ಬಾಯ್ ಫ್ರೆಂಡ್ ಜೊತೆ ಬ್ರಿಟ್ನಿ ಸ್ಪಿಯರ್ಸ್ ನಿಶ್ಚಿತಾರ್ಥ

ತನ್ನ ಮದುವೆ ಬಗ್ಗೆ ಟ್ವಿಟ್ಟರ್‌ನಲ್ಲೂ ಬ್ರಿಟ್ನಿ ತುತ್ತೂರಿ ಊದಿದ್ದಾರೆ. "ಕಳೆದ ರಾತ್ರಿ ಟ್ರಾವಿಕ್ ನನಗೆ ಗಿಫ್ಟ್ ಒಂದನ್ನು ಕೊಟ್ಟು ಹೋಗಿದ್ದಾನೆ. ನಾನು ಅದನ್ನು ನಿಮಗೆ ತೋರಿಸಲ್ಲಪ್ಪ...SO SO SO excited!!!!" ಎಂದಿದ್ದಾರೆ. ಇದನ್ನು ಯಥಾವತ್ತಾಗಿ ಟೆಲಿಗ್ರಾಫ್ ಪತ್ರಿಕೆ ಕೂಡ ವರದಿ ಮಾಡಿದೆ.
ಹೊಸ ಬಾಯ್‌ಫ್ರೆಂಡ್ ಬರುವುದಕ್ಕೂ ಮುನ್ನ ಬ್ರಿಟ್ನಿ ಎರಡು ಬರಿ ಮದುವೆಯಾಗಿದ್ದಾರೆ. ಕೆವಿನ್ ಫೆಡರಲಿನ್‌ರನ್ನು ಮದುವೆಯಾದ ಬಳಿಕ ಇಬ್ಬರು ಗಂಡು ಮಕ್ಕಳ ತಾಯಿಯಗಿದರು ಬ್ರಿಟ್ನಿ. ಈತನಿಗೆ 2006ರಲ್ಲಿ ಡೈವೋರ್ಸ್ ಮಾಡಿದ್ದಳು. ಇದಕ್ಕೂ ಮುನ್ನ 2004ರಲ್ಲಿ ಜಾಸನ್ ಅಲೆಕ್ಸಾಂಡರ್ ಎಂಬುವವರನ್ನು ಬ್ರಿಟ್ನಿ ವರಿಸಿದ್ದರು. ಈಗ ಮೂರನೇ ಮದುವೆಗೆ ಸಿದ್ಧತೆಗಳು ನಡೆಯುತ್ತಿವೆ. (ಏಜೆನ್ಸೀಸ್)
More from Filmibeat
English summary
Britney Spears is ready to walk down the aisle for the third time as the pop star has agreed to marry her longtime boyfriend and former agent Jason Trawick.


Click it and Unblock the Notifications











