ಆಸ್ಕರ್ ವಿಜೇತ ಟಾಮ್ ಗೆ ಬಿಗ್ ಬಿ ಜೊತೆ ನಟಿಸುವಾಸೆ

By Mahesh

ಹಾಲಿವುಡ್ ನ ಪ್ರಬುದ್ಧ ನಟ ಟಾಮ್ ಹಾಂಕ್ಸ್ ಗೆ ಬಾಲಿವುಡ್ ನ ಚಿರಯುವಕ ಬಿಗ್ ಬಿ ಜೊತೆ ನಟಿಸುವ ಆಸೆಯಂತೆ. ಇತ್ತೀಚಿನ ಟಿವಿ ಸಂದರ್ಶನವೊಂದರಲ್ಲಿ ತಮ್ಮ ಈ ಆಸೆಯನ್ನು ಎರಡು ಬಾರಿ ಆಸ್ಕರ್ ಪ್ರಶಸ್ತಿ ಗಳಿಸಿರುವ ಟಾಮ್ ಹಾಂಕ್ಸ್ ಹೊರಗೆಡವಿದ್ದಾರೆ. ಅಮಿತಾಬ್ ಬಚ್ಚನ್ ಅಲ್ಲದೆ ಅಭಿಷೇಕ್ ಬಚ್ಚನ್ ಜೊತೆ ಕೂಡಾ ನಟಿಸುವುದನ್ನು ಎದುರುನೋಡುತ್ತಿದ್ದೇನೆ ಎಂದಿದ್ದಾರೆ.

ಬಾಲಿವುಡ್ ನಟರಂತೆ ಮರದ ಹಿಂದೆ ಸುತ್ತುತ್ತಾ ಹಾಡು ಹೇಳಿಕೊಂಡು ಕುಣಿಯುವ ದೃಶ್ಯದಲ್ಲಿ ನನ್ನನ್ನು ಯಾರು ನೋಡಲು ಬಯಸುವುದಿಲ್ಲ. ಹಾಗೆ ಒಂದು ವೇಳೆ ನಟಿಸಿದರೂ ಅದು ಹಾರರ್ ಚಿತ್ರವಾಗುತ್ತದೆ ಎಂದು ಅಮೆರಿಕದ ಈ ಪ್ರತಿಭಾವಂತ ನಟ ಹೇಳುತ್ತಾರೆ.

ಬಿಗ್ ಬಿ ಹಾಗೂ ಸ್ಮಾಲ್ ಬಿ ಅವರ ಚಿತ್ರಗಳನ್ನು ನೋಡಿದ್ದೇನೆ. ಅವಕಾಶ ಸಿಕ್ಕರೆ ಇಬ್ಬರ ಜೊತೆ ನಟಿಸಲು ಸಿದ್ಧ ಎಂದು ಟಾಮ್ ಹೇಳಿದ್ದಾರೆ. ಸದ್ಯಕ್ಕೆ 3D ಚಿತ್ರವನ್ನು ನಿರ್ಮಿಸುತ್ತಿರುವ ಟಾಮ್ ಬಾಲಿವುಡ್ ಪ್ರವೇಶದ ಬಗ್ಗೆ ಕೇಳಿ ಬೆಚ್ಚಿ ಬಿದ್ದ ಬಾಲಿವುಡ್ ಮಂದಿ, ಬುಡ್ಡ ಹೋಗಾ ತೇರ ಬಾಪ್ ಚಿತ್ರ ಪಾರ್ಟ್ 2 ಮಾಡಿದ್ರೆ ಮೂವರ ಜೋಡಿ ಚೆನ್ನಾಗಿರುತ್ತದೆ ಎಂದು ನಗಾಡಿದ್ದಾರೆ.

ಕ್ಯಾಸ್ಟ್ ಅವೇ, ದ ಟರ್ಮಿನಲ್, ಫಿಲಿಡೆಲ್ಫಿಯಾ, ಫಾರೆಸ್ಟ್ ಗಂಪ್, ಬಿಗ್, ಅಪೊಲೊ 13 ಮುಂತಾದ ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿರುವ ಟಾಮ್ ಹಾಂಕ್ಸ್, ನಟ, ಸಾಹಿತಿ, ನಿರ್ಮಾಪಕನಾಗಿ ಕೂಡಾ ಯಶಸ್ವಿಯಾಗಿದ್ದಾರೆ. ಹಲವಾರು ಟಿವಿ ಸರಣಿಗಳಲ್ಲೂ ಪಾಲ್ಗೊಂಡಿದ್ದಾರೆ. ಹಾಲಿವುಡ್ ನ 54 ವರ್ಷದ ಈ ಪ್ರತಿಭಾವಂತ ನಟ ಬಾಲಿವುಡ್ ನಲ್ಲೂ ಮಿಂಚಲಿ ಎಂಬುದು ಅವರ ಅಭಿಮಾನಿಗಳ ಹಾರೈಕೆ

More from Filmibeat

English summary
Hollywood's perfect actor Tom Hanks,wants to work with Big B Amitabh Bachchan. Oscar winning actorTom said this in recent TV interview.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X