್ಲಿ ಇದುವರೆಗೆ ಜೂಲಿಯಾ 12 ಸಲ ಸ್ಥಾನಪಡೆದಿರುವುದು ಅವರ ಹೆಗ್ಗಳಿಕೆ ಅನ್ನುವುದಕ್ಕಿಂತ 42 ವರ್ಷದ ಪ್ರಾಯದಲ್ಲೂ ಸುಂದರ ವ್ಯಕ್ತಿಗಳ ಪಟ್ಟಿಯಲ್ಲಿ ಮೊದಲ ಸ್ಥಾನಗಳಿಸಿರುವುದು ಸೌಂದರ್ಯ ಸಮೀಕ್ಷರು ಹಾಗೂ ಸೌಂದರ್ಯದ ಆರಾಧಕರನ್ನು ಚಕಿತಗೊಳಿಸದೆ ಬಿಡುವುದಿಲ್ಲ.

ಅವರ ಅಭಿಮಾನಿಗಳು ಆಕೆಯ ಬರಲಿರುವ ಚಿತ್ರಕ್ಕಾಗಿ ಬಕಪಕ್ಷಿಗಳಿಗಂತೆ ಕಾಯುತ್ತಿರುವುದು ತೀರ ಸಹಜವೇ ಆಗಿದೆ. She is so happy and fulfilled and it shows ಕಾದಂಬರಿ ಆಧಾರಿಸಿದ ಚಿತ್ರ Eat, Pray, Love ನಲ್ಲಿ ಜೂಲಿಯಾ ಅವರನ್ನು ಭೇಟಿಯಾಗೋಣವಂತೆ. ಅಲ್ಲಿಯವರೆಗೆ, ಕಂಗ್ರಾಜುಲೇಷನ್ಸ್ ಜೂಲಿಯಾ!ಕೀಪ್ ಇಟ್ ಅಪ್.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada