ಉದಯಪುರಕ್ಕೆ ಬಂದಿಳಿದ ಶಕಲಕ ಬೇಬಿ ಶಕೀರಾ

By Rajendra

Pop Siger Shakira
ಲ್ಯಾಟಿನ್ ಪಾಪ್ ತಾರೆ ಶಕಲಕ ಬೇಬಿ ಶಕೀರಾ ಭಾರತದ ಉದಯಪುರಕ್ಕೆ ಬಂದಿಳಿದಿದ್ದಾರೆ. ಆಕೆಯ ಜೊತೆ ಜೊತೆಗೆ ಬ್ಯಾಂಡ್ ತಂಡವೂ ಬಂದಿದೆ. ವಿಶೇಷ ಖಾಸಗಿ ವಿಮಾನದಲ್ಲಿ ಶಕೀರಾ ಸೋಮವಾರ (ನ.14) ಬಂದಿಳಿದರು. 34ರ ಶಕೀರಾ ಭಾರತಕ್ಕೆ ಬರುತ್ತಿರುವುದು ಇದು ಎರಡನೇ ಭಾರಿ. ಈ ಹಿಂದೆ 2007ರಲ್ಲೊಮ್ಮೆ ಶಕೀರಾ ಭಾರತಕ್ಕೆ ಭೇಟಿ ನೀಡಿದ್ದರು.

ಈ ಸುದ್ದಿ ತಿಳಿಯುತ್ತಿದ್ದಂತೆ ಅಪಾರ ಅಭಿಮಾನಿಗಳು ಆಕೆಯನ್ನು ಕಣ್ತುಂಬಿಕೊಳ್ಳಲು ಮುತ್ತಿಗೆ ಹಾಕಿದ್ದಾರೆ. ಈಕೆಯನ್ನು ಉದಯಪುರಕ್ಕೆ ಕರೆಸಿದವರು ರಿಯಲ್ ಎಸ್ಟೇಟ್ ಪ್ರಭಾವಿ ಉದ್ಯಮಿ ಕೆಪಿ ಸಿಂಗ್. ಈತ ತನ್ನ ಬರ್ತ್‌ಡೇಗಾಗಿ ಶಕೀರಾರನ್ನು ಕರೆಸಿದ್ದಾನೆ.

ಬ್ಲ್ಯಾಕ್ ಜೀನ್ಸ್ ಹಾಗೂ ತಿಳಿನೀಲಿ ಬಣ್ಣದ ಟೀಶರ್ಟ್ ತೊಟ್ಟಿದ್ದ ಶಕೀರಾರನ್ನು ಮುಟ್ಟಿ ಸಂಭ್ರಮಿಸಲು ಅಭಿಮಾನಿಗಳು ಹಾತೊರೆದರಾದರೂ ಪೊಲೀಸ್ ಬಿಗಿ ಭದ್ರತೆಯಿದ್ದ ಕಾರಣ ಸಾಧ್ಯವಾಗಲಿಲ್ಲ. ಬಳಿಕ ಶಕೀರಾ ಹೋಟೆಲ್ ಉದಯವಿಲಾಸ್‌ಗೆ ತೆರಳಿದರು. (ಏಜೆನ್ಸೀಸ್)

More from Filmibeat

English summary
Pop star Shakira has arrived with her band members, reached the Lake City Udaipur by a private charted plane around 8.30 p.m. Monday (Nov 14). She is likely to be one of the many stars to perform at the birthday bash of a real estate tycoon K.P. Singh here on Tuesday, sources said.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X