»   » ಗಾಯಕ ಮೈಕಲ್ ಜಾಕ್ಸನ್ ಇಸ್ಲಾಂ ಧರ್ಮಕ್ಕೆ

ಗಾಯಕ ಮೈಕಲ್ ಜಾಕ್ಸನ್ ಇಸ್ಲಾಂ ಧರ್ಮಕ್ಕೆ

Subscribe to Filmibeat Kannada

ಲಂಡನ್, ನ. 21 : ಖ್ಯಾತ ಪಾಪ್ ತಾರೆ ಅಮೆರಿಕದ ಮೈಕಲ್ ಜಾಕ್ಸನ್ (Michael Jackson) ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಇದೀಗ ಅವರು ಹೆಸರನ್ನು ಮೈಕೀಲ್ (Mikaeel) ಎಂದು ಬದಲಿಸಿಕೊಂಡಿದ್ದಾರೆ. 50ರ ಹರೆಯ ಸೊಗಸಾದ ಕಂಠದ ಅದ್ಭುತ ಹಾಡುಗಾರ ಜಾಕ್ಸನ್ ಕಳೆದ ಕೆಲ ದಿನಗಳ ಹಿಂದೆ ಲಾಸ್ ಎಂಜಲಿಸ್ ನಲ್ಲಿ ಸ್ನೇಹಿತರ ಸಮ್ಮುಖದಲ್ಲಿ ವಿದ್ಯುಕ್ತವಾಗಿ ಮುಸ್ಲಿಂ ಧರ್ಮಕ್ಕೆ ಸೇರ್ಪಡೆಯಾಗಿದ್ದಾರೆ ಎಂದು 'ಸನ್' ಪತ್ರಿಕೆ ವರದಿ ಮಾಡಿದೆ.

ಮೈಕಲ್ ಜಾಕ್ಸನ್ ಅಲಿಯಾಸ್ ಮೈಕೀಲ್ ಮತಾಂತರದ ದಿನದಂದು ಬಿಳಿ ಕುರ್ತಾ, ತೆಲೆಗೆ ಟೋಪಿ ಧರಿಸಿ ಮುಸ್ಲಿಂ ಮೌಲ್ವಿಯ ಮೂಲಕ 'ಕುರಾನ್' ಪಠಿಸಿ ಅಧಿಕೃತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ. ಇಸ್ಲಾಂ ಧರ್ಮಕ್ಕೆ ಸೇರುವ ವಿಷಯವನ್ನು ಆಪ್ತ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದ ಜಾಕ್ಸನ್, ಎಲ್ಲರಿಂದಲೂ ಸಹಮತ ವ್ಯಕ್ತವಾಯಿತು ಎನ್ನಲಾಗಿದೆ. ಇಸ್ಲಾಂ ಧರ್ಮಕ್ಕೆ ಸೇರಿದ ನಂತರ ಮುಂದಿನ ಜೀವನ ಹೇಗಿರಬಹುದು ಎಂಬುವುದನ್ನ ಕೂಡಾ ಕೂಲಂಕಷವಾಗಿ ಚರ್ಚೆ ನಡೆಸಿಯೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಪತ್ರಿಕೆ ಹೇಳಿದೆ.

ಮೈಕೀಲ್ ಎಂದರೆ ಇಸ್ಲಾಂ ಧರ್ಮದ ಶ್ರೇಷ್ಠ ಗುರು ಅಲ್ಲಾನ ಇನ್ನೊಂದು ಹೆಸರಂತೆ. ಇದಕ್ಕೂ ಮೊದಲು ಮೌಲ್ವಿಗಳು ಜಾಕ್ಸನ್ ಗೆ 'ಮುಸ್ತಫಾ' ಎಂದು ನಾಮಕರಣ ಮಾಡಲು ನಿರ್ಧರಿಸಿದ್ದರಂತೆ, ಆದರೆ ಜಾಕ್ಸನ್ 'ಮುಸ್ತಫಾ' ಎಂದು ಹೆಸರಿಟ್ಟುಕೊಳ್ಳಲು ನಿರಾಕರಿಸಿದ್ದಾರೆ. ನಂತರ ಮೈಕೀಲ್ ಎಂದು ಹೆಸರಿಡಲಾಯಿತು ಎಂದು ಪತ್ರಿಕೆಯು ವಿವರಿಸಿದೆ. ಒಟ್ಟಿನಲ್ಲಿ ತನ್ನ ಪಾಪ್ ಹಾಡಿನಿಂದ ಮೋಡಿ ಮಾಡಿದ್ದ ಅದ್ಭುತ ಕಂಠದ ಗಾಯಕ ಈಗ ಮುಸ್ಲಿಂ ಧರ್ಮಕ್ಕೆ ಸೇರ್ಪಡೆಯಾಗುವ ಮೂಲಕ ಇನ್ನೊಂದು ರೀತಿಯಲ್ಲಿ ಹೆಸರು ಮಾಡುತ್ತಿರುವುದು ಜಗತ್ತಿನಾದ್ಯಂತ ಇರುವ ಅವರ ಕೆಲ ಅಭಿಮಾನಿಗಳಿಗೆ ಆಶ್ಚರ್ಯ ತರಿಸಿದರೆ, ಇನ್ನೂ ಕೆಲವರಿಗೆ ಸಂತಸ ಮೂಡಿಸಿದೆ. ಮೈಕಲ್ ಜಾಕ್ಸನ್ ಅಲಿಯಾಸ್ ಮೈಕೀಲ್ ಏನು ಮಾಡಿದರೂ ಅದೂ ಜಾಗತಿಕ ಸುದ್ದಿಯೇ. ಅಮೆರಿಕದ ಅಧ್ಯಕ್ಷ ನೂತನ ಅಧ್ಯಕ್ಷ ಬರಾಕ್ ಒಬಾಮಾ ಅವರ ಪ್ರಭಾವವಿರಬಹುದೇ?

(ಏಜೆನ್ಸೀಸ್)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada