For Quick Alerts
  ALLOW NOTIFICATIONS  
  For Daily Alerts

  ಜೆನ್ನಿ, ಸೆಕ್ಸ್ ಟೇಪ್ ನಿಜ ಅಲ್ಲ ಅಂದ್ರೆ ಯಾರೂ ನಂಬೋಲ್ಲ

  By Mahesh
  |

  ಗಾಯಕಿ ನಟಿ ಜೆನ್ನಿಫರ್ ಲೋಪೆಜ್ ನ ಮೊದಲ ಪತಿ ಜಾನಿ ನೊಯಾಯ ಕೃತ್ಯಕ್ಕೆ ಬೆಚ್ಚಿ ಬಿದ್ದಿದ್ದಾಳೆ. ಅಂಥದ್ದು ಏನು ಮಾಡಿದೆ ಆತ?. ಜೆನ್ನಿ ಜೊತೆಗಿನ ಬೆಡ್ ರೂಮ್ ಸೀನ್ ಗಳನ್ನು ಖಾಸಗಿ ವಿಡಿಯೋ ಮಾಡಿ ಮಾರಾಟ ಮಾಡುತ್ತಿದ್ದಾನಂತೆ. ಅಯ್ಯೋ ಅದರಲ್ಲಿ ಇರೋದೆಲ್ಲಾ ಸತ್ಯ ಅಲ್ಲ ಅದು ಸೆಕ್ಸ್ ಟೇಪ್ ಅಂತೂ ಅಲ್ಲವೇ ಅಲ್ಲ ಎಂದು ಜೆನ್ನಿ ಗೋಳಾಡುತ್ತಿದ್ದಾಳೆ.

  41 ವರ್ಷದ ಜೆನ್ನಿಫರ್, ಮೊದಲ ಪತಿಯಿಂದ ಬೇರ್ಪಟ್ಟಿದ್ದು 1998ರಲ್ಲಿ. ಮೊದಲ ಪತಿ ಜೊತೆಗೆ ಅಂಥಾ ಉತ್ತಮ ಸಂಬಂಧ ಏನೂ ಹೊಂದಿರಲಿಲ್ಲ. ಈಗ ಆತ ಹೊರ ತರುತ್ತಿರುವ 27 ಗಂಟೆಗಳ ವಿಡಿಯೋ ದೃಶ್ಯಗಳಲ್ಲಿ ಸೆಕ್ಸ್ ಅನ್ನೋದು ಇಲ್ಲವೇ ಇಲ್ಲ. ಪರ್ಸನಲ್ ವಿಷ್ಯನಾ ಈ ರೀತಿ ಪಬ್ಲಿಕ್ ಮಾಡ್ತಾ ಇರೋದು ಶಾಕ್ ಆಗಿದೆ ಎಂದು ಜೆನ್ನಿ ಹೇಳಿದ್ದಾಳೆ.

  ಜೆನ್ನಿ ಹಾಗೂ ನೊಯಾ ಖಾಸಗಿ ಕ್ಷಣಗಳ ವಿಡಿಯೋ ಕಳುವಾಗಿದೆಯಂತೆ. ನೊಯಾನ ಗೆಳತಿ ಕ್ಲಾಡಿಯಾ ಹೇಳುವಂತೆ ನೊಯಾ ಮ್ಯಾನೇಜರ್ ಮೇಯರ್ ಇದನ್ನು ಕದ್ದಿರುವ ಸಾಧ್ಯತೆಯಿದೆ. ಸದ್ಯ ಈ ವಿಡಿಯೋ ಟೇಪ್ ಗಳು ಜೆನ್ನಿಫರ್ ಲಾಯರ್ ವಶದಲ್ಲಿ ಭದ್ರವಾಗಿದೆ. ಆದರೆ, ಜೆನ್ನಿ ಕೈ ಸೇರುವ ಮೊದಲು ಎಷ್ಟು ಭಾಗ ಲೀಕ್ ಆಗಿದೆ ಇನ್ನೂ ಗೊತ್ತಾಗಿಲ್ಲ.

  English summary
  Jennifer Lopez has said that the personal video her first husband Ojani Noa is trying to sell does not have any intimate scenes. The 41-year-old singer, who split from Noa in 1998. Noa's manager Meyer handed over video tapes to Lopez's attorney Jay Lavley.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X