ಮನೆ ಕೆಲಸದಾಕೆಯನ್ನೇ ಬಸುರಿ ಮಾಡಿದ ಮಿ.ವರ್ಲ್ಡ್

By Rajendra

ಕನ್ನಡದಲ್ಲಿ ಇವನ ಹೆಸರು ಹೇಳಬೇಕು ಅಂದ್ರೆನೆ ಏನೋ ಒಂಥರಾ ಕಸಿವಿಸಿ, ನಾಲಿಗೇನೆ ತಿರುಗೋಲ್ಲ. ಭಾರಿ ಕಷ್ಟಾನಪ್ಪಾ. ಇನ್ನು ಇಂಗ್ಲಿಷ್‌ನಲ್ಲೂ ಅಷ್ಟೆಯಾ. ಹೆಸರು ನೀವೇ ಓದಿಕೊಳ್ಳಿ Arnold Schwarzenegger. ಇವನೇನು ಅಂತಹ ಘನಂದಾರಿ ಕೆಲಸ ಮಾಡಿದ ಅಂತೀರಾ. ಈ ವಯ್ಯಾ ಒಂಥರಾ ನಸುಗುನ್ನಿ ತರಹಾ ಒಳಗೊಳಗೆ ಐನಾತಿ ಕೆಸಲ ಮಾಡವ್ನೆ. ತನ್ನ ಮನೆಕೆಲಸದಾಕೆಯನ್ನು ಬಸುರಿ ಮಾಡಿ ಈಗ ಅಯ್ಯೋ ಶಿವನೆ ಎಂದು ಪ್ರಸವವೇದನೆ ಅನುಭವಿಸುತ್ತಿದ್ದಾನೆ.

ಹಾಲಿವುಡ್‌ನಲ್ಲಿ ಅರ್ನಾಲ್ಡ್ ಎಂದರೆ ಉಕ್ಕಿನ ಮನುಷ್ಯ ಇದ್ದಂತೆ. ಇನ್ನೊಂಥರಾ ಹಾಲಿವುಡ್ ಕಿಂಗ್. The Terminator, Commando ಹಾಗೂ Predator ನಂತಹ ಚಿತ್ರಗಳನ್ನು ನೋಡಿದರೆ ಚಿಕ್ಕವರೇನು ದೊಡ್ಡವರು ನಡುಗುತ್ತಾರೆ. ಅರುವತ್ತೈದರ ಈತ ಮನೆಕೆಲಸದವಳೊಂದಿಗೆ ಆಡಿದ ಕಣ್ಣಾಮುಚ್ಚಾಲೆ ಈಗ ಬಯಲಾಗಿದೆ. ತಾನು ಮನೆಗೆಲಸದಾಕೆಯನ್ನು ಬಸುರಿ ಮಾಡಿದ್ದನ್ನು ಅರ್ಧಾಂಗಿಯ ಕಿವಿಗೆ ಹಾಕಿದ.

ಈತನ ಮುಖಕ್ಕೆ ಮಂಗಳಾರತಿ ಎತ್ತಿದ ಧರ್ಮಪತ್ನಿ ಈತನಿಗೆ ಸೋಡಾಚೀಟಿ ಕೊಟ್ಟು ತವರು ಮನೆ ಹಾದಿಹಿಡಿದಿದ್ದಾಳೆ. ಮನೆಗೆಲಸದಾಕೆಯೊಂದಿಗೆ ಹಾಸಿಗೆ ಹಂಚಿಕೊಂಡಿದ್ದು ಈಗಲ್ಲ ದಶಕದ ಹಿಂದೆ ಎಂದು ಈತ ಸ್ಪಷ್ಟಪಡಿಸಿದ್ದಾನೆ. ಆದರೂ ಈತನ ಭಂಡಧೈರ್ಯ ಮೆಚ್ಚಲೇಬೇಕು. ಹತ್ತು ವರ್ಷ ಈ ಗುಟ್ಟನ್ನು ಹೇಗಿಟ್ಟುಕೊಂಡಿದ್ದನೋ!

ತಾನು ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಂಡಿರುವ ಅರ್ನಾಲ್ಡ್ , ತನ್ನ ಮಾಜಿ ಪತ್ನಿ ಮತ್ತು ಮಕ್ಕಳನ್ನು ಕ್ಷಮೆ ಕೇಳಿದ್ದಾನೆ. ಇವರ ಮನೆಯಲ್ಲಿ ಮನೆಗೆಲಸದಾಕೆ 20 ವರ್ಷಗಳ ಕಾಲ ಕೆಲಸ ಮಾಡುತ್ತಿದ್ದರಂತೆ. ಆಕೆಯ ಹೆಸರು, ಕುಲ ಗೋತ್ರಗಳನ್ನು ದಿ ಲಾಸ್ ಏಂಜಲೀಸ್ ಟೈಮ್ಸ್ ಪತ್ರಿಕೆ ಗೋಪ್ಯವಾಗಿಟ್ಟಿದೆ. ಈತ ಕ್ಯಾಲಿಫೋರ್ನಿಯಾದ ಗವರ್ನರ್ ಕೂಡ ಆಗಿದ್ದ. (ಏಜೆನ್ಸೀಸ್)

More from Filmibeat

English summary
Arnold Schwarzenegger, former California Governor and his wife, Maria Shriver, separated after the former governor revealed he had fathered a child with a member of their household staff, The Los Angeles Times reported Tuesday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X