Don't Miss!
- News ಲೋಕಸಭಾ ಚುನಾವಣೆ: ಮೈಸೂರು ಜಿಲ್ಲೆಯಲ್ಲಿ ಭದ್ರತೆಗೆ 5 ಸಾವಿರ ಪೊಲೀಸರ ನಿಯೋಜನೆ
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆರಳ ತುದಿಯಲ್ಲಿ ಹೊಸ ಪ್ಲೇಬಾಯ್ ಲಭ್ಯ!
ಅಮೆರಿಕದ ಜನಪ್ರಿಯ ನಿಯತಕಾಲಿಕೆ ಪ್ಲೇಬಾಯ್ ಇನ್ನು ಮುಂದೆ ಅಂತರ್ಜಾಲದಲ್ಲಿ ಹೊಸದಾಗಿ ದರ್ಶನ ನೀಡಲಿದೆ. ಇನ್ನು ಮುಂದೆ ಪ್ಲೇಬಾಯ್ ಪತ್ರಿಕೆಯನ್ನ್ನು ಅಂತರ್ಜಾಲದಲ್ಲಿ ಕದ್ದು ಮುಚ್ಚಿ ಓದುವ ಅಗತ್ಯವಿಲ್ಲ. ತನ್ನ ಹೊಸ ಅಂತರ್ಜಾಲ ತಾಣವನ್ನು ಯಾವುದೇ ಅಶ್ಲೀಲ ಚಿತ್ರಗಳಿಲ್ಲದಂತೆ ಪ್ಲೇಬಾಯ್ ರೂಪಿಸಿದೆ. ಒಮ್ಮೆ ಕ್ಲಿಕ್ಕಿಸಿ ನೋಡಿ.
ಇಂಟರ್ನೆಟ್ ಸಂಪರ್ಕ ಇರುವವರು ಕಚೇರಿಯಲ್ಲೇ ಕುಳಿತು ಇನ್ನು ಮುಂದೆ ಯಾವುದೇ ಬಿಗುಮಾನವಿಲ್ಲದೆ ಪ್ಲೇಬಾಯ್ ಓದಬಹುದು. ಹೊಸ ಅಂತರ್ಜಾಲ ತಾಣದಲ್ಲಿ ಜೋಕ್ ಗಳು, ವಿಡಿಯೋಗಳೊಂದಿಗೆ ಮನರಂಜನೆಗೆ ಒತ್ತು ಕೊಡಲಾಗಿದೆ. ಒಟ್ಟಿನಲ್ಲಿ ಯುವ ಸಮುದಾಯವನ್ನು ಆಕರ್ಷಿಸಲು ಈ ಅಂತರ್ಜಾಲ ತಾಣವನ್ನು ರೂಪಿಸಲಾಗಿದೆ ಎನ್ನುತ್ತದೆ ಪ್ಲೇಬಾಯ್.
ತನ್ನ ಬಹುಸಂಖ್ಯಾತ ಓದುಗರಾದ 25 ರಿಂದ 34ರ ವಯೋಮಾನದವರಿಗಾಗಿ ಈ ವೆಬ್ ಸೈಟನ್ನು ರೂಪಿಸಲಾಗಿದ್ದು ಹಾಸ್ಯಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಲೈಂಗಿಕ ಸುದ್ದಿಗಳು, ಲೇಖನಗಳು, ಹಾಟ್ ವಿಡಿಯೋಗಳು, ಜೀವನ ಶೈಲಿ, ಕಾಮಿಡಿ ವಿಡಿಯೋಗಳು, ಗಾಸಿಪ್ ಸುದ್ದಿಗಳು...ಹೀಗೆ ವೈವಿಧ್ಯಮಯ ಮನರಂಜನೆ ಹೊಸ ಅಂತರ್ಜಾಲ ತಾಣದಲ್ಲಿ ಲಭ್ಯವಾಗಲಿದೆ.
ನಮ್ಮ ಬಹಳಷ್ಟು ಓದುಗರು ಕಚೇರಿಯಲ್ಲಿ ಹಳೆ ಪ್ಲೇಬಾಯ್ ವೆಬ್ ಸೈಟನ್ನು ನೋಡಲು ಸಾಧ್ಯವಾಗುತ್ತಿರುವಲಿಲ್ಲ. ಪ್ಲೇಬಾಯ್ ಗೆ ಭೇಟಿ ಕೊಡುವ ಸುವರ್ಣಾವಕಾಶದಿಂದ ನಮ್ಮ ಓದುಗರು ವಂಚಿತರಾಗುತ್ತಿದ್ದರು. ಹಾಗಾಗಿ ಈ ಹೊಸ ವೆಬ್ ಸೈಟನ್ನು ಆರಂಭಿಸಿದ್ದೇವೆ ಎನ್ನುತ್ತಾರೆ ಪ್ಲೇಬಾಯ್ ಪತ್ರಿಕೆಯ ಜಿಮ್ಮಿ ಜೆಲ್ಲಿನೆಕ್.
ಈ ಹೊಸ ಅಂತರ್ಜಾಲ ತಾಣದಲ್ಲಿ ಪ್ಲೇಬಾಯ್ ಪತ್ರಿಕೆಯ ಹಳೆಯ ಸಂಚಿಕೆಗಳನ್ನು ಕ್ಲಿಕ್ಕಿಸಬಹುದು. ಈಜುಡುಗೆ ಸುಂದರಿಯರು, ತಮಾಷೆಯ ಛಾಯಾಚಿತ್ರಗಳನ್ನು ನೋಡಬಹುದು. ದೂರದರ್ಶನದ ಜನಪ್ರಿಯ ಕಾರ್ಯಕ್ರಮಗಳು, ಜನಪ್ರಿಯ ವೆಬ್ ಸೈಟ್ ಗಳ ಕೊಂಡಿಗಳು, ವಿಡಿಯೋಗಳನ್ನು ಸವಿಯಬಹುದು.