For Quick Alerts
  ALLOW NOTIFICATIONS  
  For Daily Alerts

  ಗೌತಮ್ ಮೆನನ್ ಚಿತ್ರಕ್ಕೆ ಶಾರುಖ್, ಸಲ್ಮಾನ್?

  |

  ದಕ್ಷಿಣ ಭಾರತದ ಯಶಸ್ವಿ ನಿರ್ದೇಶಕ ಗೌತಮ್ ಮೆನನ್, ಇದೀಗ ಬಾಲಿವುಡ್ ನಲ್ಲಿ ಮಿಂಚಲು ಪ್ರಾರಂಭಿಸಿದ್ದಾರೆ. 'ವಿನ್ನೈತ್ತಾಂಡಿ ವರುವಾಯ' ತಮಿಳು ಚಿತ್ರವನ್ನು ಹಿಂದಿಯಲ್ಲಿ ನಿರ್ಮಿಸುತ್ತಿರುವ ಗೌತಮ್, ಇದಕ್ಕೆ 'ಏಕ್ ದೀವಾನಾ ಥಾ' ಎಂದು ಹೆಸರಿಟ್ಟಿದ್ದಾರೆ. 'ರೆಹನಾ ಹೈ ತೇರೆ ದಿಲ್ ಮೆ' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ಗೌತಮ್ ಈಗ ಅಲ್ಲಿಯೂ ಒಂದು ಹೆಜ್ಜೆ ಇಟ್ಟೇ ಇರುತ್ತಾರೆ.

  ವೇಟೆಯಾಡು ವಿಳೆಯಾದು ತಮಿಳು ಚಿತ್ರವನ್ನು ಇದೀಗ ಹಿಂದಿಗೆ ರೀಮೇಕ್ ಮಾಡಲು ಯೋಚಿಸಿರುವ ಗೌತಮ್ ಮೆನನ್, ಚಿತ್ರದ ನಾಯಕತ್ವಕ್ಕೆ ಬಾಲಿವುಡ್ ಟಾಪ್ ಸ್ಟಾರ್ ಗಳೇ ಬೇಕು ಎಂದಿದ್ದಾರೆ. ಅವರ ಲಿಸ್ಟ್ ನಲ್ಲಿ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಇದ್ದಾರೆ. ಮೂಲ ಚಿತ್ರದಲ್ಲಿ ಕಮಲಹಾಸನ್ ಮಾಡಿರುವ ಪಾತ್ರಕ್ಕೆ ಶಾರುಖ್ ಹೆಚ್ಚು ಸೂಕ್ತ ಎಂದಿದ್ದಾರೆ. ಶಾರುಖ್ ಸಿಗದಿದ್ದರೆ ಎರಡನೇ ಆಯ್ಕೆ ಸಲ್ಮಾಮ್ ಖಾನ್.

  ಏಕ್ ದೀವಾನಾ ಥಾ ಜೊತೆಗೆ 'ನೀಥಾನೆ ಎನ್ ಪೊನ್ ವಸಂತಂ' ತಮಿಳು ಚಿತ್ರವನ್ನು ಮೂರು ಭಾಷೆಗಳಲ್ಲಿ ನಿರ್ಮಿಸುತ್ತಿರುವ ಗೌತಮ್, ಇದಾದ ನಂತರ ವಿಜಯ್ ಚಿತ್ರ ಅಧ್ಯಾಯಂ ಒಂದ್ರು ಚಿತ್ರವನ್ನು ರೀಮೇಕ್ ಮಾಡಲಿದ್ದಾರೆ. ನಂತರ ಬಹುಶಃ 'ವೇಟೆಯಾಡು ವಿಳೆಯಾದು' ಚಿತ್ರವನ್ನು ಶಾರುಖ್ ಅಥವಾ ಸಲ್ಮಾನ್ ನಾಯಕತ್ವದಲ್ಲಿ ತೆರೆಗೆ ತರಲಿದ್ದಾರೆ. ಒಟ್ಟಿನಲ್ಲಿ ಖಾನ್ ದರ್ಬಾರ್ ಬಾಲಿವುಡ್ ನಲ್ಲಿ ಸದಯಕ್ಕಂತೂ ಮುಂದುವರಿಯಲಿದೆ. (ಏಜೆನ್ಸೀಸ್)

  English summary
  Gautham Menon, who is busy with the Hindi version of Vinnaithaandi Varuvaayaa titled Ek Deewana Tha, is planning to remake Vettaiyaadu Vilaiyaadu in Hindi and Shahrukh Khan and Salman Khan are in his wish list.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X