ಬ್ರಾಡ್ ಜೊತೆ ಏಂಜಲೀನಾ ಜೋಲಿ ಡುಂ ಡುಂ ಡುಂ

By Rajendra

Angelina Jolie Brad Pitt Marriage
ಆರು ವರ್ಷಗಳ ಸುದೀರ್ಘ ಗೆಳೆತನಕ್ಕೆ ಈಗ ಮದುವೆಯ ಮಾಲೆ ಬೀಳಲಿದೆ. ಹಾಲಿವುಡ್ ಯಶಸ್ವಿ ಜೋಡಿ ಬ್ರಾಡ್ ಪಿಟ್(47) ಹಾಗೂ ಏಂಜಲೀನಾ ಜೋಲಿ(36) ಮದುವೆಗೆ ಮುಹೂರ್ತ ನಿಗದಿಯಾಗಿದೆ. ದಕ್ಷಿಣ ಫ್ರಾನ್ಸ್‌ನಲ್ಲಿ ಅಸಾಂಪ್ರದಾಯಿಕ ಶೈಲಿಯಲ್ಲಿ ಮದುವೆ ನಡೆಯಲಿದೆ ಎಂದು ಯುಎಸ್ ಮ್ಯಾಗಜಿನ್ ವರದಿ ಮಾಡಿದೆ.

ಫ್ರಾನ್ಸ್‌ನ ಕೋರನ್ಸ್‌ನಲ್ಲಿ ಹೊಸದಾಗಿ ನಿರ್ಮಿಸಿದ ಭವ್ಯಗೃಹದಲ್ಲಿ ಇವರಿಬ್ಬರ ಮದುವೆ ನಡೆಯಲಿದೆ. ಈ ಭವ್ಯಸೌಧದಲ್ಲಿ 16ನೇ ಶತಮಾನದ ಚರ್ಚ್ ಕೂಡ ಇದ್ದು ಇದರಲ್ಲೇ ಇವರಿಬ್ಬರು ಉಂಗುರ, ಹಾರ ಬದಲಾಯಿಸಿಕೊಳ್ಳಲಿದ್ದಾರೆ.

ಈಗಾಗಲೆ ಬ್ರಾಡ್ ಪಿಟ್ ಹಾಗೂ ಏಂಜಲೀನಾ ಜೋಲಿಗೆ ಮಕ್ಕಳಿದ್ದು, ಮಕ್ಕಳ ಸನ್ನಿದ್ಧಿಯಲ್ಲಿ ದೊಡ್ಡವರ ಮದುವೆ ನೆರವೇರಲಿದೆ. ಸಾಮಾನ್ಯವಾಗಿ ಮಕ್ಕಳಿಗೆ ಮದುವೆ ಮಾಡಿ ತಂದೆ ತಾಯಿ ಆರತಿಗೊಬ್ಬ ಮಗಳು ಕೀರ್ತಿಗೊಬ್ಬ ಮಗಳಾಗಲಿ ಎಂದು ಆಶೀರ್ವದಿಸುತ್ತಾರೆ. ಆದರೆ ಇಲ್ಲಿ ತದ್ವಿರುದ್ಧ. ನಮಗೆ ಇನ್ನೊಂದು ತಮ್ಮ, ತಂಗಿಯನ್ನು ಕರುಣಿಸಿ ಅನ್ನುತ್ತಾರೋ ಏನೋ? (ಪಿಟಿಐ)

More from Filmibeat

English summary
After six years of being together and a family of six kids, Hollywood’s ’it’ couple Brad Pitt and Angelina Jolie have reportedly decided to tie the knot.The pair is said to be planning an "intimate and informal" wedding in the South of France, reported Us magazine.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X