»   » ಆಸ್ಕರ್ 2009 ಪ್ರಶಸ್ತಿ ವಿಜೇತರ ಪೂರ್ಣ ಪಟ್ಟಿ

ಆಸ್ಕರ್ 2009 ಪ್ರಶಸ್ತಿ ವಿಜೇತರ ಪೂರ್ಣ ಪಟ್ಟಿ

Posted By: Staff
Subscribe to Filmibeat Kannada
Slumdog Millionaire team
ಭಾರತೀಯ ಚಲನಚಿತ್ರೋದ್ಯಮದಲ್ಲಿ ಮೊದಲ ಬಾರಿಗೆ ಆಸ್ಕರ್ ಪ್ರಶಸ್ತಿಗಳನ್ನು ದಾಖಲೆ ಪ್ರಮಾಣದಲ್ಲಿ ಪಡೆದ ಸ್ಲಂಡಾಗ್ ಮಿಲಿಯನೇರ್ ಚಿತ್ರತಂಡಕ್ಕೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ. ಇಡೀ ಸ್ಲಂಡಾಗ್ ಚಿತ್ರತಂಡ ನಮ್ಮ ದೇಶ ಹೆಮ್ಮೆ ಪಡುವಂತೆ ಗೆಲುವು ಸಾಧಿಸಿದೆ ಎಂದು ಅವರು ಶ್ಲಾಘಿಸಿದ್ದಾರೆ. ಅದರಲ್ಲೂ ಎರಡು ಆಸ್ಕರ್ ಪ್ರಶಸ್ತಿಗಳನ್ನು ಪಡೆದ ಸಂಗೀತ ಸಂಯೋಜಕ ಎ.ಆರ್.ರೆಹಮಾನ್ ರನ್ನು ವಿಶೇಷವಾಗಿ ಅಭಿನಂದಿಸಿದ್ದಾರೆ. ಸ್ಪೀಕರ್ ಸೋಮನಾಥ ಚಟರ್ಜಿ ಸಹ ಸ್ಲಂಡಾಗ್ ಚಿತ್ರದ ಆಸ್ಕರ್ ವಿಜೇತರಿಗೆ ಅಭಿನಂದನೆಗಳನು ತಿಳಿಸಿದ್ದಾರೆ. ಆಸ್ಕರ್ 2009ನೇ ಸಾಲಿನ ಪ್ರಶಸ್ತಿ ವಿಜೇತರ ಪೂರ್ಣ ಪಟ್ಟಿ.
 ಅತ್ಯುತ್ತಮ ಚಿತ್ರ  ಸ್ಲಂಡಾಗ್ ಮಿಲಿಯನೇರ್
 ಅತ್ಯುತ್ತಮ ನಿರ್ದೇಶಕ  ಡೇನಿ ಬಾಯ್ಲ್ (ಸ್ಲಂಡಾಗ್ ಮಿಲಿಯನೇರ್)
 ಅತ್ಯುತ್ತಮ ಸಂಗೀತ ಸಂಯೋಜನೆ  ಎ.ಆರ್.ರೆಹಮಾನ್(ಸ್ಲಂಡಾಗ್ ಮಿಲಿಯನೇರ್)
 ಅತ್ಯುತ್ತಮ ಸಂಗೀತ(ಹಾಡು)  ಜಯ ಹೋ...ಎ.ಆರ್.ರೆಹಮಾನ್(ಸ್ಲಂಡಾಗ್ ಮಿಲಿಯನೇರ್, ಸಾಹಿತ್ಯ ಗುಲ್ಜಾರ್)
 ಅತ್ಯ್ಯುತ್ತಮ ಚಿತ್ರಸಂಕಲನ  ಕ್ರಿಸ್ ಡಿಕೆನ್ಸ್ (ಸ್ಲಂಡಾಗ್ ಮಿಲಿಯನೇರ್)
 ಅತ್ಯುತ್ತಮ ಛಾಯಾಗ್ರಹಣ  ಆಂಟೋನಿ ಡಾಡ್ ಮಾಂಟಲ್(ಸ್ಲಂಡಾಗ್ ಮಿಲಿಯನೇರ್)
 ಅತ್ಯುತ್ತಮ ಚಿತ್ರಕಥೆ(Best Adopted Screenplay)  ಸೈಮನ್ ಬುಫೋಯ್ (ಸ್ಲಂಡಾಗ್ ಮಿಲಿಯನೇರ್)
 ಅತ್ಯುತ್ತಮ ಧ್ವನಿ ಮಿಶ್ರಣ(Best sound mixing)  ರಸೂಲ್ ಪುಕುಟ್ಟಿ (ಸ್ಲಂಡಾಗ್ ಮಿಲಿಯನೇರ್)
 ಅತ್ಯುತ್ತಮ ಕಿರು ಸಾಕ್ಷ್ಯ ಚಿತ್ರ  ಸ್ಮೈಲ್ ಪಿಂಕಿ
