ಅರುವತ್ತರಲ್ಲಿ ಜಾಕ್ಸನ್ ತಂದೆತಾಯಿ ವಿವಾಹ ವಿಚ್ಛೇದನ
ಸುದೀರ್ಘ ಅರುವತ್ತು ವರ್ಷಗಳ ಕಾಲ ಸಂಸಾರ ನೌಕೆ ದೂಡಿದ ದಂಪತಿಗಳು ಕಡೆಗೆ ವಿವಾಹ ವಿಚ್ಛೇದನದಲ್ಲಿ ಬೇರ್ಪಟ್ಟಿದ್ದಾರೆ. ಅವರು ಬೇರಾರು ಅಲ್ಲ ಪಾಪ್ ದೊರೆ ದಿವಂಗತ ಮೈಕೇಲ್ ಜಾಕ್ಸನ್ ಅವರ ತಂದೆತಾಯಿ. ಕ್ಯಾಥರೀನ್ ಜಾಕ್ಸನ್ ಮತ್ತು ಜೋಸೆಫ್ ಜಾಕ್ಸನ್ ಷಷ್ಠಿ ಪೂರ್ತಿ ಮಾಡಿಕೊಳ್ಳಬೇಕಾದ ಜೋಡಿ ವಿವಾಹ ವಿಚ್ಛೇದನಲ್ಲಿ ದೂರಾಗಿದ್ದಾರೆ.
ನನ್ನ ಮಗನ ಸಾವಿಗೆ ನಾನೆ ಕಾರಣ ಎಂದು ತಮ್ಮ ಪತಿರಾಯ ಆರೋಪಿಸುತ್ತಿದ್ದಾರೆ. ಆದ ಕಾರಣ ಆತನ ಜೊತೆ ಬಾಳಲು ನನಗೆ ಇಷ್ಟವಿಲ್ಲ. ವಿವಾಹ ವಿಚ್ಛೇದನ ನೀಡಿ, ಆತನಿಂದ ನನಗೆ ಬಿಡುಗಡೆ ಭಾಗ್ಯ ಕಲ್ಪಿಸಿ ಎಂದು 80ರ ವಯೋವೃದ್ಧೆ ಕ್ಯಾಥರೀನ್ ಅರ್ಜಿ ಸಲ್ಲಿಸಿದ್ದರು.
ಕ್ಯಾಥರೀನ್ ಪತಿ ಜೋಸೆಫ್ ಜಾಕ್ಸನ್ ಅವರ ಆರೋಪ ಏನೆಂದರೆ, ಮಗನ ಜೊತೆ ಇರು ಎಂದು ಅಂಗಲಾಚಿ ಬೇಡಿಕೊಂಡಿದ್ದೆ. ಆದರೆ ಆಕೆ ಕಡೆಗೂ ಮಗನ ಜೊತೆ ಇರಲು ಒಪ್ಪಿಕೊಳ್ಳಲಿಲ್ಲ. ಅಮ್ಮನೊಂದಿಗೆ ಜಾಕ್ಸನ್ ಇದ್ದಿದ್ದರೆ ಆಗನಿಗೆ ಇಷ್ಟು ಬೇಗ ಸಾವು ಬರುತ್ತಿರಲಿಲ್ಲ ಎಂದಿದ್ದರು.
ಪತಿರಾಯನ ಈ ಆರೋಪಕ್ಕೆ ಬೇಸತ್ತ್ತ ಕ್ಯಾಥರೀನ್ ಕಡೆಗೆ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಮುಕ್ತಿ ಪಡೆದಿದ್ದಾರೆ. ಜಾಕ್ಸನ್ ಅವರ ಮೂವರು ಮಕ್ಕಳಾದ ಪ್ರಿನ್ಸ್ ಮೈಕೇಲ್ (13), ಬ್ಲ್ಯಾಂಕೆಟ್ (8) ಹಾಗೂ ಪ್ಯಾರಿಸ್ (12) ಅಜ್ಜಿ ಕ್ಯಾಥರೀನ್ ಜೊತೆಗೆ ಇದ್ದಾರೆ. ಅಪ್ಪನ ಅನಿರೀಕ್ಷಿತ ಸಾವಿನ ನೋವಿನಿಂದ ಈ ಕಂದಮ್ಮಗಳು ಇನ್ನೂ ಹೊರಬಂದಿಲ್ಲ. ಅರುವತ್ತು ವರ್ಷಗಳ ಕೂಡಿ ಬಾಳಿದ ಜೋಡಿಗೆ ಹೀಗಾಗಬಾರದಿತ್ತು.


Click it and Unblock the Notifications











