ವಜ್ರ, ಪುಷ್ಯರಾಗ, ಇಂದ್ರನೀಲಮಣಿ ಖಚಿತ ಬ್ರಾ ಇದು

By Rajendra

ಇದು ಅಂತಿಂಥ ಸ್ತನಬಂಧಿ (ಬ್ರಾ )ಅಲ್ಲ. ಪಡ್ಡೆ ಹುಡುಗರ ಮಾತು ಬಿಡಿ ವಯಸ್ಸಾದವರ ಕಣ್ಣನ್ನು ಅರಳಿಸುವ ಬ್ರಾ ಇದು. ಬೆಲೆ ಎರಡು ದಶಲಕ್ಷ ಡಾಲರ್. ಈ ಬ್ರಾನಲ್ಲಿ ಏನಿದೆ ಅಂತಹ ವಿಶೇಷ ಅಂತೀರಾ? ಶ್ವೇತ ವಜ್ರಗಳನ್ನು ಬಳಸಿ ಈ ಬ್ರಾ ತಯಾರಿಸಲಾಗಿದೆ.

ಬ್ರೆಜಿಲ್ ರೂಪದರ್ಶಿ ಅಡ್ರಿಯಾನಾ ಲೀಮಾ ಈ ಬ್ರಾ ತೊಟ್ಟು ತಮ್ಮ ಬಾಹ್ಯ ಸೌಂದರ್ಯವನ್ನು ಇತ್ತೀಚೆಗೆ ಪ್ರದರ್ಶಿಸಿದರು. ನ್ಯೂಯಾರ್ಕ್‌ನಲ್ಲಿ ಈ ವಜ್ರಖಚಿತ ಬ್ರಾ ಅನಾವರಣಗೊಂಡಿತು. ಬ್ರಾ ಜೊತೆಗೆ 29ರ ಹರೆಯದ ಲಿಮಾ ಅವರ ಸೌಂದರ್ಯವೂ ಅನಾವರಣಗೊಂಡಿತು.

ಇಟಲಿಯ ಆಭರಣ ವಿನ್ಯಾಸಕ ಡಮಿಯಾನಿ ಈ ಬ್ರಾ ವಿನ್ಯಾಸಕ. 3,000 ಆಭರಣಗಳನ್ನು ಒಳಗೊಂಡಿದ್ದು ಆರು ಮಂದಿ ನುರಿತ ಅಕ್ಕಸಾಲಿಗರು 1,500 ಗಂಟೆಗಳ ಕಾಲ ಶ್ರಮಿಸಿ ವಿನ್ಯಾಸಗೊಳಿರುವುದು ಇದರ ವಿಶೇಷ. ಈ ಬ್ರಾ ತೊಟ್ಟ ಲೀಮಾ ನಸುಗೆಂಪು ರತ್ನಗಂಬಳಿ ಮೇಲೆ ಬೆಕ್ಕಿನ ಹೆಜ್ಜೆ ಹಾಕುತ್ತಿದ್ದ ರೋಮಾಂಚಕ ದೃಶ್ಯಗಳನ್ನು ಕ್ಯಾಮೆರಾ ಕಣ್ಣುಗಳು ಬಂಧಿಸಿದವು.

Movies stills | Wallpapers | Hot N Spicy | Videos

142 ಕ್ಯಾರೆಟ್ ಶ್ವೇತ ವಜ್ರಗಳು ಸೇರಿದಂತೆ ಪುಷ್ಯರಾಗ ಮತ್ತು ಇಂದ್ರನೀಲಮಣಿಗಳನ್ನು ಈ ಬ್ರಾ ಒಳಗೊಂಡಿದೆ. ಪ್ರದರ್ಶನದ ಬಳಿಕ ಈ ಬ್ರಾವನ್ನು ಭದ್ರತಾ ಅಧಿಕಾರಿಗಳು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದರು. ಒಳ ಉಡುಪುಗಳ ಪ್ರದರ್ಶನದಲ್ಲಿ ಲೀಮಾ ಎರಡನೆ ಅತ್ಯಧಿಕ ಬೇಡಿಕೆಯುಳ್ಳ ರೂಪದರ್ಶಿ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X