ಜೆನ್ನಿಫರ್ ಹಾಟೆಸ್ಟ್ ಮಹಿಳೆಯಾಗಲು ಏನು ಕಾರಣ?
ಜೆನ್ನಿಫರ್ ಹಾಟ್ ಆಗಿ ಕಾಣಲು, ಆಕ್ಟೀವ್ ಆಗಿ ಇರಲು ಏನು ಕಾರಣ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಜೆನ್ನಿಫರ್ ಲವ್ಸ್ ಯೋಗ: ಯೋಗಾಭ್ಯಾಸ ಜೆನ್ನಿಫರ್ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ದೈನಂದಿನ ಚಟುವಟಿಕೆಯಲ್ಲಿ ಯೋಗ, ಧ್ಯಾನ ಇರಲೇಬೇಕು.
'I do yoga, yoga is very important. I love it. If I"m not doing it, then my spirit sort of goes. I try to do some form of exercise, even if it"s just for 20 minute a day, so that I get my body sweating and blood pumping' ಎಂದು ಜೆನ್ನಿ ಹೇಳಿದ್ದಾಳೆ.
ಟಾಪ್ 100 ಹಾಟ್ ಮಹಿಳೆಯರ ಪಟ್ಟಿಯಲ್ಲಿ 42 ವರ್ಷದ ಜೆನ್ನಿಗೆ ಮೊದಲ ಸ್ಥಾನ ದಕ್ಕಿದೆ.'Funny is sexy, and Jennifer Aniston is funny' ಎಂದು ನ್ಯೂಯಾರ್ಕ್ ಡೈಲಿ ನ್ಯೂಸ್ ತನ್ನ ವೆಬ್ ಪುಟದಲ್ಲಿ ಜೆನ್ನಿಯನ್ನು ಹಾಡಿ ಹೊಗಳಿದೆ.
'ಜನಪ್ರಿಯ ನಟಿಯಾದರೂ ಜೆನ್ನಿ, ಸರಳ ಸ್ವಭಾವದಿಂದ ಎಲ್ಲರನ್ನು ಪ್ರಭಾವಕ್ಕೆ ಈಡುಮಾಡುತ್ತಾಳೆ, ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡುವ ಈಕೆ, ಪ್ರಣಯಭರಿತ ಚಿತ್ರಗಳಲ್ಲಿ ಕಾಣುವ ರೀತಿಯೇ ಬೇರೆ' ಎಂದು ಜೆನ್ನಿ ಬಗ್ಗೆ ಹೇಳಲಾಗಿದೆ.
ಜೆನ್ನಿಫರ್ ನಂತರದ ಸ್ಥಾನದಲ್ಲಿ ರಾಕ್ವೆಲ್ ವೆಲ್ಶ್, ಮರ್ಲೀನ್ ಮನ್ರೋ, ಬ್ರಿಟ್ನಿ ಸ್ಪಿಯರ್ ಹಾಗೂ ಮಡೊನ್ನಾ ಸ್ಥಾನ ಪಡೆದಿದ್ದಾರೆ.


Click it and Unblock the Notifications












