»   » ಬೇಕಾಬಿಟ್ಟಿ ಜೀವನದಿಂದ ಮಕ್ಕಳ ಬಾಳು ಚಟ್ನಿ ಮಾಡಿದ ಬ್ರಿಟ್ನಿ

ಬೇಕಾಬಿಟ್ಟಿ ಜೀವನದಿಂದ ಮಕ್ಕಳ ಬಾಳು ಚಟ್ನಿ ಮಾಡಿದ ಬ್ರಿಟ್ನಿ

Posted By:
Subscribe to Filmibeat Kannada

ಮೆಲ್ಬೋರ್ನ್, ಸೆ.18 : ಬ್ರಿಟ್ನಿ ಹಾಡಿನ ಲಯವನ್ನು ಕಳೆದುಕೊಂಡಿದ್ದಾಳೆ, ಸಂಗೀತ ಕಾರ್ಯಕ್ರಮದಲ್ಲಿ ಸಿಗಬಾರದ ಸ್ಥಿತಿಯಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದು ಇದ್ದಬದ್ದ ಮಾನವನ್ನೂ ಕಳೆದುಕೊಂಡಿದ್ದಾಳೆ. ಈಗ ತನ್ನ ಪ್ರೀತಿಯ ಮಕ್ಕಳ ಬಂಧವನ್ನೂ ಕಳೆದುಕೊಳ್ಳಲಿದ್ದಾಳೆ.

ಇದ್ದಕ್ಕೇ ಅನ್ನುವುದು ಮಾಡಿದ್ದುಣ್ಣೋ ಮರಾಯ್ತಿ!

ಮಕ್ಕಳನ್ನು ಲಾಲಿಸಿ ಪಾಲಿಸುವುದು ಹಾಗಿರಲಿ ಮಕ್ಕಳೆದುರಿಗೇ ಮಾದಕ ವಸ್ತುಗಳ ಸೇವನೆ ಮಾಡುತ್ತಾಳೆ ಎಂಬ ಆರೋಪ ಬ್ರಿಟ್ನಿ ಸ್ಪೀಯರ್ಸ್ ಮೇಲಿದೆ.

ಆಕೆ ತನ್ನ ಸ್ವಂತ ಮಕ್ಕಳನ್ನು ನೋಡಿಕೊಳ್ಳುತ್ತಿರುವ ರೀತಿಯನ್ನು ಗುಪ್ತವಾಗಿ ಗಮನಿಸುತ್ತಿರುವ ಆಕೆಯ ಮನೆಯಲ್ಲಿಯೇ ಇರುವ ವ್ಯಕ್ತಿಯೊಬ್ಬ ಬ್ರಿಟ್ನಿ ವಿರುದ್ಧ ನ್ಯಾಯಾಲಯಲ್ಲಿ ಸಾಕ್ಷಿ ನುಡಿಯಲಿದ್ದಾನೆ ಎಂದು ಬ್ರಿಟ್ನಿಯ ಮಾಡಿ ಗಂಡ ಕೆವಿನ್ ಫೆಡರ್ಲಿನ್‌ನ ವಕೀಲ ಗ್ಲೋರಿಯಾ ಅಲ್ರೆಡ್ ಹೇಳಿದ್ದಾರೆ.

ಮನೆಯ ಹೊರಗಡೆ ಮಾತ್ರವಲ್ಲ ಮನೆಯಲ್ಲಿಯೂ ಅದರಲ್ಲಿ ಮಕ್ಕಳೆದುರಿಗೇ ಮಾದಕ ಸೇವನೆ ಮಾಡುವ ತಾಯಿ ಹೇಗೆ ತನ್ನ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಬಲ್ಲಳು ಎಂಬ ವಾದ ಮುಂದಿಟ್ಟಿದ್ದಾನೆ ವಕೀಲ.

ಸಾಕ್ಷಿ ಪ್ರಸಿದ್ಧನಲ್ಲದಿರಬಹುದು. ಆದರೆ, ಮಕ್ಕಳ ಯೋಗಕ್ಷೇಮದ ಬಗ್ಗೆ ಕಳಕಳಿಯಿರುವ ವ್ಯಕ್ತಿಯೊಬ್ಬ ಬ್ರಿಟ್ನಿಯ ನಡೆನುಡಿಗಳನ್ನು ಅತ್ಯಂತ ಹತ್ತಿರದಿಂದ ಗಮನಿಸುತ್ತಿದ್ದಾನೆ. ಆತನೇ ಬ್ರಿಟ್ನಿ ವಿರುದ್ಧ ಸಾಕ್ಷಿ ನುಡಿಯಲಿದ್ದಾನೆ ಎಂದು ಗ್ಲೋರಿಯಾ ಹೇಳಿದ್ದಾರೆ.

ಸಂಗೀತ ಕ್ಷೇತ್ರಕ್ಕೆ ಮರಳಿ ಬಂದಿರುವ ಬ್ರಿಟ್ನಿ ವಿಪರೀತ ದಪ್ಪವಾಗಿದ್ದಲ್ಲದೆ ಎಂಟಿವಿ ಕಾರ್ಯಕ್ರಮದಲ್ಲಿ ಕೆಟ್ಟದಾಗಿ ಹಾಡಿ ಸಂಗೀತಪ್ರೇಮಿಗಳಿಂದ ಉಗಿಸಿಕೊಂಡಿದ್ದಾಳೆ. ವೃತ್ತಿಯಲ್ಲಿ ಹೇಗಾದರೂ ಇರಲಿ ವೈಯಕ್ತಿಕ ಜೀವನದಲ್ಲಿ ತನ್ನ ಇಬ್ಬರು ಮಕ್ಕಳಾದ ಸೀನ್ ಪ್ರೆಸ್ಟನ್ ಮತ್ತು ಜೇಡೆನ್ ಜೇಮ್ಸ್‌ರನ್ನು ನೋಡಿಕೊಳ್ಳಲಾರದಷ್ಟೂ ಬರಗೆಟ್ಟು ಹೋದಳೆ ಬ್ರಿಟ್ನಿ?

(ಎಎನ್ಐ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada