ವೇಶ್ಯಾವಾಟಿಕೆ ಹಾಟ್ ಚಿತ್ರಕ್ಕೆ ಬೇಜಾನ್ ಕತ್ತರಿ
ನಿರ್ದೇಶಕಿ ಜೂಲಿಯಾ ಲೈಗ್ ರ "ಸ್ಲೀಪಿಂಗ್ ಬ್ಯೂಟಿ" ಚಿತ್ರ ತೆರೆಗೆ ಬರುವ ಮುನ್ನವೆ ಸಾಕಷ್ಟು ಸುದ್ದಿ ಮಾಡುತ್ತಿದೆ. ಸ್ಲೀಪಿಂಗ್ ಬ್ಯೂಟಿ ಎಂದರೆ ಡಿಸ್ನಿ ಸರಣಿಯ ಕಾರ್ಟೂನ್ ಚಿತ್ರ ಎಂದು ಬಹಳಷ್ಟು ಜನ ಕನ್ ಫ್ಯೂಸ್ ಆಗಿದ್ದರು. ಆದರೆ, ಇದು ಪ್ರಬುದ್ಧವಾದ ಚಿತ್ರ ಎಂದು ಪ್ರಚಾರ ಪಡೆಯುತ್ತಿದೆ. ಪ್ರತಿಷ್ಠಿತ ಕ್ಯಾನೆ ಚಿತ್ರೋತ್ಸವಕ್ಕೆ ಆಯ್ಕೆಯಾಗಿರುವ ಸಂತಸ ಒಂದೆಡೆಯಾದರೆ, ಸೆನ್ಸಾರ್ ಮಂಡಳಿಯಿಂದ ಸಿಕ್ಕಾಪಟ್ಟೆ ಕಾಟ ಬೇರೆ ಶುರುವಾಗಿದೆ. ಪ್ರಪ್ರಥಮ ಬಾರಿಗೆ ಆಸ್ಟ್ರೇಲಿಯಾ ಖ್ಯಾತ ಲೇಖಕಿ ಜೂಲಿಯಾಳ ಚಿತ್ರ ನಿರ್ದೇಶನಕ್ಕೆ ಮನ್ನಣೆ ಸಿಕ್ಕಿದೆ.
ಸ್ಲೀಪಿಂಗ್ ಬ್ಯೂಟಿ ಚಿತ್ರದ ಟ್ರೈಲರ್ ಈಗಾಗಲೇ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಸಕ್ಕರ್ ಪಂಚ್ ಚಿತ್ರದ ತಾರೆ ಎಮಿಲಿ ಬ್ರೌನಿಂಗ್ ಈ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸೆನ್ಸಾರ್ ಮಂಡಳಿ ಕ್ರಮ ಕಂಡು ಸಿಡಿಮಿಡಿಗೊಂಡಿದ್ದಾರೆ. ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು ಹೈಕ್ಲಾಸ್ ವೇಶ್ಯಾವಾಟಿಕೆ ದಂಧೆಯಲ್ಲಿ ಸಿಲುಕಿಗೊಂಡು ಒದ್ದಾಡುವ ಕಥಾನಕ ಇದೆ.
ಈ ಚಿತ್ರದ ಕಥೆಗೆ ಪೂರಕವಾಗಿ ಹಸಿಬಿಸಿ ದೃಶ್ಯದಲ್ಲಿ ನಾಯಕಿ ಎಮಿಲಿ ಕಾಣಿಸಿಕೊಂಡಿದ್ದಾರೆ. ಸಕ್ಕರ್ ಪಂಚ್ ಚಿತ್ರದಲ್ಲಿ ಜಾನ್ ಹಾಮ್ ಜೊತೆ ಕೂಡಾ ಇದೇ ರೀತಿ ಸೆಕ್ಸಿ ದೃಶ್ಯಗಳಿಗೆ ಸೆನ್ಸಾರ್ ಮಂಡಳಿ ಕತ್ತರಿಯಾಡಿಸಿತ್ತು.ಇದರಿಂದ ಕೋಪಗೊಂಡಿದ್ದ ಎಮಿಲಿ, ಅಟ್ ಲಿಸ್ಟ್ ಮೇ ತಿಂಗಳಲ್ಲಿ ಕೇನ್ಸ್ ಚಿತ್ರೋತ್ಸವದಲ್ಲಾದರೂ ಏನೂ ಕಟ್ ಮಾಡದೇ ಪ್ರದರ್ಶಿಸಲು ಬಿಡಿ ಎಂದಿದ್ದಾರೆ. ಒಟ್ಟಿನಲ್ಲಿ ಪ್ರತಿಭಾವಂತ ನಿರ್ದೇಶಕಿ ಜೂಲಿಯಾ ಮೊದಲ ಚಿತ್ರ ಸಾಕಷ್ಟು ನಿರೀಕ್ಷೆ, ಗೊಂದಲಗಳನ್ನು ಸೃಷ್ಟಿಸಿ ಕುತೂಹಲ ಮೂಡಿಸಿದೆ.


Click it and Unblock the Notifications