 ಅತ್ಯುತ್ತಮ ನಟ  ಸಿಯನ್ ಪೆನ್ (ಮಿಲ್ಕ್)
 ಅತ್ಯುತ್ತಮ ನಟಿ  ಕೇಟ್ ವಿನ್ಸ್ ಲೆಟ್ (ದ ರೀಡರ್)
 ಅತ್ಯುತ್ತಮ ಪೋಷಕ ನಟ  ಹೀತ್ ಲೆಡ್ಜರ್ (ದ ಡಾರ್ಕ್ ನೈಟ್)
 ಅತ್ಯುತ್ತಮ ಪೋಷಕ ನಟಿ  ಫೆನಲೊಜಾ ಕ್ರೂಜ್ (ಮಿಕ್ಕಿ ಕ್ರಿಸ್ಟಿನಾ ಬಾರ್ಸಿಲೋನಾ)
 ಅತ್ಯುತ್ತಮ ಸಾಕ್ಷ್ಯ ಚಿತ್ರ  ಟಾಯ್ ಲ್ಯಾಂಡ್
 ಅತ್ಯುತ್ತಮ ವಿದೇಶಿ ಚಿತ್ರ  ಡಿಪಾರ್ಚರ್ಸ್ (ಜಪಾನ್)
 ಅತ್ಯುತ್ತಮ ಪ್ರಸಾಧನ  ಗ್ರೆಗ್ ಕಾನಮ್(ಬೆಂಜಮೀನ್ ಬುಟ್ಟನ್)
 ಅತ್ಯುತ್ತಮ ವಸ್ತ್ರ ವಿನ್ಯಾಸ  ಮೈಕೇಲ್ ಒಕನರ್(ದ ಡಚ್ಚಸ್)
 ಅತ್ಯುತ್ತಮ ಮೂಲ ಚಿತ್ರಕಥೆ (Best original screenplay)  ಡಸ್ಟಿನ್ ಲಾನ್ಸ್ ಬ್ಲಾಕ್(ಮಿಲ್ಕ್)
 ಅತ್ಯುತ್ತಮ ಕಲಾ ನಿರ್ದೇಶಕ  ಡೊನಾಲ್ಡ್ ಗ್ರಹಾಂ, ವಿಕ್ಟರ್ ಜೋಲೊ
 ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರ  ಲಾ ಮೈಸಸ್ ಎನ್ ಪೆಟಿಸ್ ಕೂಬ್ಸ್
 ಅತ್ಯುತ್ತಮ ಅನಿಮೇಟೆಡ್ ಚಿತ್ರ  ವಾಲ್-ಇ
 ಅತ್ಯುತ್ತಮ ಡಾಕ್ಯುಮೆಂಟರಿ ಫ್ಯೂಚರ್  ಮ್ಯಾನ್ ಆನ್ ವೈರ್
 ಅತ್ಯುತ್ತಮ ವಿಜುಯಲ್ ಎಫೆಕ್ಸ್ಟ್  ದಕ್ಯೂರಿಯನ್ ಕೇಸ್ ಆಫ್ ಬೆಂಜಿಮಿನ್ ಬುಟ್ಟನ್
 ಅತ್ಯುತ್ತಮ ಧ್ವನಿ ಸಂಕಲನ  ದ ಡಾರ್ಕ್ ನೈಟ್

(ಏಜೆನ್ಸೀಸ್)

ಸ್ಲಂಡಾಗ್ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿಗಳ ಸುರಿಮಳೆ
ಪೂಕುಟ್ಟಿ ಪಡೆದ ಆಸ್ಕರ್ ದೇಶಕ್ಕೆ ಅರ್ಪಣೆ
ಸ್ಲಂ ಡಾಗ್ ಮಿಲಿಯನೇರ್ ಚಿತ್ರ ವಿಮರ್ಶೆ

English summary
movie slumdog millionaire, Osca,director danny boyle, a r rahman, Resul Pookutty,10 oscar nomination, best picture, actor brad pitt, actress kate winslet,

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada