»   » ಮ್ಯಾಗಝಿನ್ ಮುಖಪುಟದಲ್ಲಿ ಗರ್ಭಿಣಿ ಜೆಸ್ಸಿಕಾ

ಮ್ಯಾಗಝಿನ್ ಮುಖಪುಟದಲ್ಲಿ ಗರ್ಭಿಣಿ ಜೆಸ್ಸಿಕಾ

Posted By:
Subscribe to Filmibeat Kannada
Jessica Simpson
ಗಾಯಕಿ ಜೆಸ್ಸಿಕಾ ಸಿಂಪ್ಸನ್ ಎಲ್ಲೆ ಮ್ಯಾಗಝಿನ್ (Elle) ಮುಖಪುಟಕ್ಕೆ ಬೆತ್ತಲೆ ಫೊಸ್ ನೀಡಿದ್ದಾರೆ. ಇದೀಗ 'ಎರಿಕ್ ಜಾನ್ಸನ್' ನಿಂದ ಮಗು ಪಡೆಯುತ್ತಿರುವ ತುಂಬು ಬಸುರಿ ಜೆಸ್ಸಿಕಾ, ತನಗೆ ಹೀಗೆ ಕಾಣಿಸಿಕೊಳ್ಳುವಾಗ ಸಂಕೋಚವೇನೂ ಆಗಿಲ್ಲ ಎಂದಿದ್ದಾರೆ. ಏಪ್ರಿಲ್ ಸಂಚಿಕೆಯ ಈ ಮ್ಯಾಗಝಿನ್ ಮಾರ್ಚ್ 20 ರಂದು ಮಾರುಕಟ್ಟೆ ಪ್ರವೇಶಿಸಲಿದೆ.

ಅಮೇರಿಕಾದಲ್ಲಿ ಆಕೆ ನೀಡಿದ ಟೆಲಿಫೋನ್ ಸಂದರ್ಶನವೊಂದರಲ್ಲಿ "ನಾನು ತುಂಬಾ ಸಂಕೋಚ ಸ್ವಭಾವದವಳು. ನಾನೆಂದೂ ಬಿಕನಿಯಲ್ಲಿ ಬೀಚ್ ಹಾಕಿದ ದೃಶ್ಯಗಳಲ್ಲಿ ಕಾಣಿಸಿಕೊಂಡವಳಲ್ಲ. ಆದರೆ ಇದೀಗ ಗರ್ಭಿಣಿಯಾಗಿರುವ ನಾನು, ಕೆಲವೊಂದು ಕಾರಣಗಳಿಂದ ಸುಲಭವಾಗಿ ಪೋಟೋಕ್ಕೆ ಫೋಸ್ ನೀಡಲು ಸಾಧ್ಯವಾಯಿತು" ಎಂದಿದ್ದಾರೆ.

ಈ ಮ್ಯಾಗಝಿನ್ ಮುಖಪುಟ ಜೆಸ್ಸಿಕಾಳನ್ನು ಸಂಪೂರ್ಣ ಬೆತ್ತಲಾಗಿ ತೋರಿಸಿದೆ. ಆಕೆ, ಒಂದು ಕೈಯನ್ನು ಎದೆಯಮೇಲೆ ಇಟ್ಟುಕೊಂಡು ಸ್ವಲ್ಪಭಾಗ ಮುಚ್ಚಿಕೊಂಡಿದ್ದಾಳೆ, ಇನ್ನೊಂದು ಕೈಯನ್ನು ಆಕೆಯ ಗುಪ್ತಾಂಗ ಮರೆಯಾಗುವಂತೆ ಹಿಡಿದುಕೊಂಡಿದ್ದಾಳೆ. ವಜ್ರದ ಆಭರಣಗಳು ಮೈಮೇಲೆ ಶೋಭಿಸುತ್ತಿವೆ. (ಏಜೆನ್ಸೀಸ್)

English summary
Singer Jessica Simpson, who is expecting Eric Johnson's child, has gone nude for the cover of April issue of the Elle magazine. The heavily pregnant star says that she was not nervous at all to expose herself for the magazine, inner spread of which also features her football player husband.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada