ನಟಿ ಕಾಲುಗಳಿಗೆ 2 ದಶಲಕ್ಷ ಡಾಲರ್ ಜೀವವಿಮೆ!

By Rajendra

ಈಕೆಯ ಕಾಲುಗಳೇ ಇಷ್ಟುಬೆಲೆಬಾಳುತ್ತವೆ ಎಂದರೆ ಇನ್ನು ಈಕೆಯ ದೇಹದ ಸರ್ವಾಂಗಗಳು ಇನ್ನೆಷ್ಟು ಬೆಲೆಬಾಳಬಹುದು!? ಅದಕ್ಕೆ ಅಲ್ಲವೆ ವಚನಕಾರರು ಹೇಳಿದ್ದು, ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವೆಂದು. ಇದನ್ನು ಜರ್ಮನ್‌ನ ಸೂಪರ್ ಮಾಡೆಲ್ ಹೈಡಿ ಕ್ಲುಮ್ ಚೆನ್ನಾಗಿ ಅರ್ಥ ಮಾಡಿಕೊಂಡಿರುವಂತಿದೆ.

ಇತ್ತೀಚೆಗೆ ಈಕೆ ತನ್ನ ಕಾಲುಗಳಿಗೆ 2 ದಶಲಕ್ಷ ಡಾಲರ್ ಜೀವವಿಮೆ ಮಾಡಿಸಿದ್ದಾರೆ. ಆಕೆಯ ಕಾಲುಗಳನ್ನು ಇಂಚಿಂಚಾಗಿ ಪರೀಕ್ಷಿಸಿರುವ ಜೀವವಿಮಾ ಕಂಪನಿ ಎಲ್ಲಾ ಸರಿಯಾಗಿದೆ ಎಂದು ವಿಮಾ ರಕ್ಷಣೆಯನ್ನು ಕೊಟ್ಟಿದೆ.

ಆಕೆಗೇನು ತನ್ನ ಕಾಲುಗಳಿಗೆ ಇನ್ಸುರೆನ್ಸ್ ಮಾಡಿಸಬೇಕು ಎಂಬ ಜರೂರತ್ತೇನು ಇರಲಿಲ್ಲವಂತೆ. ಆದರೆ ಆಕೆಯ ಆಪ್ತರೊಬ್ಬರು ಈ ಘನಂದಾರಿ ಕೆಲಸ ಮಾಡಿಸಿದ್ದಾಗಿ ಹೈಡಿ ಹೇಳಿದ್ದಾರೆ. ಲಂಡನ್‌ನಲ್ಲಿ ಈಕೆಯ ಕಾಲುಗಳನ್ನು ಪರೀಕ್ಷಿಸಿದ ವೈದ್ಯರು ಎಡಗಾಲಿನ ಮೇಲೆ ಗಾಯದ ಗುರುತಿದೆ. ಅದು ಆಕೆ ಗಾಜಿನ ಮೇಲೆ ಬಿದ್ದಾಗ ಆಗಿದ್ದಂತೆ. ಇನ್ನು ಬಲಗಾಲಿನ ಮೇಲೆ ಯಾವುದೇ ಕಲೆಯಿಲ್ಲವಂತೆ. (ಏಜೆನ್ಸೀಸ್)

More from Filmibeat

English summary
Heidi Klum, is a German model, actress, television host, businesswoman, fashion designer, television producer, and occasional singer has had her legs insured for $2 million. The former Victoria’s Secret model had to have her legs examined before a price could be placed on them, reports contactmusic.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X