ನಿಕೋಲೆ ಆಗಮನದ ಸುದ್ದಿಗೆ ನಿದ್ದೆ ಬಿಟ್ಟ ಮುಂಬೈ

ಬಾಲಿವುಡ್ ಬೆಚ್ಚಿಬಿದ್ದಿದೆ ಮತ್ತು ಬೆಚ್ಚಗಾಗಿದೆ. ಸುದ್ದಿ ಕೇಳಿ ನೀವೂ ಈ ಚಳಿಗಾಲದ ರಾತ್ರಿಯಲ್ಲೂ ಬೆವರೋದು ಗ್ಯಾರಂಟಿ. ಯಾಕಂದ್ರೆ ಬಾಲಿವುಡ್ ಗೆ ಎಂಟ್ರಿ ಕೊಡ್ತಿದಾರೆ ಹಾಲಿವುಡ್ ಸುಂದರಿ ನಿಕೋಲೆ ಕಿಡ್ ಮ್ಯಾನ್. ಇವಳು ಅಂತಿಂಥ ಸುಂದರಿ ಅಲ್ಲ. ಹಾಲಿವುಡ್ ಇವಳನ್ನು ನೋಡಿದರೆ ಕಣ್ಣು ಮಚ್ಚಲೂ ಮರೆಯುತ್ತದೆ.

ಇಂಥ ನಿಕೋಲೆ ಬಾಲಿವುಡ್ ಗೆ ಬರಲಿದ್ದಾಳೆಂದರೆ ಸಾಮಾನ್ಯದ ಮಾತೇ. ಅವರನ್ನು ಕರೆತರುತ್ತಿರುವುದು ನಿರ್ಮಾಪಕ ರೂಮಿ ಜೆಫ್ರಿ. ಅಕ್ಷಯ್ ಖನ್ನಾ, ಮುಗ್ಧಾ ಗೋಡ್ಸೆ ಹಾಗೂ ಶ್ರೀಯಾ ಶರಣ್ ಅಭಿನಯದ 'ಗಲಿ ಗಲಿ ಮೆ ಚೋರ್ ಹೈ' ಚಿತ್ರದ ಐಟಂ ಹಾಡೊಂದರಲ್ಲಿ ಹೆಜ್ಜೆಹಾಕಲಿದ್ದಾರೆ ಈ ಹಾಲಿವುಡ್ ಹಾಟ್ ಹುಡುಗಿ. ಅದಕ್ಕಾಗಿ ಈಕೆ ಪಡೆಯುತ್ತಿರುವ ಸಂಭಾವನೆ ಬಾಲಿವುಡ್ ನಟಿಯರು ಹೊಟ್ಟೆ ಉರಿದುಕೊಳ್ಳುವಷ್ಟು.

ಒಂದು ಹಾಡಿಗೆ ಬರೋಬ್ಬರಿ 5 ಕೋಟಿ ಪಡೆದು ಮತ್ತೆ ಹಾಲಿವುಡ್ ಗೆ ಹಾರಿ ಹೋಗಲಿದ್ದಾಳೆ. ಇನ್ನೊಬ್ಬ ಬಾಲಿವುಡ್ ನಿರ್ಮಾಪಕರೂ ಕೂಡ ಈಕೆಯನ್ನು ಐಟಮ್ ನಂಬರ್ ಗಾಗಿ ಸಂಪರ್ಕಿಸಿದ್ದಾರಂತೆ. ಆದರೆ ವೃತ್ತಿಧರ್ಮದಂತೆ ಮೊದಲು ಬಂದವರಿಗೆ ಮೊದಲು ಮಣೆ ಎಂದಿದ್ದಾರೆ ನಿಕೋಲೆ. ಮುಂಬೈ ಈಗಲೇ ನಿದ್ದೆ ಮಾಡುತ್ತಿಲ್ಲ ಎಂದು ಸುದ್ದಿ. ಇನ್ನು ಈಕೆಯ ಐಟಂ ನೋಡಿದ ಮೇಲೆ ಬಾಲಿವುಡ್ ಪಾಡು..!ಊಹಿಸಬೇಡಿ. (ಏಜೆನ್ಸೀಸ್)

More from Filmibeat

English summary
Hollywood hottie Nicole Kidman to dance to Bollywood’s tunes. According to sources, Nicole has finally green-lighted a proposal to do an item number in a Bollywood flick, but has asked for a huge appearance fee, Rs. 5 Crore.
 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X