ಶಿಲ್ಪಾಶೆಟ್ಟಿಗೆ ಮುತ್ತಿಕ್ಕಿದ್ದ ರಿಚರ್ಡ್ ಗೇರ್ ಹಿಂತಿರುಗಿದ್ದಾರೆ
ಸಾರ್ವಜನಿಕ ಸಭೆಯೊಂದರಲ್ಲಿ ಬಾಲಿವುಡ್ ನಟಿ ಶಿಲ್ಪಾಶೆಟ್ಟಿಯನ್ನು ಬರಸೆಳೆದು ಮುತ್ತಿಕ್ಕಿದ್ದ ಹಾಲಿವುಡ್ ನಟ ರಿಚರ್ಡ್ ಗೇರ್ ಪುನಃ ಹಿಂತಿರುಗಿದ್ದಾರೆ. ಅಂದರೆ ಈತ ಮತ್ತೆ ಮುತ್ತಿಕ್ಕಲು ಬಂದಿದ್ದಾರೆಯೇ ಎಂದು ಕೇಳಬೇಡಿ. ಈಗ ಶಿಲ್ಪಾಗೆ ಮುತ್ತುಕೊಡ್ತೀನಿ ಅಂದ್ರೆ ರಾಜ್ ಕುಂದ್ರಾ ಸುಮ್ಮನಿರುತ್ತಾರಾ. ಮುತ್ತುಗೆ ಸಂಬಂಧಿಸಿದ ವಿಷಯ ಇದಲ್ಲ ಬಿಡಿ.
ಹಿಂದಿ ಹಾಗೂ ಇಂಗ್ಲಿಷ್ ದ್ವಿಭಾಷಾ ಚಿತ್ರ 'ಲಾಲಾ'ದಲ್ಲಿ ರಿಚರ್ಡ್ ಗೇರ್ ಅಭಿನಯಿಸಲಿದ್ದಾರೆ ಎಂಬುದು ಸುದ್ದಿ. ಇದೊಂದು ಇಂಡೋ ಇಟಾಲಿಯನ್ ಪ್ರಾಜೆಕ್ಟ್. ಈ ಹಿಂದೆ 'ಯಾತ್ರಾ' ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಬಂಗಾಳಿ ನಿರ್ದೇಶಕ ಗೌತಮ್ ಘೋಷ್ ಅವರು ಆಕ್ಷನ್, ಕಟ್ ಹೇಳುತ್ತಿರುವ ಚಿತ್ರ.
ನರ್ಮದಾ ಬಚಾವೋ ಆಂದೋಲನವನ್ನು ಹಿನ್ನೆಲೆಯಾಗಿಟ್ಟುಕೊಂಡು 'ಲಾಲಾ' ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಈ ಚಿತ್ರದಲ್ಲಿ ಲೇಖಕನ ಪಾತ್ರವನ್ನು ರಿಚರ್ಡ್ ಗೇರ್ ಪೋಷಿಸಲಿದ್ದಾರೆ. ಮಧ್ಯಪ್ರದೇಶ, ಮುಂಬೈ ಮತ್ತು ಫ್ರಾನ್ಸ್ ಅಥಾವಾ ಇಟಲಿಯಲ್ಲಿ ಚಿತ್ರೀಕರಣ ನಡೆಯಲಿದೆ. ಈ ಚಿತ್ರದಲ್ಲಿ ಮೇಧಾ ಪಾಟ್ಕರ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.


Click it and Unblock the Notifications











